protest ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಗ್ರಾಮ ಪಂಚಾಯತ್ ನೌಕರರು/ ಸಿಬ್ಬಂದಿಗಳು ತಮ್ಮ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ್ದಾರೆ.
protest ಹತ್ತು ಇಪ್ಪತ್ತು ವರ್ಷ ಸೇವೆ ಸಲ್ಲಿಸುತ್ತಿರುವ ಪಂಚಾಯತ್ ನೌಕರರಿಗೂ ಇಂದು ಸೇರಿದ ಪಂಚಾಯತ್ ನೌಕರರಿಗೂ ಒಂದೇ ತರ ಇರುವ ಕನಿಷ್ಠ ವೇತನ ಬದಲು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿಯೇ ಸಿ ಮತ್ತು ಡಿ ದರ್ಜೆಯ ವೇತನ ಶ್ರೇಣಿ ನಿಗಧಿಪಡಿಸಬೇಕು,
ವಿದ್ಯಾರ್ಹತೆ ಸಮಸ್ಯೆ ಇರುವ ಗ್ರಾಮ ಪಂಚಾಯತ್ ನೌಕರರಿಗೆ ಅನುಮೋದನೆ ನೀಡುವುದು, ರಾಜ್ಯದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸಾವಿರಾರು ಡಾಟ ಎಂಟ್ರೀ ಅಪರೇಟರ್ ಗಳ ನೇರ ನೇಮಕಾತಿ, ಗ್ರಾಮ ಪಂಚಾಯತ್ ನೌಕರರಿಗೆ ಆರೋಗ್ಯ ಭದ್ರತೆ, ವೈಧ್ಯಕೀಯ ನೆರವು, ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ನಂತರ ಜೀವನ ನಿರ್ವಹಣೆಗೆ ಸರಿಯಾದ ಆರ್ಥಿಕ ಭದ್ರತೆ, ಗ್ರಾಮ ಪಂಚಾಯತ್ ನೌಕರರ ವೃಂದದಿಂದ ಮುಂಬಡ್ತಿ ಹೀಗೆ ಹಲವಾರು ಬೇಡಿಕೆ ಈಡೇರಿಕೆಗೆ, ಡಾ. ದೇವಿ ಪ್ರಸಾದ್ ಬೊಲ್ಮ ರಾಜ್ಯಾಧ್ಯಕ್ಷರು
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಅರ ಡಿ ಪಿ ರಾಜ್ಯ ಸಮಿತಿ ಬೆಂಗಳೂರು ನೇತೃತ್ವದಲ್ಲಿ ಈ ಮುಷ್ಕರ ಆರಂಭವಾಗಿದೆ.