D. K. Shivakumar ವಿಧಾನಪರಿಷತ್ತಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಿಂದ ತಿರಸ್ಕೃತಗೊಂಡಿರುವ ಹಿಂದೂ ಧಾರ್ಮಿಕ ದತ್ತಿ ವಿಧೇಯಕಕ್ಕೆ ಮೂರು ತಿಂಗಳ ನಂತರ ಮೇಲ್ಮನೆಯಲ್ಲಿ ಕಾಂಗ್ರೆಸ್ ಗೆ ಮತ್ತೆ ಬಹುಮತ ಬಂದಾಗ ಅನುಮೋದನೆ ದೊರೆಯಲಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
D. K. Shivakumar ಶಿವಮೊಗ್ಗದ ಅಲ್ಲಮ ಪ್ರಭು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿಕೆ ಶಿವಕುಮಾರ್, ಅರ್ಚಕರ ಪ್ರಭಾವದಿಂದ ಭಕ್ತರು ಕಲ್ಲಿನಲ್ಲೂ ಶಿವನನ್ನು ಕಾಣುತ್ತಾರೆ. “ನಾವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಮಸೂದೆ ಮಂಡಿಸಿದ್ದೇವು. ಸರ್ಕಾರ ಈ ಶಾಸನ ಮೂಲಕ ದೊಡ್ಡ ದೇವಾಲಯಗಳಿಂದ ಬರುವ ಆದಾಯದ ಶೇ.10 ರಷ್ಟನ್ನು ಅರ್ಚಕರಿಗೆ ಸಂಬಳ ನೀಡಲು, ವಿಮಾ ರಕ್ಷಣೆ, ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು ಬಯಸಿತ್ತು. ಆದರೆ, ದೇವಸ್ಥಾನ ಮತ್ತು ಧರ್ಮದ ಪರ ವಾದಿಸುವ ಬಿಜೆಪಿ ಮತ್ತು ಜೆಡಿಎಸ್‌ಗಳು ಪರಿಷತ್ತಿನಲ್ಲಿ ಮಸೂದೆಯನ್ನು ಸೋಲಿಸಿದವು. ಮೂರು ತಿಂಗಳಲ್ಲಿ ಮೇಲ್ಮನೆಯಲ್ಲಿ ಬಹುಮತ ಪಡೆದು ಮಸೂದೆ ಮಂಡನೆ ಮಾಡುತ್ತೇವೆ ಎಂದು ಹೇಳಿದರು.