Madhu Bangarappa ರಾಜ್ಯ ಕಾಂಗ್ರೆಸ್ ಸರ್ಕಾರ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳನ್ನು ಜನತೆಗೆ ನೀಡುವ ಮೂಲಕ ನಾವು ಕೊಟ್ಟ ಮಾತಿನಂತೆ ನಡೆದುಕೊಂಡು ಮತದಾರರ ವಿಶ್ವಾಸ ಉಳಿಸಿಕೊಂಡಿದ್ದೇವೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಹೇಳಿದ್ದಾರೆ.
ಶಿಕಾರಿಪುರ ಪಟ್ಟಣದಲ್ಲಿ ತಾಲೂಕು ಆಡಳಿತ, ಪುರಸಭೆ ಆಯೋಜಿಸಿದ್ದ ಗ್ಯಾರಂಟಿ ಸಮಾವೇಶಕ್ಕೆ ಚಾಲನೆ ನೀಡಿ ಮಧು ಬಂಗಾರಪ್ಪ ಅವರು ಮಾತನಾಡಿದರು.
ಗ್ಯಾರೆಂಟಿ ಕುರಿತು ಪ್ರತಿಪಕ್ಷದವರು ಕೀಳು ಭಾಷೆ ಬಳಸುತ್ತಿದ್ದಾರೆ. ಬಿಟ್ಟಿ ಭಾಗ್ಯ ಎನ್ನುವುದು ಎಷ್ಟು ಸರಿ. ನಿಮ್ಮ ತೆರಿಗೆ ಹಣ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಬಿಟ್ಟಿ ಭಾಗ್ಯ ಎನ್ನುವವರಿಗೆ ಸರಿಯಾದ ಪಾಠ ಕಲಿಸಿ ಎಂದು ಹೇಳಿದ್ದಾರೆ.
ಶಿಕಾರಿಪುರಕ್ಕೆ ಆಗಮಿಸಿದ್ದಾಗಲಿಲ್ಲ ನೆಂಟರು , ಬೀಗರ ಮನೆಗೆ ಬಂದ ಸಂತೋಷದ ಅನುಭವ ನೀಡುತ್ತದೆ. ಬರಗಾಲದಲ್ಲಿ ರಾಜ್ಯಕ್ಕೆ ಅನುದಾನ ನೀಡಿ ದವರ ಎದುರು ಬರಗಾಲಕ್ಕೆ ಅಕ್ಕಿ, ಬಿತ್ತನೆ ಬೀಜ ನೀಡಿದ ಬಂಗಾರಪ್ಪ ತೂಕವಾಗಿ ನಿಲ್ಲುತ್ತಾರೆ. ಜಿಲ್ಲೆ ಕೃಷಿ ಸಮೃದ್ಧವಾಗಿದೆ ಎಂದರೆ ಅದಕ್ಕೆ ಬಂಗಾರಪ್ಪ ಅಂದು ಪಂಪ್ ಸೆಟ್ ಗೆ ನೀಡಿದ ಉಚಿತ ವಿದ್ಯುತ್ ಕೊಡುಗೆ ದೊಡ್ಡದು ಎಂದು ಹೇಳಿದ್ದಾರೆ.
ನಾಡಿನ ಮಕ್ಕಳಿಗೆ ಶಿಕ್ಷಣ ನೀಡುವ ಖಾತೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎನ್ನುವಂತಹ ವಾತಾವರಣ ನಿರ್ಮಿಸುತ್ತೇವೆ ಎಂದು ತಿಳಿಸಿದ್ದಾರೆ.
Madhu Bangarappa ಶಿಕಾರಿಪುರ ತಾಲೂಕಿನಲ್ಲಿ492 ಗೃಹಲಕ್ಷ್ಮಿ ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ. ಹಾಗೆಯೇ ಉಳಿದ ಯೋಜನೆಗಳು ಎಲ್ಲಾ ಅರ್ಹರಿಗೆ ತಲುಪಬೇಕು. ಇದಕ್ಕಾಗಿ ಇಲ್ಲಿ ತೆರೆದಿರುವ ಕೌಂಟರ್ ನಲ್ಲಿ ತಮ್ಮ ದೂರು ನೋಂದಾಯಿಸಿ. ನಾವು ಎಲ್ಲರಿಗೂ ಯೋಜನೆ ತಲುಪಿಸುತ್ತೇವೆ ಎಂದು ಹೇಳಿದ್ದಾರೆ.