Police Department ಶಿವಮೊಗ್ಗ ನಗರದ ಡಿ ಎ ಆರ್ ಪೊಲೀಸ್ ಸಭಾ ಭವನದಲ್ಲಿ, ಶಿವಮೊಗ್ಗ ಜಿಲ್ಲಾ ಗೃಹರಕ್ಷಕ ದಳ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಜಿಲ್ಲೆಯ ಎಲ್ಲಾ ಗೃಹರಕ್ಷಕ ದಳದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಕಣ್ಣಿನ ಒಂದು ದಿನದ ಉಚಿತ ನೇತ್ರ ತಪಾಸಣಾ ಶಿಬಿರದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್ ಹಾಗೂ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಪ ಚಂದನ್ ಪಟೇಲ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ನಡೆದ ಶಿಬಿರದಲ್ಲಿ ಜಿಲ್ಲೆಯ ಗೃಹರಕ್ಷಕ ದಳದ ಸದಸ್ಯರು ಹಾಗೂ ಕುಟುಂಬ ಸದಸ್ಯರು ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದುಕೊಂಡರು,
ಶಿಬಿರದಲ್ಲಿ ಗೃಹರಕ್ಷಕ ದಳದ ಉಪ ಸಮಾದೇಷ್ಟ ಹಾಲಪ್ಪ ದಾವಣಗೆರೆ, ತರಬೇತಿ ಅಧಿಕಾರಿ ಹರೀಶ್ ಎಸ್ ಪಾಟೀಲ್, ಸೀನಿಯರ್ ಪ್ಲಟೂನ್ ಕಮಾಂಡರ್ ಶಿವಾನಂದಪ್ಪ, ಘಟಕಾಧಿಕಾರಿ ಶೋಭಾ, ಎನ್.ಸಿ.ಓ ಅಧಿಕಾರಿ ಮೂರ್ತಿ, ಚಂದ್ರಶೇಖರ್, ಚನ್ನವೀರಪ್ಪ Police Department ಗಾಮನಗಟ್ಟಿ, ಶಂಕರ್ ಕಣ್ಣಿನ ಆಸ್ಪತ್ರೆಯ ಡಾ|| ಉತ್ಕರ್ಷ ಹಾಜರಿದ್ದರು.
Police Department ಜಿಲ್ಲಾ ಗೃಹರಕ್ಷಕ ದಳದ ಆಶ್ರಯಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಯಶಸ್ವಿ
Date: