Friday, December 5, 2025
Friday, December 5, 2025

Shree Swarnavalli Matha ಸೋಂದಾ ಸ್ವರ್ಣವಲ್ಲಿ ಮಠಕ್ಕೆ ನೂತನ ಶಿಷ್ಯ ಸ್ವೀಕಾರ ಮಹೋತ್ಸವ

Date:

Shree Swarnavalli Matha ಶಿರಸಿಯ ಸೋಂದಾ ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವದ ಪೂರ್ವಭಾವಿಯಾಗಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, 22ರಂದು ಶಿಷ್ಯ ಸ್ವೀಕಾರ ನಡೆಯಲಿದೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಜಿಲ್ಲಾ ಹವ್ಯಕ ಮಾಜಿ ಅಧ್ಯಕ್ಷ, ನ್ಯಾಯವಾದಿ ಅಶೋಕ ಜಿ. ಭಟ್ಟ, ಅಂದು ಬೆಳಗ್ಗೆ ಕಾಷಾಯ ವಸ್ತ್ರ ಧಾರಣೆ, ಮಹಾವಾಕ್ಯೋಪದೇಶ, ನಾಮಕರಣ, ಯೋಗಪಟ್ಟ, ಬ್ರಹ್ಮ ವಿದಾಶೀರ್ವಚನ ನಡೆಯಲಿದೆ ಎಂದರು. ಹಾಲಿ ಪೀಠಾಧಿಪತಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ನಾಗರಾಜ ಭಟ್ಟ ಎನ್ನುವ ಶಿಷ್ಯ ನನ್ನು ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ 4 ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮ‌ ನಡೆಯುತ್ತಿದೆ ಎಂದರು. 22ರಂದು ಮಧ್ಯಾಹ್ನ 3.30ಕ್ಕೆ ಸಭಾ ಕಾರ್ಯಕ್ರಮ‌ ನಡೆಯಲಿದೆ. ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದರು, ಎಡನೀರುಮಠದ ಸಚ್ಚಿದಾನಂದ ಸ್ವಾಮೀಜಿ, ಕಾಂಚಿಪುರಂನ ಆತ್ಮಬೋಧ ತೀರ್ಥರು, ಸಹಜಾನಂದ ತೀರ್ಥರು, ಅಂಜನಾನಂದ ತೀರ್ಥರು, ಯಡತೊರೆಯ ಶಂಕರಭಾರತಿ ಸ್ವಾಮೀಜಿ, ನೆಲೆಮಾವಿನ ಮಾಧವಾನಂದ ಭಾರತೀ ಸ್ವಾಮೀಜಿ, ಕೂಡ್ಲಿ ಶೃಂಗೇರಿಮಠದ ವಿದ್ಯಾವಿಶ್ವೇಶ್ವರತೀರ್ಥರು ಮೊದಲಾದವರು ಸಾನಿಧ್ಯ ವಹಿಸುವರೆಂದರು.
Shree Swarnavalli Matha ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅತಿಥಿಯಾಗಿರುವರು ಎಂದು‌ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...