Friday, December 5, 2025
Friday, December 5, 2025

Sahyadri Chit Fund ಸಹ್ಯಾದ್ರಿ ಚಿಟ್ ಫಂಡ್ ಗೆ ರಾಜ್ಯಮಟ್ಟದ ಪ್ರಶಸ್ತಿ

Date:

Sahyadri Chit Fund ಶಿವಮೊಗ್ಗ ನಗರದ ಪ್ರತಿಷ್ಠಿತ ಸಂಸ್ಥೆ ಸಹ್ಯಾದ್ರಿ ಚಿಟ್ಸ್ ಪ್ರೈವೇಟ್‌ ಲಿಮಿಟೆಡ್ ಕಂಪನಿಗೆ ಪ್ರೈಡ್‌ ಇಂಡಿಯಾ ಅವಾರ್ಡ್ಸ್ ಸಂಸ್ಥೆಯು ಬೆಂಗಳೂರಿನ ತಾಜ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಎಕ್ಸಲೆನ್ಸ್ ಬಿಸಿನೆಸ್ ಅವಾರ್ಡ್ಸ್ ನಲ್ಲಿ 2024ನೇ ಸಾಲಿನ ಮೋಸ್ಟ್ ಟ್ರಸ್ಟೆಡ್‌ ಚಿಟ್ ಫಂಡ್ ಕಂಪನಿ ಪ್ರಶಸ್ತಿ ನೀಡಿ ಗೌರವಿಸಿದೆ.

ಶಿವಮೊಗ್ಗದಲ್ಲಿ 26 ವರ್ಷಗಳಿಂದ ಸತತವಾಗಿ ಸಂಸ್ಥೆಯು ಚಿಟ್ ಫಂಡ್ ನಡೆಸುತ್ತಿದ್ದು, ಹತ್ತು ಸಾವಿರಕ್ಕೂ ಹೆಚ್ಚು ಜನರಿಗೆ ಸೇವೆಯನ್ನು ಒದಗಿಸಿರುತ್ತದೆ. ಈ ಸಂಸ್ಥೆಯು ಇತ್ತೀಚೆಗೆ ದಾವಣಗೆರೆಯಲ್ಲಿಯೂ ಕೂಡ ಶಾಖೆಯನ್ನು ಆರಂಭಿಸಿದ್ದು, ಹಾಲಿ 2000 ಸದಸ್ಯರನ್ನು ಹೊಂದಿದ್ದು, ಅತ್ತ್ಯುತ್ತಮ ಸೇವೆಯನ್ನು ನೀಡುತ್ತಿದೆ. 25 ಕ್ಕೂ ಹೆಚ್ಚು ನುರಿತ ಸಿಬ್ಬಂದಿ ಇದ್ದಾರೆ. ಎಲ್ಲಾ ಸ್ತರದ ಜನರಿಗೂ ಅನುಕೂಲವಾಗುವಂತೆ ಒಂದು ಲಕ್ಷ ರೂ.ನಿಂದ ಒಂದು ಕೋಟಿ ರೂ. ವರೆಗೆ ಚೀಟಿಯನ್ನು ನಡೆಸುತ್ತಿದೆ.

ಪ್ರಶಸ್ತಿ ಬರಲು ಮುಖ್ಯ ಕಾರಣ ಸಂಸ್ಥೆಯು ಪಾರದರ್ಶಕವಾಗಿ ಸರ್ಕಾರದ ನಿಯಮಾನುಸಾರ ಚೀಟಿಯನ್ನು ನಡೆಸುತ್ತಿದ್ದು, ಚಂದಾದಾರರು ಸರಿಯಾದ ದಾಖಲೆಗಳನ್ನು ನೀಡಿದ ಏಳು ದಿನಗಳ ಒಳಗಾಗಿ ಹಣವನ್ನು ಮತ್ತು ಚೀಟಿ ತೆಗೆದುಕೊಂಡಿರುವ ಚಂದಾದಾರರಿಂದ ಸರಿಯಾದ ದಾಖಲೆಗಳನ್ನು (ಶ್ಯೂರಿಟಿ) ಪಡೆದಿರುವುದು.
ಲೆಕ್ಕಪತ್ರವನ್ನು ಸರಿಯಾದ ರೀತಿಯಲ್ಲಿ. ನಿರ್ವಹಿಸಿರುವುದು. ಕಾಲಕಾಲಕ್ಕೆ ಸರ್ಕಾರಕ್ಕೆ ಬೇಕಾಗಿರುವ ದಾಖಲೆಗಳನ್ನು ಒದಗಿಸಿರುವುದು. ಈ ಸಂಸ್ಥೆಯು 11 ಜನ ವಿವಿಧ ವಯೋಮಾನದ ಹಾಗೂ ವಿವಿಧ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿರುವ ನಿರ್ದೇಶಕರನ್ನು ಹೊಂದಿದ್ದು, ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದೆ.
ಪ್ರಶಸ್ತಿಯನ್ನು ಸ್ವೀಕರಿಸುವ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಟಿ.ಎಸ್.ಬದರಿನಾಥ್ ಅವರು ಯಶಸ್ಸಿಗೆ ಸಹಕರಿಸಿದ ಚಂದಾದಾರರು, ಸಿಬ್ಬಂದಿ ವರ್ಗದವರಿಗೂ ಮತ್ತು ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವ ಪ್ರೈಡ್ ಇಂಡಿಯಾ ಅವಾರ್ಡ್ ಸಂಸ್ಥೆಗೂ ಹಾಗೂ ಸಂಸ್ಥೆಯ ಎಲ್ಲಾ ನಿರ್ದೇಶಕರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿದರು.

Sahyadri Chit Fund ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ನಿರ್ದೇಶಕರಾದ ಜಿ.ವಿಜಯಕುಮಾರ್, ಸುನಿಲ್ ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...