Toll road ಮಾ.1 ರಿಂದ ಈ ಟೋಲ್ ಆರಂಭವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿದೆ.
ಈಗಾಗಲೇ ಪತ್ರಿಕಾ ಮಾಧ್ಯಮಗಳಲ್ಲಿ ಟೋಲ್ ಆರಂಭದ ಬಗ್ಗೆ ಸಾರ್ವಜನಿಕ ಪ್ತಕಟಣೆಯನ್ನ ಪ್ರಕಟಿಸಿ ಶಿವಮೊಗ್ಗ ತಾಲೂಕು ಕಲ್ಲಾಪುರ ಮತ್ತು ಶಿಕಾರಿಪುರ ತಾಲೂಕಿನ ಕುಂಟ್ರಳ್ಳಿ ಗ್ರಾಮದಲ್ಲಿ ಟೋಲ್ ನಿರ್ಮಿಸಿ ಮಾರ್ಚ್ 1 ರಂದು ಟೋಲ್ ಕಾರ್ಯಾರಂಭಿಸಲಿದೆ.
ಕಲ್ಲಾಪುರದಲ್ಲಿ ಕಾರು/ಜೀಪು/ವ್ಯಾನು ಲಘುವಾಹನಗಳಿಗೆ 35 ರೂ. ಏಕಮುಖ ಪ್ರಯಾಣಕ್ಕೆ, ದ್ವಿಮುಖ ಸಂಚಾರಕ್ಕೆ 55 ರೂ. ಮಾಸಿಕ ದರ 1245 ರೂ. ನಿಗದಿಪಡಿಸಲಾಗಿದೆ. ಬಸ್ ಮತ್ತು ವಾಣಿಜ್ಯ ವಾಹನ (ಎರಡು ಎಕ್ಸಲ್) ಗಳಿಗೆ ಏಕಮುಖ ಸಂಚಾರಕ್ಕೆ 125 ರೂ. ದ್ವಿಮುಖ ಸಂಚಾರಕ್ಕೆ 190 ರೂ. ಮಾಸಿಕ ಏಕಮುಖ 4205 ರೂ. ದರ ನಿಗದಿ ಪಡಿಸಿದರು.
ಲಘು ವಾಣಿಜ್ಯ ವಾಹನ, ಲಘು ಗೂಡ್ಸ್ ವಾಹನ ಮಿನಿಬಸ್ ಗೆ ಏಕಮುಖ ಸಂಚಾರಕ್ಕೆ 60 ರೂ. ದ್ವಿಮುಖ ವಾಹನಕ್ಕೆ 90 ರೂ. 2005 ರೂ. ತಿಂಗಳ ಮಾಸಿಕ ದರ ನಿಗದಿ ಪಡಿಸಲಾಗಿದೆ. ಇದು ಸಹ ಏಕಮುಖ ಸಂಚಾರಕ್ಕೆ ನಿಗದಿಪಡಿಸಲಾಗಿದೆ. ಬಸ್, ವಾಣಿಜ್ಯ ವಾಹನಗಳಿಗೆ ಏಕಮುಖ ಸಂಚಾರಕ್ಕೆ 130 ರೂ.
ದ್ವಿಮುಖ ಸಂಚಾರಕ್ಕೆ 195 ರೂ. ಮಾಸಿಕ ದರ ಏಕಮುಖ ಸಂಚಾರಕ್ಕೆ 4285 ರೂ. ನಿಗದಿ ಪಡಿಸಲಾಗಿದೆ. ಭಾರಿ ನಿರ್ಮಾಣ ಯಂತ್ರೋಪಕರಣ, ಅರ್ಥ್ ಮೂವಿಂಗ್, ಮೊದಲಾದ ವಾಹನಗಳ ಏಕಮುಖ ಸಂಚಾರಕ್ಕೆ 200 ರೂ. ದ್ವಿಮುಖ ಸಂಚಾರಕ್ಕೆ 295 ರೂ. ಮಾಸಿಕ ಏಕಮುಖ ಸಂಚಾರಕ್ಕೆ 6595 ರೂ. ನಿಗದಿ ಪಡಿಸಲಾಗಿದೆ.
ಭಾರಿ ಗಾತ್ರದ ವಾಹನಗಳಿಗೆ 240 ರೂ.(ಏಕಮುಖ ಸಂಚಾರಕ್ಕೆ) ದ್ವಿಮುಖ ಸಂಚಾರಕ್ಕೆ 360 ರೂ. ಮಾಸಿಕ ದರ 8030 ರೂ. ನಿಗದಿಪಡಿಸಲಾಗಿದೆ.
Toll road ಇದು ಶಿವಮೊಗ್ಗ ಮತ್ತು ಶಿಕಾರಿಪುರದ ನಡುವೆ ಬರುವ ಕಲ್ಲಾಪುರ ಗ್ರಾಮದ ಬಳಿಯ ಟೋಲ್ ದರವಾಗಿದೆ. ಈ ದರ ಶಿಕಾರಿಪುರ ಮತ್ತು ಕುಂಟ್ರಳ್ಳಿ ಗ್ರಾಮದ ಬಳಿ ಹೆಚ್ಚಾಗಲಿದೆ.
ದ್ವಿಚಕ್ರವಾಹನ ಸವಾರರು ಮಾಸಿಕ ದರ 220 ರೂ. ದರ ನಿಗದಿ ಪಡಿಸಲಾಗಿದೆ. ಹೆಚ್ಚಿನ ಮಾಹಿತಿಏನೆಂದರೆ ಈ ಟೋಲು ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಲ ಇದು ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದಿಂದ ನಿರ್ಮಿಸಲಾಗಿದೆ. ಈ ಟೋಲ್ ನ ಗುತ್ತಿಗೆಯನ್ನ ಬೆಂಗಳೂರಿನ ವಿನಯ್ ಲಾಡ್ ಅವರು ಹಿಡಿದಿದ್ದಾರೆ.