Saturday, November 23, 2024
Saturday, November 23, 2024

Klive Article ಗ್ರಾಹಕ ಸಂಸ್ಕೃತಿಗಿಂತ ನಾಗರೀಕ ಸಂಸ್ಕೃತಿ ಮುಖ್ಯ- ಎಚ್.ಕೆ.ವಿವೇಕಾನಂದ

Date:

Klive Article ಅಭಿವೃದ್ಧಿಯ ಪಥದಲ್ಲಿ ಭಾರತ….

ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ…..

ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕಾದ ಒಟ್ಟು ಆರ್ಥಿಕತೆಯ ಗಾತ್ರ 27 ಟ್ರಿಲಿಯನ್, ಎರಡನೇ ಸ್ಥಾನದಲ್ಲಿರುವ ಚೀನಾದ ಆರ್ಥಿಕತೆ 17 ಟ್ರಿಲಿಯನ್, ಮೂರನೆಯ ಸ್ಥಾನದಲ್ಲಿ ಜರ್ಮನಿ ಹಾಗು ನಾಲ್ಕನೆಯ ಸ್ಥಾನದಲ್ಲಿ ಜಪಾನ್ ಮತ್ತು ಐದನೆಯ ಸ್ಥಾನದಲ್ಲಿರುವ ಭಾರತದ ಎಕಾನಮಿ 4.1 ಟ್ರಿಲಿಯನ್….

ಅಮೆರಿಕಾದ ಒಟ್ಟು ಜನಸಂಖ್ಯೆ ಸುಮಾರು 33 ಕೋಟಿ, ಚೀನಾದ ಒಟ್ಟು ಜನಸಂಖ್ಯೆ 141 ಕೋಟಿ, ಭಾರತದ ಜನಸಂಖ್ಯೆ 143 ಕೋಟಿ ಆಸು ಪಾಸಿನಲ್ಲಿದೆ…..

ಅಮೆರಿಕಾದ ಒಟ್ಟು ಭೌಗೋಳಿಕ ವಿಸ್ತೀರ್ಣ 9.8 ಸ್ಕ್ವೇರ್ ಕಿಲೋಮೀಟರ್, ಚೀನಾದ ವಿಸ್ತೀರ್ಣ 9.6 ಸ್ಕ್ವೇರ್ ಕಿಲೋಮೀಟರ್, ಭಾರತದ ಒಟ್ಟು ವಿಸ್ತೀರ್ಣ ಸುಮಾರು 3.25 ಸ್ವ್ಕೇರ್ ಕಿಲೋಮೀಟರ್…

ಅಮೆರಿಕಾದ ತಲಾ ಆದಾಯ 70000 ಅಮೆರಿಕನ್ ಡಾಲರ್, ಚೀನಾದ ತಲಾ ಆದಾಯ ಸುಮಾರು 19000 ಡಾಲರ್,
ಭಾರತದ ತಲ ಆದಾಯ ಸುಮಾರು 7000 ಸಾವಿರ ಡಾಲರ್. ಅಂದರೆ ಇವುಗಳ ನಡುವಿನ ವ್ಯತ್ಯಾಸವನ್ನು ಗಮನಿಸಿ. ಭಾರತದ ಈಗಿನ ಪ್ರಧಾನಿಗಳ ಬಹುದೊಡ್ಡ ಗುರಿ ಭಾರತವನ್ನು ಐದು ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡಿ ವಿಶ್ವದಲ್ಲಿ ಮೂರನೆಯ ಬಹುದೊಡ್ಡ ಆರ್ಥಿಕತೆ ಮಾಡುವ ಕನಸನ್ನ ಹೊಂದಿದ್ದಾರೆ. ಇದು ಆರ್ಥಿಕ ದೃಷ್ಟಿಯಿಂದ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಆಲೋಚನೆ ನಿಜ ಆದರೆ ಇದರ ಇನ್ನೊಂದು ಮುಖ ಮತ್ತು ಇದಕ್ಕಾಗಿ ದೇಶದ ಜನತೆ ಮಾಡಬೇಕಾದ ತ್ಯಾಗ, ಶ್ರಮದ ಬಗ್ಗೆಯೂ ಕೂಡ ಸಣ್ಣದಾಗಿ ಗಮನಹರಿಸಬೇಕಿದೆ…

