Wednesday, February 4, 2026
Wednesday, February 4, 2026

Government Observatory ಸರ್ಕಾರಿ ವೀಕ್ಷಣಾಲಯದಿಂದ ಮೂವರು ಮಕ್ಕಳು ಪರಾರಿ

Date:

Government Observatory ಕಿಟಕಿ ಮುರಿದು ಸರ್ಕಾರಿ ವೀಕ್ಷಣಾಲಯದಲ್ಲಿದ್ದ ಮೂವರು ಮಕ್ಕಳು ಪರಾರಿಯಾಗಿರುವ ಘಟನೆ ಶಿವಮೊಗ್ಗದ ಆಲ್ಕೋಳ ಬಳಿ ನಡೆದಿದೆ.15 ರಿಂದ 17 ವರ್ಷದ ಶಿವಮೊಗ್ಗ, ಭದ್ರಾವತಿ, ಹಾಗೂ ಸಾಗರ ಮೂಲದ ಮೂವರು ಮಕ್ಕಳು, ರಾತ್ರಿ ವೀಕ್ಷಣಾಲಯದಲ್ಲಿನ ಶೌಚಾಲಯದಲ್ಲಿದ್ದ ಕಬ್ಬಿಣದ ಕಿಟಕಿ ಮುರಿದು ಪರಾರಿಯಾಗಿದ್ದಾರೆ.

ಫೆ.27 ರ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದೆ. ವೀಕ್ಷಣಾಲಯದ ಸಿಬ್ಬಂದಿ ಬಸ್ ಸ್ಟ್ಯಾಂಡ್, ರೈಲ್ವೇ ನಿಲ್ದಾಣ ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೂ ಮಕ್ಕಳು ಪತ್ತೆಯಾಗದ ಹಿನ್ನೆಲೆ ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Government Observatory ಮಕ್ಕಳು ಎಸ್ಕೇಪ್ ಆಗಿರುವುದರಿಂದಾಗಿ ಶಿವಮೊಗ್ಗದ ಸರ್ಕಾರಿ ವೀಕ್ಷಣಾಲಯದ ಅವ್ಯವಸ್ಥೆ ಬಹಿರಂಗವಾಗಿದೆ. ಮಕ್ಕಳನ್ನು ಸೂಕ್ತ ರೀತಿಯಿಂದ ನೋಡಿಕೊಳ್ಳಬೇಕಾದ ಘಟಕದಿಂದಲೇ ನಿರ್ಲಕ್ಷ್ಯ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಸ್ಥಳಿಯರು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಐಪಿಸಿ 363 ಕಾಯ್ದೆಯಡಿ 28/2024 ಕೇಸ್ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...