Broadcast media ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಮಾಹಿತಿ ಪ್ರಸಾರ ಮತ್ತು ಪ್ರಕಟಿಸುವುದಕ್ಕೆ ಸಂಬಂಧಿಸಿ ಸುದ್ದಿ ಪ್ರಸಾರ ಹಾಗೂ ಡಿಜಿಟಲ್ ಮಾನದಂಡಗಳ ಪ್ರಾಧಿಕಾರ ಹೊಸ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಲಿಂಗತ್ವ ಅಲ್ಪಸಂಖ್ಯಾತರ ಕುರಿತು ರೂಢಿಯಲ್ಲಿರುವ ಅಭಿಪ್ರಾಯಗಳನ್ನು, ಪಕ್ಷಪಾತ ಉತ್ತೇಜಿಸುವ ಸುದ್ದಿಗಳನ್ನು ಪ್ರಸಾರ ಮಾಡಬಾರದು. ವ್ಯಕ್ತಿಯ ಲಿಂಗತ್ವ ಅಥವಾ ಲೈಂಗಿಕತೆ ಕುರಿತು ಅನುಮತಿ ಇಲ್ಲದೆ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ.
ಎಲ್ಲರನ್ನ ಒಳಗೊಳ್ಳುವ ಲಿಂಗ ತಟಸ್ಥ ಭಾಷೆಯನ್ನು ಬಳಸಬೇಕು. ವ್ಯಕ್ತಿ ಯು ಆದ್ಯತೆಯಂತೆ ಅವರ ಹೆಸರು ಇಲ್ಲವೇ ಸರ್ವನಾಮ ಬಳಸಬೇಕು. ತಪ್ಪು ವರದಿಗಳನ್ನು ಮಾಡುವುದರಿಂದ ಸಾಮಾಜಿಕವಾಗಿ ಆಗುವ ಪರಿಣಾಮಗಳು ಗಂಭೀರವಾಗಿರಲಿವೆ ಎಂದು ಪ್ರಾಧಿಕಾರ ತಿಳಿಸಿದೆ.
ಮಾರ್ಗಸೂಚಿಯಲ್ಲಿನ ಪ್ರಮುಖ ಅಂಶಗಳನ್ನು ಪಟ್ಟಿ ಮಾಡುವುದಾದರೆ,
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಕುರಿತು ರೂಢಿಗತ ಅಭಿಪ್ರಾಯಗಳು ಮುಂದುವರಿಯುವಂತೆ ಮಾಡುವಂತೆ ಮಾಡುವ ಸುದ್ದಿಗಳನ್ನು ಪ್ರಕಟಿಸಬಾರದು.
Broadcast media ವರದಿಗಾರಿಕೆಯು ಯಾವುದೇ ವಿಷಯವನ್ನು ನಾಟಕವಾಗಿಸಬಾರದು. ವೀಕ್ಷಕರಲ್ಲಿ ಆಘಾತ, ಭಯ ಹುಟ್ಟಿಸುವಂತಿರಬಾರದು.