Thursday, March 19, 2026
Thursday, March 19, 2026

Bharat Scouts and Guides ಸ್ಕೌಟ್ ಸಂಸ್ಥಾಪಕ ಬೇಡನ್ ಪೊವೆಲ್ ದಂಪತಿಗಳ ಜನ್ಮ ದಿನಾಚರಣೆ

Date:

Bharat Scouts and Guides ಸ್ಕೌಟ್ಸ್ ಸಂಸ್ಥಾಪಕರಾದ ಬೇಡನ್ ಪೊವೆಲ್ ಹಾಗೂ ಲೇಡಿ ಬೇಡನ್ ಪೊವೆಲ್‌ರವರ ಜನ್ಮದಿನಾಚರಣೆ ಅಂಗವಾಗಿ ಇಂದು ಬೆಳಿಗ್ಗೆ ಸರ್ವ ಧರ್ಮ ಸಮ್ಮೀಲತೆಯ ಎತ್ತಿ ತೋರಿಸುವ ಸ್ಕೌಟ್ಸ್ ಗೈಡ್ಸ್ ಕಬ್ ಬುಲ್‌ಬುಲ್ ಗಳಿಂದ ಸರ್ವಧರ್ಮ ಪ್ರಾರ್ಥನೆಯನ್ನು ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಶ್ರೀಮತಿ ಭಾರತಿ ಡಾಯಸ್ ರವರ ನೆತ್ರತ್ವದಲ್ಲಿ ನಡೆಯಿತು.

ತದನಂತರ ಬೇಡನ್ ಪೋವೆಲ್ ಹಾಗೂ ಲೇಡಿ ಬೇಡನ್ ಪೋವೆಲ್ ರವರ ಜಿಲ್ಲಾ ಮಟ್ಟದ ರ‍್ಯಾಲಿಯನ್ನು ಜಿಲ್ಲಾ ಜಂಟಿ ಕಾರ್ಯದರ್ಶಿ ಶ್ರೀ ವೈ.ಆರ್.ವೀರೇಶಪ್ಪ ನವರು ಹಸಿರು ನಿಶಾನೆ ತೋರಿಸುವುದರ ಮೂಲಕ ಪಥಸಂಚಲನಕ್ಕೆ ಚಾಲನೆ ನೀಡಿದರು.

Bharat Scouts and Guides ಜಿಲ್ಲಾದ್ಯಂತದ 300 ಸ್ಕೌಟ್ಸ್ ಗೈಡ್ಸ್ ಮಕ್ಕಳೊಂದಿಗೆ ಬೇಡನ್ ಪೋವೆಲ್ ಹಾಗೂ ಲೇಡಿ ಬೇಡನ್ ಪೋವೆಲ್ ರವರ ಭಾವಚಿತ್ರದೊಂದಿಗೆ ಬ್ಯಾಂಡ್ ಸೆಟ್ ಮುಖಾಂತರ ನಗರದ ಮುಖ್ಯ ರಸ್ತೆಗಳಲ್ಲಿ ಪಥಚಂಚಲನ ಹೊರಟರು. ಈ ಸಮಾರಂಭಕ್ಕೆ ಜಿಲ್ಲಾ ಕಾರ್ಯದರ್ಶಿಯವರಾದ ಶ್ರೀ ಹೆಚ್. ಶಿವಶಂಕರ್, ಜಿಲ್ಲಾ ಸ್ಥಾನಿಕ ಆಯುಕ್ತರು ಶ್ರೀ ಜಿ. ವಿಜಯಕುಮಾರ, ಶಿವಶಂಕರ, ಎಲ್.ಎ.ಕಾರ್ಯದರ್ಶಿಗಳಾದ ಎ.ವಿ.ರಾಜೇಶ, ನಿಕ್ಸನ್ ಗೊನ್ಸಾಲ್ವಿಸ್, ವಿನಯ ಹೆಗಡೆ, ಆರ್.ಟಿ.ಶೇಖರಪ್ಪ, ಸ್ಕೌರ‍್ಸ್ ಗೈರ‍್ಸ್ ಗಳು ಪೊಷಕರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...