Press Trust ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ನಾವು ಚುನಾವಣೆಯಲ್ಲಿ ನಿರ್ಭೀತರಾಗಿ ಮತ ಚಲಾಯಿಸಬೇಕು ಎಂದು ಕರೆಕೊಡಲಾಗುತ್ತಿದೆ. ಆದರೆ, ಇಂದು ಹಣ, ಹೆಂಡ, ಜಾತಿ, ಧರ್ಮದ ಆಧಾರದ ಮೇಲೆ ಚುನಾವಣೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಅಲ್ಲವೇ ಎಂದು ಪ್ರಶ್ನಿಸಿದವರು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಹೇಳಿದರು.
ಶಿವಮೊಗ್ಗದ ಪ್ರೆಸ್ ಟ್ರಸ್ಟ್ನಲ್ಲಿ ಶನಿವಾರ ಜಿಲ್ಲಾ ಜಾಗೃತಿ ಮತದಾರರ ವೇದಿಕೆ ವತಿಯಿಂದ ಆಯೋಜಿಸಿದ್ದ ಚುನಾವಣೆ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯಕ್ತಿವಾದ, ಜಾತಿವಾದ, ಕೋಮುವಾದಗಳು ಚುನಾವಣೆ ದಿಕ್ಕನ್ನೇ ಬದಲಿಸಿವೆ. ಶಿವಮೊಗ್ಗ ಜಿಲ್ಲೆ ಶಾಂತವೇರಿ ಗೋಪಾಲ್ ಗೌಡ, ಬಂಗಾರಪ್ಪ, ಕಾಗೋಡು ತಿಮ್ಮಪ್ಪರಂತ ಸಮಾಜವಾದಿಗಳು ಜನಿಸಿದ ತವರು. ಆದರೆ, ಇವತ್ತು ಇಲ್ಲಿ ಬೇರೆ ವಾತಾವರಣ ಇದೆ. ಹಣ, ಧರ್ಮದ ಆಧಾರದಲ್ಲಿ ಮತ ಹಾಕುವ ಪರಿಪಾಠ ಬೆಳದು ಬಂದಿದೆ. ಇಂದಿನ ಚುನಾವಣೆ ವ್ಯವಸ್ಥೆ ಹೀಗೆ ಮುಂದುವರೆದರೆ ಮುಂದೆ ಗ್ರಾಮ ಪಂಚಾಯಿತಿಯಲ್ಲೂ ಸಾಮಾನ್ಯ ಕಾರ್ಯಕರ್ತ ಗೆಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಭಿವೃದ್ಧಿ, ಜನಪರ ಹೋರಾಟ ಯಾರಿಗೂ ಬೇಕಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಎಷ್ಟು ದುಡ್ಡು ಕೊಡುತ್ತಾರೆ ಎಂಬುದು ಮುಖ್ಯವಾ ಗುತ್ತಿದೆ. ದುಡ್ಡಿದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಇದರಿಂದ ಮುಂದೆ ಬಡವರು, ರೈತರ ಪರ ಮಾತನಾಡುವವರೇ ಇಲ್ಲವಾಗಬಹುದು ವ್ಯಕ್ತಪಡಿಸಿದರು.
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಮಾತನಾಡಿ, ಇಂದು ಭಷ್ಟಾಚಾರ ಎಂಬುದು ತಳ ಮಟ್ಟದಲ್ಲೇ ಶುರುವಾಗಿದೆ. ದುಡ್ಡು ಕೊಟ್ಟರೆ ಮಾತ್ರ ಮತ ಹಾಕುತ್ತೇವೆ ಎಂದು ಮತದಾರರೇ ಹೇಳುವ ದುಸ್ಥಿತಿ ನಿರ್ಮಾಣವಾಗಿದೆ. ಆದರೆ, ಚುನಾವಣೆ ಸುಧಾರಣೆಯ ಪ್ರಯತ್ನ ನಿರಂತವಾಗಿದ್ದರೆ ಮುಂದೊoದು ದಿನ ಅದಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂಬ ಆಶಾ ಮನೋಭಾವ ಬೆಳೆಸಿಕೊಳ್ಳಬೇಕು. ನಮ್ಮ ನೆರೆ ಹೊರೆಯವರೊಂದಿಗೆ ಯೋಗ್ಯ ಮತದಾನದ ಬಗ್ಗೆ ಚರ್ಚೆ ಮಾಡುತ್ತಾ ಹೋದರೆ ಮುಂದೊoದು ದಿನ ಇದು ಫಲಕೊಡುತ್ತದೆ ಎಂದರು.
ಗಾoಧಿ ಹುಟ್ಟಿದ ನಾಡಿನಲ್ಲಿ ಹಿಂಸೆ ನಡೆಯಬಾರದು ಎಂದರೆ ಸಂವಿಧಾನವನ್ನು ಪಾಲನೆ ಮಾಡುವ ಅಗತ್ಯವಿದೆ. ಸಾಲಮನ್ನಾ ಮಾಡಿ ದೇಶ ಬಿಟ್ಟು ಓಡಿಹೋಗುವ ಸಾಲ ಮನ್ನಾ ಮಾಡುವ ಸರ್ಕಾರಗಳು ರೈತರ ಸಾಲ ಮನ್ನಾ ಮಾಡುತ್ತಿಲ್ಲ ಎಂದು ಹೇಳಿದರು.
Press Trust ಬಡವರು ಓದುವ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಸಂಖ್ಯೆಯ ಶಿಕ್ಷಕರ ಹುದ್ದೆ ಖಾಲಿ ಉಳಿದಿವೆ. ಇದರಿಂದ ಬಡ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಯಾರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಯಾರು ಜನ ಪರವಾಗಿ ಇರುತ್ತಾರೆ. ಚುನಾವಣೆಯಲ್ಲಿ ಅಂತವರು ಆಯ್ಕೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಬಸವರಾಜ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಕೆ.ಟಿ.ಗಂಗಾಧರ್ ಪ್ರತಿಜ್ಞಾವಿಧಿ ಬೋಧಿಸಿದರು.