Shivamogga City Corporation ಶಿವಮೊಗ್ಗ ನಗರ ರಭಸದಿಂದ ಬೆಳೆಯುತ್ತಿದೆ. ಹೊಸ ಹೊಸ ಬಡಾವಣೆಗಳು ಬಂದಿವೆ. ಆಕರ್ಷಕ ಮನೆಗಳು ನಿರ್ಮಾಣವಾಗುತ್ತಿವೆ.
ಸಮುದಾಯದ ಕುಟುಂಬಗಳಿಗೆ ಸ್ವಂತ ಮನೆ ಹೊಂದುವುದು ಸಂತೋಷದ ಸಂಗತಿ.
ಆದರೆ ಅದರ ಜೊತೆಯಲ್ಲೇ ಮೂಲಭೂತ ಸೌಕರ್ಯಗಳನ್ನೂ ನೀಡಬೇಕಾಗಿರುವುದು ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯ.
ಬಹಳಷ್ಟು ಬಡಾವಣೆಗಳು ಶಿವಮೊಗ್ಗದ ಅಂಚು ಅಥವಾ ಹೊರವಲಯದಲ್ಲಿ ಅಧೀಕೃತ ತಲೆ ಎತ್ತಿವೆ.ಈಗ ಸ್ಮಾರ್ಟ್ ಸಿಟಿ ಅಭಿವೃದ್ಧಿಯೂ ಸೇರಿಕೊಂಡಿದೆ.
ಸರ್ಕಾರ ಎಷ್ಟೆಲ್ಲಾ ಹಣ ಖರ್ಚು ಮಾಡಿ ಪ್ರಗತಿ ಮಾಡುತ್ತಿದೆ.
ಆದರೆ ಕೆಲವು ಬಡಾವಣೆಗಳಿಗೆ ಮೂಲಭೂತ ಸೌಕರ್ಯಗಳೇ ಇಲ್ಲ.
ಬೀದಿ ದೀಪಗಳಿದ್ದರೆ ಕುಡಿಯುವ ನೀರಿನ ಸಂಪರ್ಕವಿಲ್ಲ. ಎರಡೂ ಇದ್ದರೆ ರಸ್ತೆಗಳಿಲ್ಲ.
ಇದಕ್ಕೆ ಟಿಪಿಕಲ್ ಉದಾಹರಣೆಯಾಗಿ
ಸಾಗರ ರಸ್ತೆಯಲ್ಲಿಹರ್ಷ ದಿ ಫರ್ನ್ ಹೋಟೆಲ್ ಸನಿಹದ ಪುರದಾಳ್ ಕ್ರಾಸ್ ನಲ್ಲಿ ಕೃಷಿನಗರ, ಜಯಕಮಲ್ ಎನ್ ಕ್ಲೇವ್, ಪೊಲಿಸ್ ಲೇ ಔಟ್ ಮುಂತಾಗಿವೆ .
ಮನೆಗಳನ್ನ ಕಟ್ಟಿ ಕುಟುಂಬಗಳು ವಾಸಮಾಡುತ್ತಿವೆ.
ಜಲಜೀವನ್ ಮಿಷನ್ ಯೋಜನೆಯಡಿ ನೀರಿನ ಪೈಪುಗಳನ್ನ ಕಾಲುವೆ ತೋಡಿ ಹಾಕಿ ಮುಚ್ಚಿದ್ದಾರೆ. ಈಗ್ಯೆ ಸರಿಯಾಗಿ ಒಂದು ವರ್ಷದ ಮೇಲಾಯಿತು ನೀರೇ ಬಂದಿಲ್ಲ. ಅಲ್ಲಿನ ಕುಟುಂಬಗಳದ್ದು ಕರುಣಾಜನಕ ಸ್ಥಿತಿ ಆಗಿದೆ. ಬೀದಿದೀಪಗಳು ಇಲ್ಲದೇ ಅಲ್ಲೊನ ಕೆಲವು ಖಾಲಿ ನಿವೇಶನಗಳು ಕುಡುಕರು ಮತ್ತು ಅನೈತಿಕ ವ್ಯವಹಾರಗಳ ತಾಣವಾಗಿವೆ.
