Saturday, December 6, 2025
Saturday, December 6, 2025

Nitin Gadkari ರಸ್ತೆ ಅಗಲೀಕರಣ ಕಡಿತಲೆ ಮರಗಳ ಬದಲಿಗೆ ಸಸಿ ಬೆಳೆಸುವ ವೆಚ್ಚವನ್ನೂ ರಸ್ತೆ ನಿರ್ಮಾಣ ಬಜೆಟ್ ಗೆ ಸೇರಿಸಲು ಮನವಿ

Date:

Nitin Gadkari ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಹೆದ್ದಾರಿ ಅಗಲೀಕರಣ ವೇಳೆಯಲ್ಲಿ ಅನಿವಾರ್ಯವಾಗಿ ತೆರವುಗೊಳಿಸುವ ಮರಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚಿಸಿರುವ ಪರ್ಯಾಯ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ತೆರವುಗೊಳಿಸುವ ಮರಗಳ ಬದಲಿಗೆ ನಿಗದಿತ ಸಂಖ್ಯೆಗಳ ಗಿಡಗಳನ್ನು ನೆಟ್ಟು ಅವುಗಳನ್ನು ಐದು ವರ್ಷಗಳ ಕಾಲ ಆರೈಕೆ ನಿರ್ವಹಣೆ ಜವಾಬ್ದಾರಿ ಕಾರ್ಯವನ್ನು ರಸ್ತೆ ಅಗಲೀಕರಣ ಮೂಲ ಯೋಜನೆ ವೆಚ್ಚದಲ್ಲಿ ಸೇರಿಸಿ ಕಾರ್ಯಗತ ಮಾಡಬೇಕು.
ಈ ವಿಚಾರದಲ್ಲಿ ಸಂಬಂಧ ಪಟ್ಟ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇರದಂತೆ ನೋಡಿಕೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ಶ್ರೀ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ರಸ್ತೆಗಳ ಅಗಲೀಕರಣ ಕಾರ್ಯ ಯೋಜನೆ ಇರುವ ಬಗ್ಗೆ ತಿಳಿದುಬಂದಿದ್ದು, ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಸಂಕುಲಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಬದಲಿ ಗಿಡಗಳ ನೆಡುವಿಕೆಯಲ್ಲಿ ಇಂತಹ ಸ್ಥಳೀಯ ಜಾತಿಯ ಗಿಡಗಳನ್ನೇ ಬೆಳೆಸಬೇಕು. ಮಲೆನಾಡಿನ ಎಲ್ಲಾ ಹೆದ್ದಾರಿಗಳನ್ನು ಹಸಿರು ರಾಜಮಾರ್ಗವಾಗಿ ಪರಿಗಣಿಸಲು ಮತ್ತು ರಸ್ತೆ ನಿರ್ಮಿಸುವಾಗ ನದಿ ದಡ, ಕೆರೆ, ದಟ್ಟ ಅರಣ್ಯ, ನೀರಿನ ಮೂಲಗಳನ್ನು ಸಂರಕ್ಷಿಸುವಂತೆ ವಿನಂತಿಸಲಾಯಿತು.

Nitin Gadkari ಸಚಿವರ ಇಂದಿನ ಭೇಟಿ ವೇಳೆ ಪರಿಸರ ಕಾರ್ಯಕರ್ತರಾದ ಎಂ. ಶಂಕರ್, ಡಾ. ಶ್ರೀಪತಿ ಎಲ್.ಕೆ., ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ಅಜೇಯ್ ಕುಮಾರ ಶರ್ಮ, ಶ್ರವಣ್, ನವ್ಯಶ್ರೀ ನಾಗೇಶ್, ತ್ಯಾಗರಾಜ ಮಿತ್ಯಾಂತ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...