Transportation traffic ಅವ್ಯವಸ್ಥೆಯ ಆಗರವಾಗಿರುವ ನಗರದ ಸಕಾ೯ರಿ ಸಿಟಿ ಬಸ್ (ಜೆ-ನಮ್೯) ಹಾಗು ಆಟೋರಿಕ್ಷಾ ಮೀಟರ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚಚಿ೯ಸಲು ಅಣ್ಣಾ ಹಜಾರೆ ಹೋರಾಟ ಸಮಿತಿ ತೀಮಾ೯ನಿಸಿದೆ.
ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜರುಗಿದ ಅಣ್ಣಾ ಹಜಾರೆ ಹೋರಾಟ ಸಮಿತಿ ಕಾರ್ಯಕಾರಿ ಸಭೆಯಲ್ಲಿ ಸಿಟಿ ಬಸ್ ಹಾಗು ಆಟೋರಿಕ್ಷಾ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯ ಕುರಿತು ಚಚಿ೯ಸಲಾಯಿತು.
ಈ ಹಿಂದೆ ಅಣ್ಣಾ ಹಜಾರೆ ಹೋರಾಟ ಸಮಿತಿಯ ನಿರಂತರ ಹೋರಾಟದಿಂದ ಮಂಜೂರಾಗಿದ್ದ ಜೆ-ನಮ್೯ ಬಸ್ ಓಡಾಟ ಕ್ಷೀಣಿಸಿದ್ದು ಅತ್ಯಗತ್ಯವಾಗಿರುವ ಬಸ್ ನಿಲ್ದಾಣ, ರೈಲುನಿಲ್ದಾಣ ಹಾಗು ನಗರ ಪಾಲಿಕೆ ವ್ಯಾಪ್ತಿಯ ಜನನಿಬಿಡ ಬಡಾವಣೆಗಳಿಗೆ ಬಸ್ ಸೌಲಭ್ಯ ಇಲ್ಲದಿರುವುದರ ಬಗ್ಗೆ ಸಭೆಯಲ್ಲಿ ಚಚಿ೯ಸಲಾಯಿತು.
ಅದೇ ರೀತಿ ಹಲವಾರು ವಷ೯ಗಳ ಹೋರಾಟದ ಫಲವಾಗಿ ನಗರದ ಆಟೋರಿಕ್ಷಾಗಳಿಗೆ ರಾಜ್ಯ ಸಕಾ೯ರ ಹಾಗು ನಗರಪಾಲಿಕೆಗಳ ಲಕ್ಷಾಂತರ ರೂಪಾಯಿ ಅನುದಾನದಡಿ ಮೀಟರ್ ಅಳವಡಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಿನಿಮಮ್ ಫೇರ್ ನಿಗಧಿಪಡಿಸಲಾಗಿದ್ದರೂ ಅದೊಂದು ನಿಷ್ಫಲ ವ್ಯವಸ್ಥೆಯಾಗಿದೆ ಎಂದು ಸಭೆ ವಿಷಾದಿಸಿತು. ಅಣ್ಣಾ ಹಜಾರೆ ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಭೂಪಾಳಂ ಶಿವಸ್ವಾಮಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಗರದ ನಾಗರೀಕರ ಹಲವು ಸಮಸ್ಯೆಗಳ ಕುರಿತು ಚಚಿ೯ಸಲು ಸಮಯ ನಿಗಧಿ ಪಡಿಸುವಂತೆ ಸಲಹೆ ನೀಡಿದರು.
Transportation traffic ಆರಂಭದಲ್ಲಿ ಪ್ರಧಾನ ಕಾಯ೯ದಶಿ೯ ಶಿವಕುಮಾರ ಕಸೆಟ್ಟಿ ಸವ೯ರನ್ನು ಸ್ವಾಗತಿಸಿದರು ಉಪಾಧ್ಯಕ್ಷರುಗಳಾದ ಡಾ. ಶ್ರೀನಿವಾಸ್ ಬಿ. ಜನಮೇಜಿರಾವ್ ಸಂಘಟನಾ ಸಂಚಾಲಕ ಉಮೇಶ್ ಯಾದವ್, ಚಿದಾನಂದ, ಆರ್.ಟಿ. ನಟರಾಜ್, ತಿಪ್ಪಣ್ಣ, ಗೌಡರು, ನಾಗರಾಜ್, ಮಂಜುನಾಥ್, ಗೋಪಾಲ್, ಚನ್ನವೀರಪ್ಪ ಗಾಮನಗಟ್ಟಿ, ಇತರರು ಸಭೆಯಲ್ಲಿ ಮಾತನಾಡಿದರು ಕೊನೆಯಲ್ಲಿ ಕಾಯ೯ದಶಿ೯ ಸುಬ್ರಹ್ಮಣ್ಯ ವಂದಿಸಿದರು.