Tuesday, February 3, 2026
Tuesday, February 3, 2026

HS Sundaresh ಬೆಂಬಲಿಗರ ಹರ್ಷೋದ್ಗಾರದ ನಡುವೆಸ್ಬುಡಾ ಅಧ್ಯಕ್ಷರಾಗಿ ಸುಂದರೇಶ್ ಅಧಿಕಾರ ಸ್ವೀಕಾರ

Date:

HS Sundaresh ಸ್ಬುಡಾ ಅಧ್ಯಕ್ಷರನ್ನಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೇ ಬೃಹತ್ ರ್ಯಾಲಿ ನಡೆಸಿದ ನೂತನ ಸೂಡಾ ಅಧ್ಯಕ್ಷರು ಬೃಹತ್ ರ್ಯಾಲಿ ನಡೆಸಿ ಸೂಡಾ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಶಿವಮೊಗ್ಗ ನಗರದ ಎಂಆರ್ ಎಸ್ ವೃತ್ತದಿಂದ ತೆರದ ಜೀಪಿನಲ್ಲಿ ಮೆರವಣಿಗೆ ಹೊರಟ ಸುಂದರೇಶ್ ವಿದ್ಯಾನಗರ, ಹೊಳೆ ಬಸ್ ಸ್ಟಾಪ್ ಬಿಹೆಚ್ ರಸ್ತೆ, ಕಾಂಗ್ರೆಸ್ ಕಚೇರಿಗೆ ತಲುಪಿ ರಾಘವೇಂದ್ರ ಸ್ವಾಮಿ ಮಠದ ರಸ್ತೆಯ ಮೂಲಕ ಲಕ್ಷ್ಮಿ ಚಲನಚಿತ್ರ ಮಂದಿರ ಮಾರ್ಗವಾಗಿ ಸ್ಬುಡಾ ಕಚೇರಿ ತಲುಪಿದರು.

ಈ ವೇಳೆ ಹಾರತುರಾಯಿಗಳನ್ನು, ಮೈಸೂರು ಪೇಟವನ್ನು ಅಭಿಮಾನಿಗಳು ಕಾಂಗ್ರೆಸ್ ಪಕ್ಷದ ಮುಖಂಡರು ತೊಡಿಸುವ ಮೂಲಕ ಸಾಲು ಸಾಲಾಗಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಪಂ ಮಾಜಿ ಅಧ್ಯಕ್ಷ ಬಲ್ಕೀಷ್ ಭಾನು, ಡಾ. ಶ್ರೀನಿವಾಸ್ ಕರಿಯಣ್ಣ, ಉಪಾದ್ಯಕ್ಷರಾದ ಸ್ಮಾರ್ಟ್ ಲೋಕೇಶ್, ಚಂದ್ರಶೇಖರ್ ವಕೀಲ ನರಸಿಂಹ ಮೂರ್ತಿ (ಬಾಬಣ್ಣ), ಶ್ಯಾಮ್ ಸುಂದರ್, ಸೌಗಂದಿನಿ, ವಿಜಯಲಕ್ಷ್ಮೀ ಶಿಜುಪಾಶಾ, ಇಕ್ಕೇರಿ ರಮೇಶ್ ಹಾಗೂ ಇತರರು ಸಾಥ್ ನೀಡಿದರು.

HS Sundaresh ಸ್ಬುಡಾ ಅಧ್ಯಕ್ಷ ಸ್ಥಾನವನ್ನು, ನನಗೆ ಕಾಂಗ್ರಸ್ ಪಕ್ಷದ ಹೈಕಮಾಂಡ್ ನೀಡಿರುವುದು ಸಂತೋಷ ತಂದಿದೆ ಎಂದು ನೂತನ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಹೆಚ್. ಎಸ್. ಸುಂದರೇಶ್ ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...