Narendra Modi ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗ. ಸ್ವ ಗದಗರ ಮಹಾರಾಜ ಅವರು ಛತ್ತೀಸಗಢದ ಡೊಂಗರಗಢದ ಚಂದ್ರಗಿರಿ ತೀರ್ಥದಲ್ಲಿ ನಿಧನ ಹೊಂದಿದ್ದಾರೆ.
ವಿದ್ಯಾಸಾಗರ ಮಹಾರಾಜರು ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದರು. 3 ದಿನಗಳ ಹಿಂದೆ ಸಮಾಧಿ ಪ್ರಕ್ರಿಯೆ ಅಂದರೆ ‘ಸಲ್ಲೇಖನ’ವನ್ನು ಪ್ರಾರಂಭಿಸಿದ್ದರು. ಇದರ ಅಡಿಯಲ್ಲಿ, ಅವರು ಆಹಾರ ಮತ್ತು ನೀರನ್ನು ಸಂಪೂರ್ಣವಾಗಿ ತ್ಯಜಿಸಿದ್ದರು. ಇದಾದ ಬಳಿಕ ಶನಿವಾರ ರಾತ್ರಿ 2:35ರ ಸುಮಾರಿಗೆ ಆಚಾರ್ಯ ದೇಹ ತೊರೆದಿದ್ದಾರೆ.
ಜೈನ ಸಮುದಾಯದ ರತ್ನ ಎಂದು ಕರೆಯಲ್ಪಡುವ ಆಚಾರ್ಯ ವಿದ್ಯಾಸಾಗರ್ ಮಹಾರಾಜ್ ಅವರು 1946 ರ ಅಕ್ಟೋಬರ್ 10 ರಂದು ಶರದ್ ಪೂರ್ಣಿಮಾ ದಿನದಂದು ಕರ್ನಾಟಕದ ಸದಲಗಾ ಗ್ರಾಮದಲ್ಲಿ ಜನಿಸಿದರು.
ಮಾಹಿತಿಯ ಪ್ರಕಾರ, ಆಚಾರ್ಯ ವಿದ್ಯಾಸಾಗರ್ ಆಚಾರ್ಯ ಜ್ಞಾನಸಾಗರ್ ಅವರ ಶಿಷ್ಯರಾಗಿದ್ದರು ಮತ್ತು ಅವರು ಸಮಾಧಿಯಾದಾಗ, ಅವರು ತಮ್ಮ ಆಚಾರ್ಯ ಹುದ್ದೆಯನ್ನು ಮುನಿ ವಿದ್ಯಾಸಾಗರ್ ಅವರಿಗೆ ಹಸ್ತಾಂತರಿಸಿದರು. ನವೆಂಬರ್ 22, 1972 ರಂದು, ಮುನಿ ವಿದ್ಯಾಸಾಗರ್ ತಮ್ಮ 26 ನೇ ವಯಸ್ಸಿನಲ್ಲಿ ಆಚಾರ್ಯರಾದರು. ಅವರು ಶಾಸ್ತ್ರೀಯ (ಸಂಸ್ಕೃತ ಮತ್ತು ಪ್ರಾಕೃತ) ಮತ್ತು ಹಲವಾರು ಆಧುನಿಕ ಭಾಷೆಗಳಾದ ಹಿಂದಿ, ಮರಾಠಿ ಮತ್ತು ಕನ್ನಡದಲ್ಲಿ ಪರಿಣತರಾಗಿದ್ದರು ಮತ್ತು ಹಿಂದಿ ಮತ್ತು ಸಂಸ್ಕೃತದಲ್ಲಿ ಸಮೃದ್ಧ ಲೇಖಕರಾಗಿದ್ದಾರೆ. ಹಲವಾರು ಕೃತಿಗಳನ್ನೂ ಸಹ ಬರೆದಿದ್ದಾರೆ.
ಪ್ರಧಾನಿ ಮೋದಿ ಸಂತಾಪ

ಜೈನ ಮುನಿಯ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
‘Narendra Modi ನನ್ನ ಆಲೋಚನೆ ಮತ್ತು ಪ್ರಾರ್ಥನೆ ಆಚಾರ್ಯ ಶ್ರೀ 108 ವಿದ್ಯಾಸಾಗರ ಜೀ ಮಹಾರಾಜ ಅವರ ಅಸಂಖ್ಯಾತ ಭಕ್ತರೊಂದಿಗೆ ಇವೆ. ಸಮಾಜಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ, ವಿಶೇಷವಾಗಿ ಜನರಲ್ಲಿ ಆಧ್ಯಾತ್ಮಿಕ ಜಾಗೃತಿಗಾಗಿ ಅವರ ಪ್ರಯತ್ನ, ಬಡತನ ನಿರ್ಮೂಲನೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ಮಾಡಿದ ಕೆಲಸಗಳಿಂದಾಗಿ ಮುಂಬರುವ ಪೀಳಿಗೆಯ ಜನ ಅವರನ್ನು ನೆನಪಿಸಿಕೊಳ್ಳುತ್ತಾರೆ. ವರ್ಷಗಳ ಹಿಂದೆ ಅವರ ಆಶೀರ್ವಾದ ಪಡೆವ ಅವಕಾಶ ನನಗೆ ಸಿಕ್ಕಿತ್ತು. ಕಳೆದ ವರ್ಷದ ಕೊನೆಯಲ್ಲಿ ಛತ್ತೀಸಗಢದ ಡೊಂಗರಗಢದಲ್ಲಿರುವ ಚಂದ್ರಗಿರಿ ಜೈನ ಮಂದಿರಕ್ಕೆ ನಾನು ಭೇಟಿ ನೀಡಿದ್ದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಸಮಯದಲ್ಲಿ, ನಾನು ಅವರೊಂದಿಗೆ ಸಮಯ ಕಳೆದಿದ್ದೇನೆ ಮತ್ತು ಅವರ ಆಶೀರ್ವಾದವನ್ನೂ ಪಡೆದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