Wednesday, October 2, 2024
Wednesday, October 2, 2024

Institute of International Finance ಅವಕಾಶಗಳನ್ನು ಅನಾವರಣಗೊಳಿಸುವ ಧ್ಯೇಯದೊಂದಿಗೆ ಇಂಡಿಯನ್ ಫೌಂಡ್ರಿ ಸಮ್ಮೇಳನ ಆರಂಭ- ಡಿ.ಎಸ್.ಚಂದ್ರ ಶೇಖರ್

Date:

Institute of International Finance ಫೌಂಡ್ರಿ ಉದ್ಯಮದ ಬೆಳವಣಿಗೆಯಲ್ಲಿ ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಮಹತ್ತರ ಪಾತ್ರ ವಹಿಸಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಐಐಎಫ್ ವತಿಯಿಂದ ಆಯೋಜಿಸಿದ್ದ 72 ನೇ ಇಂಡಿಯನ್ ಫೌಂಡ್ರಿ ಸಮ್ಮೇಳನ ಮತ್ತು ಅಂತರಾಷ್ಟ್ರೀಯ ಫೌಂಡ್ರಿ ವಸ್ತು ಪ್ರದರ್ಶನದಲ್ಲಿ ಮಾತನಾಡಿದರು.

ಸರ್ಕಾರಿ ಸಂಸ್ಥೆಗಳೊಂದಿಗೆ ಉದ್ಯಮಕ್ಕೆ ಬೇಕಾದಂತಹ ಸವಲತ್ತುಗಳ ಬಗ್ಗೆ ಗಮನ ಸೆಳೆಯುವುದು ಹಾಗೂ ಕೈಗಾರಿಕೆಗಳಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳು ಹಾಗೂ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಐಐಎಫ್ ಕಾರ್ಯತತ್ಪರವಾಗಿದೆ ಎಂದು ತಿಳಿಸಿದರು.

ದಿ ಇನ್ಸಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮನ್ ಸ್ವಾಯತ್ತ ಸಂಸ್ಥೆ ಆಗಿದ್ದು, ಕೋಲ್ಕತ್ತಾ ನಗರದಲ್ಲಿ ಮುಖ್ಯ ಕಚೇರಿ ಇದೆ. ಸಂಸ್ಥೆಯು 4 ವಲಯ, 3 ಶ್ರೇಷ್ಠತಾ ಘಟಕ ಹಾಗೂ 24 ಶಾಖೆಗಳನ್ನು ದೇಶಾದ್ಯಂತ ಹೊಂದಿದೆ. “ಅವಕಾಶಗಳನ್ನು ಅನಾವರಣಗೊಳಿಸುವುದು” ಎಂಬ ಘೋಷವಾಕ್ಯದೊಂದಿಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.

ದೇಶ ವಿದೇಶಗಳಿಂದ 1500 ಕ್ಕೂ ಹೆಚ್ಚು ನೊಂದಾಯಿತ ಪ್ರತಿನಿಧಿಗಳು ಹಾಗೂ 20 ಸಾವಿರಕ್ಕೂ ಹೆಚ್ಚು ಸಂದರ್ಶಕರು ಭಾಗವಹಿಸಿದ್ದರು.

Institute of International Finance 350 ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಲು ಮಳಿಗೆಗಳನ್ನು ಪಡೆದಿದ್ದರು.

ಅಂತರರಾಷ್ಟ್ರೀಯ ಗುಣಮಟ್ಟದ ಮಳಿಗೆಗಳನ್ನು ತಯಾರಿಸಿದ್ದ ಪ್ರದರ್ಶಕರು ಉತ್ಪನ್ನಗಳನ್ನು ಪ್ರದರ್ಶಿಸಿದರು.
ಉದ್ಘಾಟನಾ ಕಾರ್ಯಕ್ರಮದ ನಂತರ ತಾಂತ್ರಿಕ ಅಧಿವೇಶನ, ಮಾರಾಟಗಾರರ ಭೇಟಿ ಕಾರ್ಯಕ್ರಮ, ಸಂವಾದ, ಹೊಸ ತಾಂತ್ರಿಕತೆಯ ಅನಾವರಣ, ಯುವ ಉದ್ಯಮಿಗಳೊಂದಿಗೆ ಮಾತುಕತೆ, ವಿಜಯ ಪ್ರಕಾಶ್ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಒಲ್ವೋ ಸಂಸ್ಥೆ ಮುಖ್ಯಸ್ಥ ಗಿರೀಶ್.ಡಿ.ಎಂ, ಆಟೋಮೊಟೀವ್ ಆಕ್ಸೆಲ್ ಲಿಮಿಟೆಡ್ ಸಂಸ್ಥೆ ಮುಖ್ಯ ನಿರ್ವಾಹಕ ಅಧಿಕಾರಿ ಮುತ್ತು ಕುಮಾರ್.ಎನ್, ಫ್ಲೋಸರ್ವ್ ಸಂಸ್ಥೆ ