Protest ಅಬ್ಬಲಗೆರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೋಜಪ್ಪನ ಹೊಸೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಆಗ್ರಹಿಸಿ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಜಿಲ್ಲಾ ಪಂಚಾಯಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಖಾಲಿ ಕೊಡ ಮುಂದಿಟ್ಟುಕೊಂಡು ಮಹಿಳೆಯರು ಮತ್ತು ಸಂಘಟನೆಯವರು ಶುದ್ಧ ಕುಡಿಯುವ ನೀರಿಗಾಗಿ ಮತ್ತು ಬಾಕ್ಸ್ ಚರಂಡಿ ನಿರ್ಮಿಸಲು ಆಗ್ರಹಿಸಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ, ಫ್ಲೈ ಓವರ್ ಗಳಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಬೇಸರಿಸಿದರು.
ಮೋಜಪ್ಪನ ಹೊಸೂರು ಗ್ರಾಮದಲ್ಲಿ 300 ಮನೆಗಳಿದ್ದು ಕುಡಿಯುವ ನೀರಿಗಾಗಿ ಬೇರೆ ಬೇರೆ ಗ್ರಾಮಗಳಿಗೆ ತೆರಳಿ ಹೊತ್ತು ತರಬೇಕಿದೆ. ಅಧಿಕ ಮಳೆಯಾದಲ್ಲಿ ಮಳೆ ನೀರು ಹರಿದು ಹೋಗಲು ಬಾಕ್ಸ್ ಚರಂಡಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಹಲವು ಬಾರಿ ಪಿಡಿಒಗೆ ಮನವಿ ನೀಡಿದರೂ ಯಾವ ಪ್ರಯೋಜನವಾಗಿಲ್ಲ ಎಮದು ಹೇಳಿದರು.
Protest ವೇದಿಕೆ ಅಧ್ಯಕ್ಷ ಎಂ ಮುಕ್ಬೂಲ್ ಅಹಮದ್, ಗ್ರಾಮಾಂತರ ಘಟಕದ ಅಧ್ಯಕ್ಷ, ಹಬೀಬುಲ್ಲ, ದಾದಾ ಖಲಂದರ್, ಇಮ್ತೀಯಾಜ್ ಖಾನ್, ನಗರ ಅಧ್ಯಕ್ಷ ರಾಮಕೃಷ್ಣ, ಗೌಸ್ ಫೀರ್, ಅನ್ಸರ್ ಪಾಶಾ, ಸಯ್ಯದ ಜಬೀರ್, ತುಳಸಮ್ಮ, ಮುಬೀನಾ ಕೌಸರ್, ಹಾಗೂ ಗ್ರಾಮಸ್ಥರು ಉಪಸ್ಥಿತರು