Govt of Rajasthan ರಾಜಾಸ್ತಾನ್ ಸರ್ಕಾರದ ನಿಯಮಕ್ಕೆ ಸುಪ್ರೀಂ ಕೋರ್ಟ್
ಸಮ್ಮತಿ.
ನವದೆಹಲಿ.
ಸರ್ಕಾರಿ
ಉದ್ಯೋಗ ಬಯಸುವವರು ಎರಡಕ್ಕಿಂತ
ಹೆಚ್ಚು ಮಕ್ಕಳನ್ನು ಹೊಂದುವಂತೆ
ಇಲ್ಲ ಎಂದು ರಾಜಸ್ಥಾನ ಸರ್ಕಾರ
ರೂಪಿಸಿರುವ ನಿಯಮವು ತಾರತಮ್ಯಕ್ಕೆ
ಎಡೆಮಾಡಿಕೊಡುವುದಿಲ್ಲ, ನಿಯಮವು
ಸಂವಿಧಾನಕ್ಕೆ ವಿರುದ್ಧವಾಗಿಯೂ
ಇಲ್ಲ ಎಂದು ಸುಪ್ರೀಂ ಕೋರ್ಟ್
ಹೇಳಿದೆ.
‘ರಾಜಸ್ಥಾನ ಹಲವು ಸೇವೆಗಳ
(ತಿದ್ದುಪಡಿ) ನಿಯಮಗಳು
2001 ರ
ಅನ್ವಯ, ಎರಡಕ್ಕಿಂತ
ಹೆಚ್ಚು ಮಕ್ಕಳನ್ನು ಹೊಂದಿರುವವರು
ಸರ್ಕಾರಿ ಉದ್ಯೋಗಕ್ಕೆ ಅನರ್ಹರು,
ನಿಯಮವನ್ನು ಪ್ರಶ್ನಿಸಿ ನಿವೃತ್ತ ಯೋಧ
ರಾಮ್‌ಜಿ ಲಾಲ್ ಜಾಟ್ ಎನ್ನುವವರು
ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ
ಕೋರ್ಟ್ ವಜಾಗೊಳಿಸಿದೆ.
2002 ಜೂನ್ 1 ರ
ನಂತರ ಇಬ್ಬರಿಗಿಂತ ಹೆಚ್ಚಿನ ಮಕ್ಕಳನ್ನು
ಹೊಂದಿರುವವರು ಪೊಲೀಸ್ ನೌಕರಿಗೆ
ಅರ್ಹರಲ್ಲ ಎಂದು ರಾಜಸ್ಥಾನ ಪೊಲೀಸ್
ಅಧೀನ ಸೇವಾ ನಿಯಮ
ನಿಯಮ 24(4) ಕೂಡ ತಾರತಮ್ಯಕ್ಕೆ
ಎಡೆಮಾಡಿಕೊಡುವುದಿಲ್ಲ
19890
ಎಂದು
Govt of Rajasthan ನ್ಯಾಯಮೂರ್ತಿ ಸೂರ್ಯ ಕಾ೦ತ್
ನೇತೃತ್ವದ ಪೀಠವು ಹೇಳಿದೆ.
ನಿಯಮಗಳ ಕಾರಣದಿಂದಾಗಿ
ಪೊಲೀಸ್ ನೌಕರಿ ಸಿಗದೆ ಇದ್ದಾಗ ಜಾಟ್
ಅವರು ರಾಜಸ್ಥಾನ ಹೈಕೋರ್ಟ್‌ಗೆ
ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು
ಹೈಕೋರ್ಟ್ ಪುರಸ್ಕರಿಸಿರಲಿಲ್ಲ.
ಹೈಕೋರ್ಟ್ ತಾಳಿದ ನಿಲುವಿನಲ್ಲಿ
ಮಧ್ಯಪ್ರವೇಶ ಮಾಡಬೇಕಾದ ಅಗತ್ಯ
ಕಂಡುಬಂದಿಲ್ಲ ಎಂದು ಸುಪ್ರೀಂ
ಕೋರ್ಟ್ ಅಭಿಪ್ರಾಯಪಟ್ಟಿದೆ
Govt of Rajasthan ರಾಜಾಸ್ತಾನ್ ನಲ್ಲಿ ಮೂರು ಮಕ್ಕಳಿದ್ದವರಿಗೆ ಸರ್ಕಾರಿ ನೌಕರಿ ಇಲ್ಲ
Date: