Friday, December 5, 2025
Friday, December 5, 2025

Death News ತೀರ್ಥಹಳ್ಳಿ ಮೂಲದ ಯುವ ಕ್ರಿಕೆಟ್ ಸ್ಟಾರ್ ಹೊಯ್ಸಳ ಹಠಾತ್ ಸಾವು

Date:

Death News ಕರ್ನಾಟಕದ ವೇಗದ ಬೌಲರ್ ಕೆ.ಹೊಯ್ಸಳ (35) ಕ್ರಿಕೆಟ್ ಪಂದ್ಯಾವಳಿ ವೇಳೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ಈ ಗುರುವಾರ ನಿಧನರಾಗಿದ್ದಾರೆ. ಅವರು ವಿಐಎಸ್​ಎಲ್​ ನಿವೃತ್ತ ಉದ್ಯೋಗಿಯಾಗಿರುವ ಡಾಕಪ್ಪರವರ ಅವರ ಪುತ್ರ. ಕೆ.ಹೊಯ್ಸಳ ಬೆಂಗಳೂರಿನ ಅಕೌಂಟ್​ ಜನರಲ್ ಆಫೀಸ್‌ನಲ್ಲಿ ಆಡಿಟರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಬೆಂಗಳೂರಿನ .ಎಂ.ಜಿ.ರಸ್ತೆಯ ಆರ್​ಎಸ್​ಐ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದಕ್ಷಿಣ ವಲಯದ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದ ಪರವಾಗಿ ಆಟವಾಡಿ ಗೆದ್ದ ಬಳಿಕ ಹಯ್ಸಳ ಡ್ರೆಸ್ಸಿಂಗ್ ರೂಂನಲ್ಲಿ ಕುಸಿದು ಬಿದ್ದಿದ್ದಾರೆ ಕೂಡಲೇ ಅವರನ್ನು ಬೌರಿಂಗ್ ಆಸ್ಪತ್ರೆಗೆ ಕೊಂಡೊಯ್ದಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.
ಭದ್ರಾವತಿಯಲ್ಲಿ ಕ್ರಿಕೆಟ್​ ಆಟ ಆರಂಭಿಸಿದ್ದ ಹಯ್ಸಳ ಅಲ್ಲಿಂದ ಚಿಕ್ಕಮಗಳೂರಿಗೆ ಹೈ ಎಜುಕೇಷನ್​ ಓದಲು ತೆರಳುತ್ತಾರೆ. ರಾಣಾಸ್ ಸ್ಫೋಟ್ಸ್​ ಕ್ಲಬ್​ನಲ್ಲಿ ಕ್ರಿಕೆಟ್ ಮುಂದುವರಿಸಿದ ಅವರು, ಶಿವಮೊಗ್ಗ ಜೋನ್​ನಲ್ಲಿ ಕ್ರಿಕೆಟ್ ಆಡಿದ್ದರು. ಅಲ್ಲಿಂದ ಬೆಂಗಳೂರು ತೆರಳಿ ಅಂಡರ್​ 23 ಸ್ಟೇಟಸ್​ನಲ್ಲಿ ಆಟವಾಡಿದ್ದರು. ಕರ್ನಾಟಕದ ಜೂನಿಯರ್ ತಂಡದ ಪರ ಆಡಿದ ಹೊಯ್ಸಳ ಕೆಪಿಎಲ್‌ನಲ್ಲಿ ಶಿವಮೊಗ್ಗ ಬಳ್ಳಾರಿ ತಂಡಗಳನ್ನು ಸಹ ಪ್ರತಿನಿಧಿಸಿದ್ದರು. ಆನಂತರ ಎಜಿಎಸ್​ ಗ್ರೂಪ್ ಸೇರಿಕೊಂಡಿದ್ದರು.
ಕ್ರಿಕೆಟ್​ನಲ್ಲಿ ಉತ್ತಮ ಹೆಸರು ಮಾಡಿದ್ದ ಎಲ್ಲರೊಂದಿಗೂ ಸ್ನೇಹದಿಂದ ಇದ್ದರು, ಅಲ್ಲದೆ ಅವರು ಟೀಂನಲ್ಲಿದ್ದರೇ ಮ್ಯಾಚ್​ ಗೆಲುವು Death News ಪಕ್ಕಾ ಎಂಬಂತ ಮಾತು ಕ್ರಿಕೆಟ್ ಟೀಂವಲಯದಲ್ಲಿತ್ತು. ಮೂಲತಃ ತೀರ್ಥಹಳ್ಳಿ ಆರಗದ ಕಡಗದ್ದೆಯವರಾದ ಹಯ್ಸಳರವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆದಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...