Klive Article ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.
ಶ್ರೀಮಧ್ವನವಮಿಯ ಸಂದರ್ಭದಲ್ಲಿ
ಶ್ರೀಮಧ್ವಾಚಾರ್ಯರ ಪಾದ ಪದುಮಗಳಲ್ಲಿ
ಗೀತಾನಮನ ಸಮರ್ಪಣೆ
ಶ್ರೀಮಧ್ವರಾಯರು
ಮೊದಲವತಾರದಿ ಮುಖ್ಯ
ಪ್ರಾಣದೇವರು/
ಎರಡನೇ ಅವತಾರದಿ
ಭೀಮಸೇನ
ದೇವರು/
ಮೂರನೆಯ ಅವತಾರದಿ
ಮಧ್ವರಾಯರಾಗಿ
ಪಾಜಕದಲಿ ಧರೆಗೆಬಂದರು/
ಮಧ್ಯಗೇಹ ಭಟ್ಟರು
ವೇದಾವತಿ
ಬಾಯಿಯವರು/
ಹನ್ನೆರಡುವರ್ಷ ಉಡುಪಿಯ
ಅನಂತೇಶ್ವರನ
ಸೇವೆಗೈದರು./
ವಿಳಂಬಿ ಅಶ್ವಿನ
ವಿಜಯದಶಮಿ
ಪಾಜಕಾದಲ್ಲಿ ಅರಳಿತು
ದ್ವೈತ ಕಮಲ./
ವಾಸುದೇವ ಎಂದು
ಕರೆದರು
ತಂದೆತಾಯಿಯರು./
ಅಪ್ರತಿಮ ಬುದ್ಧಿಶಾಲಿಯಾದ
ವಾಸುದೇವ ಹಿಡಿದ
ಕಾವಿವಸ್ತ್ರ/
ಹೌಹಾರಿದರು ತಂದೆತಾಯಿಯರು/
ತಂದೆತಾಯಿಯರಿಗೆ
ವಂದಿಸಿ
ಅನಂತೇಶ್ವರನ ಸನ್ನಿಧಿಗೆ
ಹೊರಟ ವಾಸುದೇವ
ಹನ್ನೊಂದನೆ ವಯಸ್ಸಿಗೆ/
ವೈರಾಗ್ಯ ಮೂರ್ತಿಯಾದ ವಾಸುದೇವ
ಅಚ್ಯುತ ಪ್ರೇಕ್ಷಕರ ಕಣ್ಣಿಗೆ ಬಿದ್ದ/
ಬಿಡದೇ ವಾಸುದೇವನನ್ನು
ಹಿಡಿದೇ ಬಿಟ್ಟರು/
ಕಾವಿ ವಸ್ತ್ರ ಉಡಿಸಿಯೇ
ಬಿಟ್ಟರು/
ಸನ್ಯಾಸದೀಕ್ಷೆ ಬೋಧಿಸಿ
ಪೂರ್ಣಪ್ರಜ್ಞರೆಂದು
ಕರೆದರು./
Klive Article ವೇದಾಂತ ವಾದದಲ್ಲಿ ಗೆದ್ದ
ಪೂರ್ಣಪ್ರಜ್ಞರಿಗೆ
ವೇದಾಂತ
ಅಭಿಷೇಕಮಾಡಿ ಆನಂದ
ತೀರ್ಥರೆಂದರು ./
ಮಧ್ವ ಎಂಬ ಹೆಸರಿನಿಂದ
ಗ್ರಂಥ ಬರೆದು
ಮಧ್ವಾಚಾರ್ಯರಾದರು./
ಗೀತಾ ಭಾಷ್ಯ ಬರೆದರು
ಬದರಿಯಲ್ಲಿ ವೇದವ್ಯಾಸ
ಗುರುಗಳ ಪ್ರಶಂಸೆ
ಪಡೆದರು/
ಬದರಿಯಿಂದ ಬರುವಾಗ
ಶೋಭನಭಟ್ಟರು,ಶಾಮಾ
ಶಾಸ್ತ್ರಿಗಳು
ಸಿಕ್ಕರು./
ಇವರ ಜ್ಞಾನಪ್ರಭೆಗೆ
ತಲೆಬಾಗಿ ನಮಿಸಿ
ಶಿಷ್ಯರಾದರು.,/
ತ್ರಿವಿಕ್ರಮ
ಪಂಡಿತಾಚಾರ್ಯರು
ಹರಿವಾಯುಸ್ತುತಿ ಬರೆದು
ಆಚಾರ್ಯರಿಗೆ ನಮಿಸಿದರು/
ಭರತಖಂಡವನ್ನು ಎರಡು
ಬಾರಿ ಸುತ್ತಿದರು/
ಬಹಳ ಶಿಷ್ಯ ಸಂಪತ್ತು
ಗಳಿಸಿದರು./
ಮಹಾಭಾರತ ತಾತ್ಪರ್ಯ
ನಿರ್ಣಯ
ಸರ್ವಮೂಲಗ್ರಂಥ
ಬರೆದರು./
ದ್ವಾರಕೆಯಿಂದ ಬಂದ ಕೃಷ್ಣನನ್ನು
ಉಡುಪಿಯಲ್ಲಿ ಪ್ರತಿಷ್ಠಾಪಿಸಿದರು./
ಅಷ್ಟಮಠದ ಯತಿಗಳಿಂದ ಕೃಷ್ಣನ ಪೂಜೆ
ನೆರವೇರುವಂತೆ ಮಾಡಿದರು/
ಕಳಸದ ಭದ್ರಾನದಿಯಲ್ಲಿ
ದೊಡ್ಡ ಬಂಡೆಯನ್ನಿಟ್ಟು
ನೀರಿನ ಹರಿವನ್ನುಸರಿಮಾಡಿದರು./
ಅಲ್ಲಿಯ ಜನರು
ಭಕ್ತಿಯಿಂದ ಮಧ್ವಾಚಾರ್ಯರಿಗೆ
ಜೈ ಎಂದರು./
ಹೀಗೆ ಬಹಳಷ್ಟು ಮಹಿಮೆಗಳು
ನಡೆದಿವೆ./
79ವರ್ಷಗಳ ಸಾರ್ಥಕ
ಜೀವನ ನಡೆಸಿದರು/
ಪಿಂಗಳ ಸಂವತ್ಸರ ಮಾಘ
ಶುದ್ಧ ನವಮಿಯಂದು
ಅದೃಶ್ಯರಾದರು ಉಡುಪಿಯ
ಅನಂತೇಶ್ವರನ
ಸನ್ನಿಧಿಯಿಂದ./
ಇದನ್ನು ಮಧ್ವನವಮಿ
ದಿನವನ್ನಾಗಿ ಆಚರಿಸುವರು/
ಭಕ್ತಿಯಿಂದ ನಮನ
ಸಲ್ಲಿಸಿದವರನು ಅನುಗ್ರಹಿಸುವರು
ಶ್ರೀಮಧ್ವಾಚಾರ್ಯರು