ಇತ್ತೀಚೆಗಂತೂ ಅಲ್ಲಿ ಒಂದು ಸೋಷಿಯಲ್ ಆರ್ಬರ್ ಎನ್ನುವ ಪಾರ್ಟಿಹಾಲ್ ಅಲ್ಲಿನ ಕುಟುಂಬಗಳ ನೆಮ್ಮದಿಗೇ ಭಂಗ ತಂದಿದೆ.ರಾತ್ರಿ ಹನ್ನೆರಡು ಗಂಟೆ ತನಕ ಡಿಜೆ ಮೈಕ್ ಅಬ್ಬರ. ಹೋಗಿ ಸೌಜನ್ಯದಿಂದ ಹೇಳಿದರೆ’ ನಾವು ಇನ್ನೂ ಒಂದು ವರ್ಷ ಇಲ್ಲೇ ಹೀಗೆ ಇರ್ತೀವಿ. ನೀವು ಬೇಕಾದ್ರೆ ಸ್ಟ್ರೈಕ್ ಮಾಡ್ಕಳಿ” ಎಂದ ಗರ್ವದ ಉತ್ತರ ನೀಡುತ್ತಾರೆ ಅಲ್ಲಿಯ ಮಾಲೀಕರಲ್ಲೊಬ್ಬರು.
ಈಗಾಗಲೇ ತುಂಗಾನಗರ ಪೊಲಿಸ್ ಠಾಣೆಗೆ ದೂರು ನಿಡಿದ್ದರೂ ಏನೂ ಉಪಯೋಗವಾಗಿಲ್ಲ.
112 ಪೊಲಿಸ್ ಸಹಾಯವಾಣಿಗೆ ರಾತ್ರಿ ಕರೆ ಮಾಡಿದರೆ ನಿಷ್ಠೆಯಿಂದ ಪೊಲೀಸ್ ವಾಹನ ಬರುತ್ತದೆ. ಆಗ ಮಾತ್ರ ಹತ್ತು ನಿಮಿಷ ಡಿಜೆ ಮೈಕ್ ಅಬ್ಬರ ತಗ್ಗುತ್ತದೆ
ಪೊಲೀಸ್ ವಾಹನ ಅಲ್ಲಿಂದ ಜಾಗ ಖಾಲಿ ಮಾಡಿದ ತಕ್ಷಣ ಮತ್ತೆ ಅದೇ ಅಬ್ಬರ ನಮ್ಮ ಎದೆ ನಡುಗಿಸುತ್ತದೆ.
ಇದಕ್ಕೆ ಕೊನೆಯೇ ಇಲ್ಲವೆ?
ಜಿಲ್ಲಾಧಿಕಾರಿಗಳಿಗೆ, ಎಸ್ ಪಿ ಅವರ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ.
ಈಗ ಒಂದೆರಡು ತಿಂಗಳಿಂದ ಈ ಪ್ರದೇಶದಲ್ಲಿ ಮನೆಗಳಲ್ಲಿ ಕಳ್ಳತನ ಪ್ರಕರಣಗಳೂ ನಡೆದಿವೆ. ಅನುಮಾನಾಸ್ಪದ ವ್ಯಕ್ತಿಗಳು ಕೈಯಲ್ಲಿ ಮಾರಣಾಂತಿಕ ಆಯುಧ ಹಿಡಿದು ಓಡಾಡುವುದು ವರದಿಯಾಗಿದೆ.
ಈ ಗಂಭೀರ ಪರಿಸ್ಥಿತಿಯಿಂದ ನಮ್ಮ
ಪಾಲಿಕೆ,ಜಿಲ್ಲಾಡಳಿತ
Shivamogga City Corporation ಇಲ್ಲಿ ವಾಸಿಸುತ್ತಿರುವ ಎಲ್ಲಾ ಕುಟುಂಬಗಳಿಗೂ ಅಭಯ ಹಸ್ತ ನೀಡಿದರೆ ನಮಗೆ ನೆಮ್ಮದಿ ಸಿಗಬಹುದು.