Saturday, December 6, 2025
Saturday, December 6, 2025

Sahachetana Natyalaya ಅಜಿತ್ ಕುಮಾರ್ ಕರ್ನಾಟಕದ ಮನೆಮನೆಗೆ ಸೇವೆಯ ದೀಪ ಪ್ರಜ್ವಲನೆ ಮಾಡಿದ ಧೀಮಂತ- ಪಟ್ಟಾಭಿರಾಂ

Date:

Sahachetana Natyalaya ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ದೇಶ ಸೇವೆಗೆ ಜಿಗಿದು ಕರ್ನಾಟಕ ಪ್ರಾಂತದಲ್ಲಿಯೇ ಮನೆಮನೆಗೆ ಸೇವೆಯ ದೀಪಪ್ರಜ್ವಲನೆ ಮಾಡಿದ ಧೀಮಂತ ನಮ್ಮ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಶ್ರೀ ಅಜಿತ್ ಕುಮಾರ್ ರವರು ಎಂದು ಆರ್ ಎಸ್ ಎಸ್ ನ ದಕ್ಷಿಣ ಪ್ರಾಂತ ಸಹಕಾರ್ಯವಾಹರಾದ ಶ್ರೀ ಟಿ. ಪಟ್ಟಾಭಿರಾಮರವರು ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ಸಹಚೇತನ ನಾಟ್ಯಾಲಯದ ವತಿಯಿಂದ ಜರುಗಿದ ಭಾರತೀಯಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಜಿತಶ್ರೀ ಪುರಸ್ಕಾರ್ 2023 ಪ್ರದಾನ ಮಾಡಿ ಮಾತನಾಡಿದರು.

ಇಲೆಕ್ಟ್ರಿಕಲ್ ಹಾಗೂ ಮೆಕ್ಯಾನಿಕಲ್ ಎರಡೂ ಇಂಜಿನಿಯರಿ0ಗ್ ಪದವಿಯಲ್ಲಿ ಚಿನ್ನದ ಪದಕ ವಿಜೇತರಾಗಿ, ತಂದೆ ತಾಯಿಗೆ ತಾವು ಜನ್ಮ ನೀಡಿದ ಆರು ಮಕ್ಕಳ ಮರಣದ ನಂತರ ಬದುಕುಳಿದ ಏಕೈಕ ಕುಲಪುತ್ರನಾಗಿದ್ದರೂ ಸೇವೆಯನ್ನೇ ತಮ್ಮ ಜೀವನದ ಧ್ಯೇಯವಾಗಿಸಿದ ಧೀಮಂತರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅವರ ತ್ಯಾಗಕ್ಕೆ ಹಾಗೂ ಶ್ರಮಕ್ಕೆ ನೀಡುತ್ತಿರುವ ಸೂಕ್ತ ಗೌರವ ಎಂದರು. ಸಹಚೇತನ ಸಂಸ್ಥೆ ಹಿಂದುಳಿದ ಬಡಾವಣೆಯ ಹಾಗೂ ಸರ್ಕಾರಿ ಶಾಲಾ ಮಕ್ಕಳಲ್ಲಿ ನೃತ್ಯದ ಮೂಲಕ ದೇಶಭಕ್ತಿ ಪ್ರೇರಿತ ಕೆಲಸಗಳನ್ನು ನಡೆಸುತ್ತಿರುವುದು ಅನುಕರಣೀಯ ಎಂದರು.

ತಾನೂ ಸಮಾಜದ ಒಂದು ಭಾಗ, ಸಮಾಜವು ನನ್ನ ಕುಟುಂಬದಷ್ಟೇ ಪ್ರಮುಖ ಎಂಬುದು ಮನವರಿಯಾದಾಗ ಮಾತ್ರ ನಮ್ಮ ಕೆಲಸಕ್ಕೆ ಒಂದು ಸಾರ್ಥಕತೆ ದೊರಕುತ್ತದೆ ಎಂದು ಸರ್ವರನ್ನೂ ಸ್ವಾಗತಿಸಿ ನೃತ್ಯಗುರು ಸಹನಾ ಚೇತನ್ ತಿಳಿಸಿದರು.

