Kuvempu University ಶಂಕರಘಟ್ಟ : ಇಂದು ಶ್ರೀಮಂತರಾಗಲು ಎಲ್ಲರೂ ಬಯಸುತ್ತಾರೆ, ಹಣವಂತರಿಗೆ ಗೌರವ ನೀಡುತ್ತಾರೆ. ಆದರೆ ನೈತಿಕ ಹಾದಿಯಲ್ಲಿ ಸಿರಿವಂತರಾಗಿದ್ದಾರೆಯೇ ಎಂಬ ಬಗ್ಗೆ ಯಾರಿಗೂ ಗಮನವಿಲ್ಲವಾಗಿರುವುದು, ಅನೈತಿಕರಿಗೆ ಮನ್ನಣೆ ದೊರೆಯುತ್ತಿರುವುದು ಭ್ರಷ್ಟಾಚಾರ ಸರ್ವತ್ರವಾಗಲು ಕಾರಣ ಎಂದು ನಿವೃತ್ತ ನ್ಯಾಯಮೂರ್ತಿ ಮತ್ತು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.
ಶಿವಮೊಗ್ಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತುಕರ್ನಾಟಕರಾಜ್ಯ ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಂಡ್ಯ ಜಿಲ್ಲಾ ಘಟಕಗಳು ಜಂಟಿ ಸಹಯೋಗದಲ್ಲಿ ಕುವೆಂಪು ವಿವಿಯ ಬಸವ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ವಿಶ್ವ ಸಾಮಾಜಿಕ ನ್ಯಾಯ ಮತ್ತು ಹೆಣ್ಣುಮಕ್ಕಳ ಹಕ್ಕುಗಳು: ಕಾನೂನು ಅರಿವು’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದುರಾಸೆ, ಭ್ರಷ್ಟಾಚಾರ ಮಾಡಿ ಸಂಪತ್ಭರಿತರಾದವರು ಇನ್ನಷ್ಟು ಲಂಚ ಪಡೆಯುವುದು, ಸೋಮಾರಿತನ ಬೆಳೆಸುವುದು, ಅಧಿಕಾರ ಕೊಂಡುಕೊಳ್ಳುವುದು ಸೇರಿದಂತೆಎಲ್ಲ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊಎಸ್ ವೆಂಕಟೇಶ್, ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಂಜುನಾಥ್ ನಾಯಕ್, Kuvempu University ವಿವಿಯ ಕುಲಸಚಿವ ವಿಜಯಕುಮಾರ್ ಹೆಚ್ ಬಿ , ಪರೀಕ್ಷಾಂಗ ಕುಲಸಚಿವ ಎಸ್ ಎಂ ಗೋಪಿನಾಥ್, ಹಣಕಾಸು ಅಧಿಕಾರಿ ಜಿ ಬಂಗಾರಪ್ಪ ಹಾಜರಿದ್ದರು.
Kuvempu University ಭ್ರಷ್ಟಾಚಾರದಿಂದ ಸಂದ್ಭರಿತರಾದವರಿಂದಲೇ ಸಮಾಜದಲ್ಲಿ ಸಮಸ್ಯೆ ಸೃಷ್ಟಿ- ನ್ಯಾ.ಸಂತೋಷ ಹೆಗ್ಗಡೆ
Date: