DC Shivamogga ವಿದ್ಯಾನಗರದ 14 ನೇ ವಾರ್ಡಿನಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಬೇಕು ಎಂದು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ ಅವರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
14ನೇ ವಾರ್ಡಿನ ವಿದ್ಯಾನಗರ ಹಾಗೂ ಹೊಳೆಹೊನ್ನೂರು ರಸ್ತೆ ಈ ಭಾಗದಲ್ಲಿ ಮೇಲೆತುವೆ ನಿರ್ಮಾಣವಾಗಿದೆ. ಆದರೆ, ಈ ಕಾಮಗಾರಿ ಟೆಂಡರ್‌ನಲ್ಲಿಯೇ ಶಾಂತಮ್ಮ ಬಡಾವಣೆ, ಹೊಳೆಹೊನ್ನೂರು ರಸ್ತೆ, ಗರುಡ ಲೇಔಟ್ ಈ ಭಾಗದ ಸ್ಥಳೀಯರಿಗೆ ದಿನನಿತ್ಯ ಓಡಾಟಕ್ಕೆ ಅನುಕೂಲವಾಗುವಂತೆ ಕೆಳ ಸೇತುವೆಯನ್ನು ಗುರುಪುರ, ನಿರ್ಮಾಣ ಮಾಡಬೇಕು ಎಂದು ಮನವಿದಾರರು ಆಗ್ರಹಿಸಿದರು.
ಕೆಳಸೇತುವೆಗೆ ಸಂಬಂಧಿಸಿದಂತೆ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಆದರೆ ರೈಲ್ವೆ ಇಲಾಖೆ ಈ ಕಾಮಗಾರಿಯನ್ನು ಕೈಬಿಟ್ಟಿದೆ. ಇದರಿಂದ ಈ ಭಾಗದ ಜನರಿಗೆ ದಿನನಿತ್ಯ ಸಂಚಾರಕ್ಕೆ ತುಂಬ ತೊಂದರೆಯಾಗುತ್ತದೆ. ಆದ್ದರಿಂದ ತಕ್ಷಣವೇ ಕೆಳಸೇತುವೆಯನ್ನು ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಂದರ್ಭದಲ್ಲಿ ಪ್ರಮುಖರಾದ ರಂಗೇಗೌಡ, ಸತೀಶ್, ವಾಹಬ್ ಸಾಬ್, ವೆಂಕಟೇಶ್, ಮೋಹನ್. ಅಲ್ತಾಬ್, ಸುರೇಶ್, ಸಿದ್ದಣ್ಣ, DC Shivamogga ಶಾಂತಮ್ಮ, ಸಲೀಮ್, ರಾಜಶೇಖರ್, ಸೈಯ್ಯದ್ ಅಹಮ್ಮದ್, ಬೇಬಿ, ರಾಜು, ವೆಂಕಟೇಶ, ಲಕ್ಷ್ಮೀಕಾಂತ್ ಸೇರಿದಂತೆ ಹಲವರಿದ್ದರು.