Tuesday, November 26, 2024
Tuesday, November 26, 2024

Pankaj Udhas “ಚಿಟ್ಟಿ ಆಯಿ ಹೈ ” ಗೀತೆ ಹಾಡಿ ರಸಿಕರ ಹೃದಯಗೆದ್ದ ಗಾಯಕ ಪಂಕಜ್ ಉದಾಸ್ ಇನ್ನಿಲ್ಲ

Date:

Pankaj Udhas ನಟ ಕಿಚ್ಚಾ ಸುದೀಪ್ ಅಭಿನಯದ ಚೊಚ್ಚಲ ‘ಸ್ಪರ್ಶ’ ಚಿತ್ರದ ‘ಚೆಂದಕ್ಕಿಂತ ಚೆಂದ ನೀನೆ ಸುಂದರ’ ಗೀತೆಯ ಗಾಯಕ ಪಂಕಜ್ ಉಧಾಸ್ ನಿಧನರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಗಾಯಕ ಪಂಕಜ್ ಉಧಾಸ್ ಅವರು, ಇಂದು ನಿಧನರಾಗಿದ್ದು, ಅವರಿಗೆ 72 ವರ್ಷವಾಗಿತ್ತು. ಪಂಕಜ್‌ ಅವರ ನಿಧನದ ಮಾಹಿತಿಯನ್ನು ಅವರ ಕುಟುಂಬ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ‘ದೀರ್ಘಕಾಲದ ಅನಾರೋಗ್ಯದಿಂದ ಫೆಬ್ರುವರಿ 26, 2024ರಂದು ಪಂಕಜ್ ಉಧಾಸ್‌ ಅವರು ನಿಧನರಾದರು. ಅವರ ನಿಧನದ ಬಗ್ಗೆ ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಉಧಾಸ್ ಅವರು ಮೇ 17, 1951 ರಂದು ಗುಜರಾತ್‌ನ ಜೆಟ್‌ಪುರದಲ್ಲಿ ಜನಿಸಿದರು. ಪ್ರಸಿದ್ಧ ಗಾಯಕರೂ ಆಗಿದ್ದ ಅವರ ತಂದೆ ಮನುಭಾಯ್ ಉಧಾಸ್ ಅವರಿಂದ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಪಾಠ ಕಲಿತರು. ಕಾಲೇಜಿನಲ್ಲಿ ಪದವಿ ಪಡೆದ ನಂತರ, ಪಂಕಜ್ ಬಾಲಿವುಡ್ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು. ಆದಾಗ್ಯೂ, ಅವರ ಅನನ್ಯವಾದ ಭಾವಪೂರ್ಣ ಧ್ವನಿಯು ಗಜಲ್ ಗಾಯನದಲ್ಲಿ ಅದರ ನಿಜವಾದ ಕರೆಯನ್ನು ಕಂಡುಕೊಂಡಿತು.
1980ರ ದಶಕದಲ್ಲಿ ಪಂಕಜ್​ ಉಧಾಸ್​ ಅವರು ಗಝಲ್​ ಗಾಯನದ ಮೂಲಕ ಫೇಮಸ್​ ಆಗಿದ್ದರು. ಬಳಿಕ ಅವರು ಚಿತ್ರರಂಗಕ್ಕೆ Pankaj Udhas ಕಾಲಿಟ್ಟರು. ಮಹೇಶ್ ಭಟ್ ಅವರ 1986 ರ ಕ್ರೈಮ್ ಥ್ರಿಲ್ಲರ್ ‘ನಾಮ್‌’ ಚಿತ್ರದ ‘ಚಿಟ್ಟಿ ಆಯಿ ಹೈ’ ಹಾಡು ಪಂಕಜ್‌ ಅವರ ಜನಪ್ರಿಯತೆಯನ್ನು ಹೆಚ್ಚಿಸಿತ್ತು. ಪಂಕಜ್‌ ಅವರು 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಹಿನ್ನೆಲೆ ಗಾಯಕರಾಗಿ ಪಂಕಜ್‌ ಹಾಡಿದ್ದಾರೆ. ಸ್ಪರ್ಶ ಚಿತ್ರದ ಬರೆಯದ ಮೌನ ಕವಿತೆ, ಚಂದಕ್ಕಿಂತ ಚಂದ ಹಾಡನ್ನು ಪಂಕಜ್‌ ಹಾಡಿದ್ದಾರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...