Plastic pollution 15 ನೇ ಮೈಲಿಕಲ್ಲು, ಶಿಂಗನಬಿದರೆ, ಶಿವಮೊಗ್ಗ – ಉಡುಪಿ ಹೆದ್ದಾರಿಯ ಇಕ್ಕೆಲಗಳಲ್ಲಿ ಸಂಗ್ರಹವಾಗಿದ್ದ, ಪ್ಲಾಸ್ಟಿಕ್, ಗಾಜಿನ ಬಾಟಲಿಗಳು ಮತ್ತು ಇನ್ನಿತರ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಈ ಕಾರ್ಯದಲ್ಲಿ, ಕೀಗಡಿ ಯುವಕರ ಬಳಗ, ಸುಪ್ರೀಮ್ ಬಜಾಜ್, ಗ್ರೀನ್ ಲೈವ್ಸ್, ನೇಚರ್ ಫಸ್ಟ್, ಯೂತ್ ಫಾರ್ ಸೇವಾ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಕಟ್ಟೆ ಬಳಗ, ಇಳೆ, ಹಾಗೂ ಅಬಕಾರಿ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲೆಯ ಹೆಚ್ಚುವರಿ ಎಸ್ ಪಿ, ಅನಿಲ್ ಕುಮಾರ್ ಭೂಮರೆಡ್ಡಿ, ಅರಣ್ಯ ಇಲಾಖೆ ವನ್ಯಜೀವಿ, DFO ಪಸನ್ನ ಪಟೇದಾರ್, ಅರೇಕಾ ಚಹಾ ಸಂಸ್ಥಾಪಕರಾದ ನಿವೇದನ್ ನಿಂಪೆ, ಸುಪ್ರೀಮ್ ಬಜಾಜ್ ನ ವ್ಯವಸ್ಥಾಪಕರಾದ, ಪ್ರಭಾಕರ್, ಕೀಗಡಿ ಗ್ರಾಮಸ್ಥರು, ಇಳೆ ಸಂಸ್ಥೆಯ ಸಂಸ್ಥಾಪಕರಾದ ರಶ್ಮಿ, ಸುನೀಲ್, ಕಟ್ಟೆ ಬಳಗದ, ಸಂಜಯ್, ಸಾತ್ವಿಕ್ ಮತ್ತು ಹಲವಾರು ಪರಿಸರಪ್ರಿಯ ಸ್ವಯಂಸೇವಕರು ಸ್ವ ಇಚ್ಛೆಯಿಂದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು.
ಮುಂಜಾನೆ 7 ಕ್ಕೆ ಸರಿಯಾಗಿ ಪ್ರಾರಂಭವಾದ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳು ಹಾಗೂ ಇನ್ನಿತರೆ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು. ಒಟ್ಟು ಸಂಗ್ರಹವಾದ ತ್ಯಾಜ್ಯವೇ ಒಂದು ಟ್ರಾಕ್ಟರ್ ಲೋಡಿಗಿಂತಲೂ ಹೆಚ್ವಿತ್ತು. ನಂತರ ಕಟ್ಟೆಬಳಗದ, ಸಂಜಯ್ ಮತ್ತು ಸಾತ್ವಿಕ್ ರ ನೇತೃತ್ವದಲ್ಲಿ 15 ನೇ ಮೈಲಿಕಲ್ಲಿನ ಸಾರ್ವಜನಿಕ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿ ಸಂಪೂರ್ಣ ವರ್ಣಮಯಗೊಳಿಸಲಾಯಿತು.
ನಂತರ ನಡೆದ ಸಮಾರೋಪದಲ್ಲಿ ಮಾತನಾಡಿದ ಹೆಚ್ಚುವರಿ ಎಸ್ ಪಿ, ಅನಿಲ್ ಕುಮಾರ್ ಭೂಮರೆಡ್ಡಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪವು ಮೊದಲು ಮನೆಯಿಂದ ಶುರುವಾಗಬೇಕು, ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ಪೋಲೀಸ್ ಇಲಾಖೆಯು ಸಂಪೂರ್ಣ ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.
ನಂತರ ವನ್ಯಜೀವಿ ವಲಯ DFO, ಪಸನ್ನ ಪಟೆದಾರ್ ಮಾತನಾಡಿ, ಇಂತಹ ಪರಿಸರ ಸ್ನೇಹಿ ಕಾರ್ಯಕ್ರಮಗಳು ಪ್ರತಿಯೊಂದು ಗ್ರಾಮಗಳಲ್ಲೂ ನಡೆಯಬೇಕು, ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಅರಣ್ಯ ಮತ್ತು ವನ್ಯಜೀವಿಗಳ ಬಗೆಗೆ ಅರಿವನ್ನು ಮೂಡಿಸಿ, ಅವುಗಳ ಉಳಿವಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನಂತರ ಇಳೆ ಸಂಸ್ಥೆಯ ಸ್ಥಾಪಕರಾದ ರಶ್ಮಿ ರವರು ಮಾತನಾಡಿ, ಪರಿಸರಿದ ಉಳಿವಿಗೆ ಮತ್ತು ಪ್ಲಾಸ್ಟಿಕ್ ಉಪಯೋಗ ಕಡಿಮೆಗೊಳಿಸಲು, ನಮ್ಮ ಮನೆಯ ಮಕ್ಕಳಿಗೆ ಅಲ್ಲಿನ ಸ್ಥಳೀಯ ವಾತಾವರಣದಲ್ಲೇ ಅವಕಾಶಗಳನ್ನು ಕಲ್ಪಿಸಿಕೊಡಬೇಕು, ಇದರಿಂದ ಪರಿಸರದ ಅರಿವು ಮತ್ತು ಜಾಗೃತಿ ಉಂಟಾಗುತ್ತದೆ ಎಂದು ತಿಳಿಸಿದರು.
Plastic pollution ನಂತರದಲ್ಲಿ ಸ್ಥಳಿಯವಾಗಿ ಆರಿಸಿದ ಗಾಜಿನ ಬಾಟಲಿಗಳಿಗೆ ಕಟ್ಟೆ ಬಳಗದ ಸಂಜಯ್ ರವರ ನೇತೃತ್ವದಲ್ಲಿ ಸ್ಥಳದಲ್ಲೇ ಬಣ್ಣ ಹಚ್ಚಿ ಕಾರ್ಯಕ್ರಮದ ನೆನಪಿನ ಕಾಣಿಕೆಯಾಗಿ ನೀಡಲಾಯಿತು.