Klive Article ಮೊದಲನೆಯದಾಗಿ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹಾಗೆಯೇ ಪೂರ್ವ ಪಶ್ಚಿಮ ದಿಕ್ಕುಗಳಲ್ಲಿ ಸಹ ಪರಿಸರದ ಮೇಲೆ ಬಹುದೊಡ್ಡ ಒತ್ತಡ ಬೀಳುತ್ತಿದೆ. ಗಾಳಿ, ನೀರು, ಆಹಾರ, ಭೂಮಿಯ ಫಲವತ್ತತೆ, ಹೆಚ್ಚು ಕಡಿಮೆ ಮಲಿನವಾಗುತ್ತಿದೆ ಅಥವಾ ವಿಷಯವಾಗುತ್ತಿದೆ ಅಥವಾ ವಿನಾಶದ ಹಂಚಿಗೆ ತಲುಪುತ್ತಿದೆ….

ಎರಡನೆಯದಾಗಿ, ಇದರಿಂದಾಗಿ ಮನುಷ್ಯನ ದೇಹ ಮತ್ತು ಮನಸ್ಸುಗಳ ಮೇಲೆ ಸಹ ದುಷ್ಪರಿಣಾಮ ಬೀರಿ ಆತನ ಜೀವನನೋತ್ಸಾಹ ಮತ್ತು ಆರೋಗ್ಯದಲ್ಲಿ ಗಣನೀಯ ಬದಲಾವಣೆಗಳಾಗುತ್ತಿದೆ. ಯುವಶಕ್ತಿ ಖಂಡಿತವಾಗಿಯೂ ಎಲ್ಲರ ನಿರೀಕ್ಷೆಯ ಆ ಬಲಾಡ್ಯತೆಯನ್ನ ಕಳೆದುಕೊಳ್ಳುತ್ತಿದೆ…

ಮೂರನೆಯದಾಗಿ ಆಡಳಿತ ವ್ಯವಸ್ಥೆ, ವ್ಯಾಪಾರ ವ್ಯವಹಾರಗಳು ಅಥವಾ ವೃತ್ತಿಗಳು ಎಲ್ಲವೂ ಕೂಡ ಹಣ ಕೇಂದ್ರೀಕೃತವಾಗಿ ಕೆಟ್ಟ ಅನಾರೋಗ್ಯಕಾರಿ ಸ್ಪರ್ಧೆ ಹೆಚ್ಚಾಗಿ ಗುಣಮಟ್ಟವೂ ಸಹ ನಿರಂತರವಾಗಿ ಕುಸಿಯುತ್ತಿದೆ. ಹಣವೇ ಪ್ರಾಧಾನ್ಯತೆ ಹೊಂದಿರುವುದರಿಂದ ಸಹಜವಾಗಿಯೇ ಗ್ರಾಹಕ ಸಂಸ್ಕೃತಿ ತಲೆ ಎತ್ತಿ ಜನರ ಹಿತಾಸಕ್ತಿ ಸಂಪೂರ್ಣ ಕಡೆಗಣಿಸಲಾಗಿದೆ…

ನಾಲ್ಕನೆಯದಾಗಿ ಮಾನವೀಯ ಮೌಲ್ಯಗಳು ಅಂದರೆ ಪ್ರೀತಿ, ಸಹಕಾರ, ಸಂಯಮ, ಸಭ್ಯತೆ, ತಾಳ್ಮೆ, ಕ್ಷಮಾಗುಣ, ಕರುಣೆ ಈ ಎಲ್ಲವೂ ಕೂಡ ವ್ಯಾಪಾರಿಕರಣವಾಗಿ ಮನುಷ್ಯ ಸಂಬಂಧಗಳು ಆ ಗಟ್ಟಿತನವನ್ನು, ಆ ಆತ್ಮೀಯತೆಯನ್ನು, ಆ ಪ್ರೀತಿಯನ್ನು ಕಳೆದುಕೊಳ್ಳುತ್ತಿವೆ. ಇದಕ್ಕೆ ಮೂಲ ಕಾರಣ ಕೇವಲ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದೇ ಮುಖ್ಯ ಗುರಿಯಾಗಿರುವುದರಿಂದ.

ಇದರ ಜೊತೆಗೆ ಐದನೆಯದಾಗಿ ಈ ಐದು ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಬೇಕಾದರೆ ತೆರಿಗೆಗಳು ಎಲ್ಲಾ ರೀತಿಯ ತೆರಿಗೆಗಳನ್ನು ಸಹ ಹೆಚ್ಚು ಮಾಡಲೇಬೇಕಾಗಿದೆ. ಬೆಲೆ ಏರಿಕೆ ಹೆಚ್ಚು ಆಗಲೇಬೇಕು, ಮಧ್ಯಪಾನದ ಅಥವಾ ಆ ರೀತಿಯ ಅಮಲಿನ ಪದಾರ್ಥಗಳ ಬೆಳವಣಿಗೆಯನ್ನು ತಡೆಯುವುದು ಕಷ್ಟವಾಗುತ್ತದೆ, ಆನ್ಲೈನ್ ಗೇಮಿಂಗ್ ಅಥವಾ ಜೂಜು ಕ್ರೀಡೆಗೂ ಸಹ ಮಾನ್ಯತೆ ಕೊಡಬೇಕಾಗುತ್ತದೆ. ಶ್ರಮಪಟ್ಟು ಅಥವಾ ಮೌಲ್ಯಯುತವಾಗಿ ಐದನೆಯ ಸ್ಥಾನಕ್ಕೆ ಬರಬೇಕೆಂದರೆ ಈಗಿನ ಜಾಗತೀಕರಣದ ಸ್ಥಿತಿಯಲ್ಲಿ ಅಷ್ಟು ಸುಲಭವಲ್ಲ. ಮನುಷ್ಯರನ್ನು ಗ್ರಾಹಕರು ಎಂದು ಭಾವಿಸಿಯೇ ಸಾಮಾನ್ಯ ಜನರನ್ನು ಹೆಚ್ಚು ಗೊಂದಲಗೊಳಿಸುವ ಅಥವಾ ಶೋಷಿಸುವ ಮೂಲಕ ಈ ಅಭಿವೃದ್ಧಿ ಸಾಧಿಸಬೇಕಾಗುತ್ತದೆ. ಇದು ಎಷ್ಟರಮಟ್ಟಿಗೆ ದೇಶದ ಸುಸ್ಥಿರ ಹಿತಾಸಕ್ತಿಯನ್ನು ಕಾಪಾಡುತ್ತದೆ ಎನ್ನುವ ಪ್ರಶ್ನೆ ನಮ್ಮನ್ನು ನಾವೇ ಕೇಳಿಕೊಳ್ಳಬೇಕು…..

ಶಿಕ್ಷಣ ಮತ್ತು ಆರೋಗ್ಯ ಈ ದೇಶದಲ್ಲಿ ತಲುಪುತ್ತಿರುವ ಸ್ಥಿತಿಯನ್ನು ನೋಡಿದರೆ ಭವಿಷ್ಯ ನಿಜಕ್ಕೂ ಆತಂಕವನ್ನು ಉಂಟುಮಾಡುತ್ತದೆ. ಶಿಕ್ಷಣ ಸಂಪೂರ್ಣ ವ್ಯಾಪಾರಿಕರಣವಾಗಿದೆ, ಶೈಕ್ಷಣಿಕ ಗುಣಮಟ್ಟ ಬಹುತೇಕ ಅಂಕಗಳನ್ನೇ ಆಧರಿಸಿ ಮುನ್ನಡೆಯುತ್ತಿದೆ, ಈ ಸ್ಪರ್ಧಾತ್ಮಕ ಪರೀಕ್ಷೆಗಳು ಯುವಕರಲ್ಲಿ ಹತಾಶ ಮನೋಭಾವವನ್ನು ಅಥವಾ ಅಸಹಾಯಕತೆಯನ್ನು ಸೃಷ್ಟಿ ಮಾಡಿ ಅವರನ್ನು ಬಲಿಪಶುಗಳನ್ನಾಗಿ ಮಾಡುತ್ತಿದೆ. ಅದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ರಾಜಸ್ಥಾನದ ಕೋಟಾದಲ್ಲಿ ನೀಟ್ ಪರೀಕ್ಷೆಗೆ ಸಿದ್ಧವಾಗಲು ಓದುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಘಟನೆಗಳನ್ನು ನೋಡಿದಾಗ ಇದು ಇತರ ಪ್ರದೇಶಗಳಿಗೂ ಹರಡಬಹುದೇನೋ ಅನ್ನುವ ಅನುಮಾನ ಉಂಟಾಗುತ್ತದೆ.

ಇನ್ನು ಆರೋಗ್ಯ ಕ್ಷೇತ್ರ ಊಹೆಗೂ ನಿಲುಕದಂತೆ ಬೆಳವಣಿಗೆ ಮತ್ತು ಅಧಃಪತನ ಏಕಕಾಲದಲ್ಲಿ ಉಂಟಾಗುತ್ತಿದೆ. ವಿಪರೀತ ಜನಸಂಖ್ಯೆ ಹಾಗೆ ವಿವಿಧ ಅನಾರೋಗ್ಯಗಳು ಅದೇ ಸಮಯದಲ್ಲಿ ಮನುಷ್ಯರು ಆಸ್ಪತ್ರೆಗಳಿಗೂ ಸಹ ಗ್ರಾಹಕರೇ ಆಗುತ್ತಿದ್ದಾರೆ. ರೋಗಿಗಳಿಗಿಂತ ಹೆಚ್ಚಾಗಿ ಗ್ರಾಹಕ ಸಂಸ್ಕೃತಿ ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಸೃಷ್ಟಿಯಾದರೆ ನಿಜಕ್ಕೂ ಈ ನೆಲಕ್ಕೆ ಅದನ್ನು ಅರಗಿಸಿಕೊಳ್ಳುವುದು ತುಂಬಾ ಕಷ್ಟ. ಮನುಷ್ಯನ ಅಥವಾ ಸಮಾಜದ ಅಥವಾ ದೇಶದ ಯಾವುದೇ ಅಭಿವೃದ್ಧಿ ಆತನ ಜೀವನ ಮಟ್ಟವನ್ನು ಹೆಚ್ಚಿಸುವಂತಿರಬೇಕು, ಆತನ ಸಂತೋಷ ನೆಮ್ಮದಿ ಉತ್ತಮವಾಗಿರುವಂತಿರಬೇಕು, ಅಸಮಾಧಾನ, ಅತೃಪ್ತಿ, ಅನಾರೋಗ್ಯ ಖಂಡಿತವಾಗಿಯೂ ದೇಶ ವಿಶ್ವಮಟ್ಟದಲ್ಲಿ ಆರ್ಥಿಕತೆವಾಗಿ ಮೂರನೇ ಸ್ಥಾನಕ್ಕೆ ತಲುಪಿದರು ಸಹ ಅಂತಹ ದೊಡ್ಡ ಪ್ರಯೋಜನವಾಗುವುದಿಲ್ಲ. ಅಧಿಕೃತವಾಗಿ ಹೆಸರಿಗೆ ಒಂದು ಸಾಧನೆ ಆಗಬಹುದೇ ಹೊರತು ಆಳದಲ್ಲಿ ಅದರಿಂದ ದುಷ್ಪರಿಣಾಮಗಳು ಹೆಚ್ಚು.

ಹಾಗೆಂದು ನಿರಾಶರಾಗಬೇಕಿಲ್ಲ. ಆದರೆ ಈ ಆರ್ಥಿಕ ಅಭಿವೃದ್ಧಿಯ ಜೊತೆ ಈಗ ವಿನಾಶದ ಅಂಚಿನಲ್ಲಿರುವ ಪರಿಸರ, ಪ್ರಜಾಪ್ರಭುತ್ವ, ಮಾನವೀಯ ಮೌಲ್ಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ವ್ಯಾವಹಾರಿಕವಾಗಿ ಕೇವಲ ಲಾಭ ಚಿಂತನೆ ಮಾಡಬಹುದು. ಆದರೆ ಅದರಲ್ಲಿ ದ್ರೋಹ ಚಿಂತನೆ ಅಥವಾ ವಂಚನೆ ಇರಬಾರದು. ಗ್ರಾಹಕ ಸಂಸ್ಕೃತಿಗಿಂತ ನಾಗರಿಕ ಸಂಸ್ಕೃತಿ ಮುಖ್ಯವಾಗಬೇಕು….

ಪ್ರಬುದ್ಧ ಮನಸ್ಸು ಪ್ರಭುದ್ಧ ಸಮಾಜ, ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ, ವಿವೇಕಾನಂದ ಎಚ್. ಕೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...