Wednesday, October 2, 2024
Wednesday, October 2, 2024

Truecaller ಟ್ರೂ ಕಾಲರ್ ನಂಥ ಸೇವೆಯನ್ನ ಟೆಲಿಕಾಂ ಕಂಪೆನಿಗಳೇ ಕಡ್ಡಾಯ ನೀಡಲುTRAI ಪ್ರಸ್ತಾವನೆ

Date:

Truecaller ಮೊಬೈಲ್‌ಗೆ ಕರೆ ಮಾಡುವ ಬಳಕೆದಾರರ ಹೆಸರನ್ನು ಸ್ಕ್ರೀನ್‌ ಮೇಲೆ ಪ್ರದರ್ಶಿಸುವ ಸೇವೆಯನ್ನು ಜಿಯೊ, ಏರ್‌ಟೆಲ್‌ನಂಥ ಟೆಲಿಕಾಂ ಕಂಪನಿಗಳು ಕಡ್ಡಾಯ ವಾಗಿ ನೀಡಬೇಕು ಎನ್ನುವ ಪ್ರಸ್ತಾವನೆಯನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್‌) ಸಿದ್ಧಪಡಿಸಿದೆ. ಈ ಪ್ರಸ್ತಾವನೆಗೆ ಟೆಲಿಕಾಂ ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ.ಸದ್ಯಕ್ಕೆ ಕರೆ ಮಾಡಿದ ವ್ಯಕ್ತಿಯನ್ನು ಗುರು ತಿಸಲು ಟ್ರೂಕಾಲರ್‌ನಂಥ ಆ್ಯಪ್‌ಗಳ ನೆರ ವನ್ನು ಪಡೆಯಬಹುದು.
ಇದರ ಬದಲಿಗೆ ಟೆಲಿಕಾಂ ಕಂಪನಿಗಳೇ ಆ ಸೇವೆಯನ್ನು ನೀಡ ಬೇಕು ಎನ್ನುವುದು ಟ್ರಾಯ್‌ ಒತ್ತಾಯ. ಇದ ರಿಂದ ಮೊಬೈಲ್‌ಗಳಲ್ಲಿನ ಹಣಕಾಸಿನ ವಂಚನೆ ಗಳಿಗೆ ತೆರೆ ಬೀಳಲಿದೆ ಎಂದು ಅಭಿಪ್ರಾಯಪ ಟ್ಟಿದೆ.ಟ್ರೂಕಾಲರ್‌ನಂತಹ ಅಪ್ಲಿಕೇಶ ನ್‌ಗಳು ಕ್ರೌಡ್‌-ಸೋರ್ಸ್‌ ಡೇಟಾವನ್ನು ಆಧರಿಸಿವೆ. ಇದು ಅನೇಕ ಸಂದರ್ಭಗಳಲ್ಲಿ ವಿಶ್ವಾಸಾರ್ಹ ವಾಗಿರುವುದಿಲ್ಲ ಎಂದು ಟ್ರಾಯ್‌ ಹೇಳಿದೆ. ಟ್ರಾಯ್‌ ಪ್ರಸ್ತಾವನೆಯನ್ನು ದೂರ ಸಂಪರ್ಕ ಇಲಾಖೆ ಅಂಗೀಕರಿಸಿದರೆ, ಟೆಲಿಕಾಂ ಕಂಪನಿ ಗಳು ಈ ಸೇವೆಯನ್ನು ಒದಗಿಸಬೇಕಾಗುತ್ತದೆ. ಈಗಾಗಲೇ ಮಾರುಕಟ್ಟೆ ಯಲ್ಲಿ ಪ್ರಾಬಲ್ಯ ಸಾಧಿಸಲು ಸ್ಪರ್ಧಾತ್ಮಕ ಬೆಲೆಯಲ್ಲಿ ಟೆಲಿಕಾಂ ಕಂಪನಿ ಗಳು ಸೇವೆ ನೀಡುತ್ತಿವೆ.
ಕಾಲರ್‌ಐಡಿ ಯಂಥ ಸೇವೆಗೆ ಇನ್ನಷ್ಟು ಸೌಕರ್ಯ ವ್ಯವಸ್ಥೆಗಳ ಅಗತ್ಯ ವಿದೆ. ಈ ಆರ್ಥಿಕ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಬೇಕಾಗಬಹುದು ಎಂಬುದು ಟೆಲಿಕಾಂ ಕಂಪನಿಗಳ ವಾದ. ಟೆಲಿಕಾಂ ಕಂಪನಿಗಳಿಗೆ ಸಿಎನ್ಎಪಿ ಫೀಚರ್ ಅಳವಡಿಕೆಯಿಂದ ತೊಂದರೆ ಏನು? ಸಿಮ್ ನೊಂದಣಿ ಮಾಡುವಾಗ ಪಡೆಯಲಾಗುವ ದಾಖಲೆಯ ಆಧಾರದ ಮೇಲೆ ವ್ಯಕ್ತಿಯ ಕರೆ ಗುರುತನ್ನು ಪಡೆಯಲು ಸಾಧ್ಯ. ಆದರೆ, ಕರೆ ಮಾಡಿದಾಗ ಆ ನಂಬರ್ನ ಮೂಲ ಪತ್ತೆಹಚ್ಚಲು ಡಾಟಾಬೇಸ್ನಿಂದ ಮಾಹಿತಿ ಪಡೆಯಲು ಒಂದಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ, ವ್ಯಕ್ತಿಯಿಂದ ವ್ಯಕ್ತಿಯ ಮೊಬೈಲ್ಗೆ ಕರೆ ಹೋದಾಗ ಅದು ತಲುಪುವುದು ವಿಳಂಬವಾಗಬಹುದು.

Truecaller ಇದು ಟೆಲಿಕಾಂ ಕಂಪನಿಗಳಿಗೆ ಇರುವ ಒಂದು ಆತಂಕ.ಹಾಗೆಯೇ, ಈ ಫೀಚರ್ ಅಳವಡಿಸಲು ಹೆಚ್ಚುವರಿ ಸೌಕರ್ಯ ವ್ಯವಸ್ಥೆ ನಿರ್ಮಿಸಬೇಕು. ಈಗಾಗಲೇ ಹೆಚ್ಚು ಲಾಭ ಕಾಣದೇ ಪರದಾಡುತ್ತಿರುವ ಟೆಲಿಕಾಂ ಕಂಪನಿಗಳಿಗೆ ಇನ್ನಷ್ಟು ಹೊರೆಯಾಗಬಹುದು. ಅಥವಾ ಗ್ರಾಹಕರಿಗೆ ಹೆಚ್ಚಿನ ಹೊರೆ ಹೊರಿಸಬೇಕಾಗಬಹುದು. ಅಂದರೆ ನಮ್ಮ ನಿಮ್ಮ ಮೊಬೈಲ್ ಬಿಲ್ ಇನ್ನೂ ಹೆಚ್ಚಾಗಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...

CM Siddharamaih ಸಿದ್ಧರಾಮಯ್ಯ ರಾಜಿನಾಮೆ ಬೇಡ.ಬೆಂಬಲಿಸಿ ಜನಜಾಥಾ-‘ಅಹಿಂದ’ ಮಹೇಶ್

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬೇಡ....