Tuesday, October 1, 2024
Tuesday, October 1, 2024

Sport News ಕ್ರೀಡಾಕೂಟದಲ್ಲಿ ಪ್ರೀತಿ ವಿಶ್ವಾಸದಿಂದ ಭಾಗವಹಿಸಿ-ಬಿ.ಹೆಚ್.ನಿರಂಜನಮೂರ್ತಿ

Date:

Sport News ಪ್ರತಿ ನಿತ್ಯ ಮಕ್ಕಳಿಗೆ ಶಿಸ್ತು,ಕ್ರೀಡೆಯ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಡುತ್ತಿರುವ ಶಿಕ್ಷಕರು ಇಂದು ಪ್ರತಿನಿತ್ಯ ಕೆಲಸದ ಒತ್ತಡದಿಂದ ಒಂದು ದಿನ ಬಿಡು ಮಾಡಿಕೊಂಡು ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೆಯಲ್ಲಿ ಭಾಗವಹಿಸಿ ಅವರ ಬಾಲ್ಯದ ನೆನಪು ಮಾಡಿಕೊಳ್ಳುವಂಥ ಒಂದು ಸಂದರ್ಭದ ದಿನ ಎಂದು ದೈಹಿಕ ಶಿಕ್ಷಣ ಅಧಿಕಾರಿಗಳಾದ ಬಿ.ಹೆಚ್.ನಿರಂಜನ್ ಮೂರ್ತಿ ಅಭಿಪ್ರಾಯಪಟ್ಟರು.

ಅವರು ಶಿವಮೊಗ್ಗದ ಶಾರದಾದೇವಿ ಅಂದರ ವಿಕಾಸ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡುತ್ತಾ, ಕ್ರೀಡಾಕೂಟದಲ್ಲಿ ಪ್ರೀತಿ,ವಿಶ್ವಾಸದಿಂದ ಭಾಗವಹಿಸಿ,ವರ್ಷಕ್ಕೊಮ್ಮೆ ಇಂತಹ ಕ್ರೀಡೆಗಳು ಶಿಕ್ಷಕರಿಗೆ ಅಗತ್ಯವಾಗಿ ಬೇಕಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗದ ಬಿಲ್ವಾ ಸ್ಪೋರ್ಟ್ಸ್ ನ ಚೇತನ್ ರವರು ಮಾತನಾಡುತ್ತಾ, ಕ್ರೀಡೆಯಲ್ಲಿ ಸೋಲು,ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ದೈಹಿಕ ಶಿಕ್ಷಣ ಶಿಕ್ಷಕರ ಕ್ರಿಕೆಟ್ ಪಂದ್ಯಾ ವಳಿಯಲ್ಲಿ ಅಭಿಪ್ರಾಯಪಟ್ಟರು.

ರಾಷ್ಟ್ರ ಮತ್ತು ಅಂತ ರ್ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದಂತಹ ಬಡ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ಮಾಡಲಾಗುವುದು ಎಂದರು.

ಶಿವಮೊಗ್ಗ ವಕೀಲರ ಸಂಘದ ಕಾರ್ಯದರ್ಶಿಯಾದ ಶ್ರೀ ಗಂಗಾಧರ್ ಅವರು ಮಾತನಾಡಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಯಾವತ್ತೂ ನೆನಪಿನಲ್ಲಿರು ವಂತಹ ಯಾರಾದರೂ ಶಿಕ್ಷಕರಿದ್ದಾರೆ ಅಂದರೆ ಅದು ದೈಹಿಕ ಶಿಕ್ಷಣ ಶಿಕ್ಷಕರು ಮಾತ್ರ, ಆತನನ್ನು ತಿದ್ದಿ,ತೀಡಿ,ಶಿಸ್ತಿನಿಂದ ಒಬ್ಬ ಸತ್ಪ್ರಜೆಯನ್ನಾಗಿ ಮಾಡುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.

ಶಿವಮೊಗ್ಗ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾ. ಹ. ತಿಮ್ಮೇನಹಳ್ಳಿ ಮಾತನಾಡುತ್ತಾ,ಕ್ರೀಡೆಯನ್ನು ಆಯೋಜನೆ ಮಾಡಿರುವಂತಹ ನವೀನ್ ರವರ ಕಾರ್ಯ ವೈಕರಿಯನ್ನು ಶ್ಲಾಘಿಸಿದರು.

Sport News ಇದೇ ಸಂದರ್ಭದಲ್ಲಿ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು ಸಮವಸ್ತ್ರದೊಂದಿಗೆ, ಸುಮಾರು 6 ತಂಡಗಳು ಲೀಗ್ ಮಾದರಿಯ ಕ್ರಿಕೆಟ್ ನಲ್ಲಿ ಪ್ರೀತಿ,ವಿಶ್ವಾಸ,ಸಂತೋಷದಿಂದ ಭಾಗವಹಿಸುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿ ಇನ್ನೂ ವಿಶೇಷವಾಗಿ ಕ್ರೀಡೆಗಳನ್ನು ಆಯೋಜನೆ ಮಾಡೋಣ ಎಂದು ತಮ್ಮ ವೃತ್ತಿ ಬಾಂಧವರಿಗೆ ತಿಳಿಸಿದರು.

ವಿಜೇತ ತಂಡಗಳಿಗೆ ಅತ್ಯಾಕರ್ಷಕ ಟ್ರೋಪಿ,ವೈಯಕ್ತಿಕ ಬಹುಮಾನಗಳು ನೀಡಿ ಗೌರವಿಸಲಾಯಿತು . ಇದೇ ಸಂದರ್ಭದಲ್ಲಿ ಹಿರಿಯ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಕೆ.ಎಂ., ಬಸವರಾಜ್ ಬಿ. ಇವರುಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನವೀನ್ ವಹಿಸಿದ್ದರು. ಜಿಲ್ಲಾ ಫುಟಬಾಲ್ ಸಂಸ್ಥೆಯ ಅಧ್ಯಕ್ಷ ಶ್ರೀನಾಥ್ ಕ್ರೀಡಾಪಟಿಗೆ ಶುಭ ಹಾರೈಸಿದರು. ಕೆ. ಜಿ.ಮಠಪತಿ ಸೋಮಶೇಖರ್,ಸುರೇಶ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...