ಸೇವೆಯೊಂದೇ ಸಮಾಜದ ಬೇಡಿಕೆಗಳಿಗೆ ಸ್ಪಂದಿಸುವ ಬಗೆ ಎಂದು ತಮ್ಮ ಸೇವಾಕಾರ್ಯಗಳಿಂದ ತೋರಿಸಿಕೊಟ್ಟವರು ಅಜಿತರು ಎಂದು ಅಜಿತಶ್ರೀ ಪುರಸ್ಕಾರ್ ಪುರಸ್ಕೃತ ಯೋಗಾಚಾರ್ಯೆ ಶ್ರೀಮತಿ ವನಜಾಕ್ಷಿ ನಾಗೇಂದ್ರಪ್ಪ ನುಡಿದರು.

ನಮ್ಮ ಮುಂದಿನ ಪೀಳಿಗೆಯಲ್ಲಿ ಸಂಸ್ಕಾರಯುತ ಶಿಕ್ಷಣ ಈಗಿನಿಂದಲೇ ಬೆರೆತರೆ, ನಾಡು ನುಡಿಯ ಬಗ್ಗೆ ಗೌರವ ಮೊಳೆತರೆ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ಮಾತು ಸತ್ಯವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮತ್ತೋರ್ವ ಪುರಸ್ಕೃತರಾದ ಶ್ರೀ ಪಾಂಡುರ0ಗ ಹ. ಪರಾಂಡೆ ಹೇಳಿದರು. ಶ್ರೀ ಜ್ಞಾನೇಶ್ವರಿ ಗೋ ಶಾಲೆಯ ಅಧ್ಯಕ್ಷರಾದ ಚಂದ್ರಹಾಸ ಪಿ. ರಾಯ್ಕರ್ ಅಜಿತಶ್ರೀ ಪುರಸ್ಕಾರ್ ಸ್ವೀಕರಿಸಿ ಮಾತನಾಡಿ ಬಿಡಾಡಿ ಹಾಗೂ ವಯಸ್ಸಾಗಿರುವ ಗೋವುಗಳನ್ನು ಗೋ ಶಾಲೆಗೆ ತಂದು ಅವುಗಳ ಸ್ವಾಸ್ಥ್ಯ ರಕ್ಷಣೆ, ಪಾಲನೆ ಹಾಗೂ ಪೋಷಣೆಯಲ್ಲಿ ನಿರತರಾಗಿರುವ ನಮ್ಮ ಸಂಸ್ಥೆಗೆ ಅಜಿತರ ಆಶೀರ್ವಾದ ದೊರೆತಂತಾಗಿದೆ.

Sahachetana Natyalaya ಗೋಶಾಲೆಯ ಉತ್ತರೋತ್ತರ ಅಭಿವೃದ್ಧಿಗೆ ನಮ್ಮ ಸಂಸ್ಥೆ ಮತ್ತಷ್ಟು ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು. ಅಜಿತರಂತಹ ನಿಸ್ವಾರ್ಥ ಸೇವೆಯ ಬದುಕು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು. ಮಕ್ಕಳಲ್ಲಿನ ನೃತ್ಯದ ಬಗೆಗಿನ ಉತ್ಸಾಹ ರಾಷ್ಟ್ರಭಕ್ತಿಯಾಗಿ ಕಂಗೊಳಿಸಿದ ಬಗೆ ಅನುಕರಣೀಯ ಎಂದು ಡಾ. ನಾಗಮಣಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ನುಡಿದರು.

ಸಂಸ್ಥೆಯ ಅಧ್ಯಕ್ಷರಾದ ಎನ್. ಆರ್. ಪ್ರಕಾಶ್ (ಆಚಿ) ವಂದಿಸಿದರು. ಡಾ. ಮೈತ್ರೇಯಿ ಆದಿತ್ಯ ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...