Jawaharlal Nehru University ಹಂಪಿಯಲ್ಲಿ ಹೊನ್ನಮಳೆ ಸುರಿಸಿದ ಖ್ಯಾತಿ ವಿಜಯನಗರದ ವಿದ್ಯಾರಣ್ಯ ಗುರುಗಳದ್ದಾಗಿದೆ.
“ಭಾರತೀಯ ಜ್ಞಾನಪರಂಪರೆಯುಳ್ಳ ಸನಾತನ,ಧಾರ್ಮಿಕ ಆಧಾರಿತ ಶಿಕ್ಷಣ ಸಂಶೋಧನೆ ನಡೆಸುವ ಉದ್ದೇಶದಿಂದ ನವದೆಹಲಿಯ ಸಂಶೋಧನಾ ಸಂಸ್ಥೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ” ಎಂದು ಶೃಂಗೇರಿ ಶಂಕರಮಠದ ಮುಖ್ಯ ಸಲಹೆಗಾರ ವಿ.ಆರ್.ಗೌರಿಶಂಕರ್ ಹೇಳಿದ್ದಾರೆ.
Jawaharlal Nehru University ನವದೆಹಲಿ ಜೆಎನ್ ಯು ನಲ್ಲಿ ವಿದ್ಯಾರಣ್ಯ ಇನಸ್ಟಿಸ್ಟ್ಯೂಟ್ ಆಪ್ ನಾಲೆಜ್ ಅಂಡ್ ಅಡ್ವಾನ್ಸ್ ಸ್ಟಡೀಸ್ ನಲ್ಲಿ ವಿದ್ಯಾರಣ್ಯರ ಪ್ರತಿಮೆ ಅನಾವರಣ ಮಾಡಿ ಗೌರಿಶಂಕರ್ ಮಾತನಾಡಿದರು.
ವಿದ್ಯಾರಣ್ಯರ ಕುರಿತು ಹೆಚ್ಚಿನ ಅಧ್ಯಯನಕ್ಕೆ ಪ್ರೋತ್ಸಾಹ ನೀಡಲಾಗುವುದು .ಈಸಂಬಂಧ ಪೀಠಸ್ಥಾಪಿಸುವ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಜೆ ಎನ್ ಯು ಕುಲಪತಿ ಡಾ.ಶಾಂತಿಶ್ರೀ ಪಂಡಿತ್,ಸಂಸ್ಥೆಯ ನಿರ್ದೇಶಕ ಅಮಿತ್ ಶರ್ಮ ಮತ್ತು ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂಗಮೇಶ್ ಉಪಸ್ಥಿತರಿದ್ದರು.