Sankara Eye Hospital Shimoga 16 ರ ಸಂಭ್ರಮದಲ್ಲಿರುವ ನಗರದ ಹರಕೆರೆಯ ಶಂಕರ ಕಣ್ಣಿನ ಆಸ್ಪತ್ರೆಯು ನೂತನ ಯೋಜನೆ ಮಯೋಫಿಯಾ ಕ್ಲಿನಿಕ್ ಆರಂಭಿಸಲಿದೆ.
ಪ್ರೆಸ್ ಟ್ರಸ್ಟಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ಮುಖ್ಯ ವೈದ್ಯ ಡಾ!! ಮಹೇಶ್, ಮಯೋಫಿಯಾ ಕ್ಲಿನಿಕ್ ಬಗ್ಗೆ ವಿವರಣೆ ನೀಡಿದರು.
ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದರ ಚಿಕಿತ್ಸೆಯನ್ನು ಮಾಡುವ ಕ್ಲಿನಿಕ್ ಇದಾಗಿದೆ. ದೇಷ್ಟಿದೋಷದಲ್ಲಿ ದೂರದಲ್ಲಿರುವ ವಸ್ತುಗಳ ಬಿಂಬವು ಅಕ್ಷಿಪಟಲದ ಮೇಲೆ ಸರಿಯಾಗಿ ಮೂಡದೇ ರುವುದರಿಂದ ದೂರದ ವಸ್ತುಗಳು ಮಸುಕಾ ಗಿ ಕಾಣಿಸುತ್ತವೆ. ಇದು ವಂಶಪಾರಂಪರ್ಯವಾಗಿರಲೂಬಹುದು ಎಂದರು.
ಮಕ್ಕಳು ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರನ್ನು ಮತ್ತು ಮೊಬೈಲನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ , ಹೊರಾಂಗಣದಲ್ಲಿ ಆಡುವುದು ಕಡಿಮೆಯಾಗುತ್ತಿರುವುದರಿಂದ ದೃಷ್ಟಿ ದೋಷ ಹೆಚ್ಚಾಗುತ್ತಿದೆ ಎಂದ ಅವರು, ಈ ಚಿಕಿತ್ಸೆ 22ರ ಒಳಗಿನ ಮಕ್ಕಳಿಗೆ ಮಾತ್ರ ಅನ್ವಯವಾಗುತ್ತದೆ. ದೇಶದಲ್ಲಿ ಶೇ 20% ಮಕ್ಕಳಲ್ಲಿ ಈಗ ಈ ದೋಷವಿದೆ. 2050ರ ವೇಳೆಗೆ ಇದು ಶೇ. 48ರಷ್ಟು ಆಗುವ ಸಾಧ್ಯತೆ ಇದೆ ಎಂದರು.
Sankara Eye Hospital Shimoga ಈ ಹೊಸ ವಿಧಾನದಿಂದ ದೃಷ್ಟಿದೋಷದ ಪ್ರಮಾಣವನ್ನು ತಗ್ಗಿಸಬಹುದು. ಶಂಕರ ಆಸ್ಪತ್ರೆಯಲ್ಲಿ ಈ ಸೌಲಭ್ಯದ ಮೂಲಕ ದೃಷ್ಟಿಯ ಬೆಳವಣಿಗೆ ಪರಿಶೀಲಿಸಲಾಗುವುದು. ಇದರ ವಿಶೇಷ ಪ್ರಯೋಜನವನ್ನು ಪಡೆಯಬಹುದು ಎಂದರು.
ಈ ಯೋಜನೆಯ ಉದ್ಘಾಟನೆ ಫೆ. 23 ರಂದು ಆದಿಚುಂಚನಗಿರಿಯ ಪೀಠಾಧಿಪತಿ ನಿರ್ಮಲಾನಂದ ಸ್ವಾಮೀಜಿ ಉದ್ಘಾಟಿಸುವರೆಂದರು.
Sankara Eye Hospital Shimoga ಫೆ,23 ರಂದು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಮಕ್ಕಳಿಗೆ ದೃಷ್ಟಿದೋಷ ಪರೀಕ್ಷೆ- ಡಾ.ಮಹೇಶ್
Date: