Department of Women and Child Welfare ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಪೋಸ್ಟ್ ಮಾಡಿರುವ ಶಿವಮೊಗ್ಗದ ಬಿಜೆಪಿ ಸೋಶಿಯಲ್ ಮೀಡಿಯಾ ಜವಾಬ್ದಾರಿ ವಹಿಸಿಕೊಂಡ ಶರತ್ ಕಲ್ಯಾಣಿ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಇಂಟಕ್ ಘಟಕದಿಂದ ಸೋಮವಾರ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಅಧ್ಯಕ್ಷೆ ಕವಿತಾ ರಾಘವೇಂದ್ರ ನೀಡಿದ ದೂರಿನಲ್ಲಿ, ಇತ್ತೀಚೆಗೆ ಸಿದ್ದರಾಮಯ್ಯನವರ ಸರ್ಕಾರ ಬಜೆಟ್ ಮಂಡಿಸುವ ಕುರಿತು ಅವರ ಮಂತ್ರಿಮAಡಲದ ಸಚಿವರು ಚರ್ಚೆ ಮಾಡುವಾಗ ಅದರ ವಿಡಿಯೋದ ತುಣುಕು ತೋರಿಸುವ ಜೊತೆಗೆ ಅದರ ಹಿನ್ನೆಲೆಯಾಗಿ ಒಂದು ಹೆಣ್ಣಿನ ಅಶ್ಲೀಲ ಧ್ವನಿಯನ್ನು ಜೋಡಿಸುವ ಮೂಲಕ ಶರತ್ ಅವಹೇಳನ ಮಾಡಿದ್ದಾನೆ. ಅವಮಾನಕಾರಿಯಾಗುವಂತೆ ಪೋಸ್ಟ್ ಹಾಕಿದ್ದಾನೆ. ಇದು ರಾಜ್ಯದ ಮುಖ್ಯಮಂತ್ರಿಗಳನ್ನು ಮತ್ತು ಸಚಿವ ಸಂಪುಟ ಸದಸ್ಯರನ್ನು ತೀರ ಮುಜುಗರ ಮಾಡುವಂತಹ ವಿಡಿಯೋವಾಗಿದೆ ಎಂದಿದ್ದಾರೆ.
Department of Women and Child Welfare ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ವೀಕ್ಷಿಸುವ ಮೂಲಕ ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿದ್ದಾರೆ. ಆದ್ದರಿಂದ ಈ ಕೂಡಲೇ ಶರತ್ ಕಲ್ಯಾಣಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ದೂರು ಸಲ್ಲಿಸುವ ವೇಳೆ ಸ್ಟೆಲ್ಲಾ ಮಾರ್ಟಿನ್, ಕವಿತಾ ಶ್ರೀನಿವಾಸ, ಸುವರ್ಣಾ ನಾಗರಾಜ, ಗ್ಲಾಡಿಸ್, ರೇಶ್ಮಾ, ಮೊದಲಾದವರು ಇದ್ದರು.
Department of Women and Child Welfare ಜಾಲತಾಣದಲ್ಲಿ ಅಶ್ಲೀಲತೆ ಧ್ವನಿ ಬೆರೆಸಿ ಸಿಎಂಗೆ ಅವಹೇಳನ: ಶಿವಮೊಗ್ಗ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥರ ವಿರುದ್ಧ ಕಾಂಗ್ರೆಸ್ ದೂರು
Date: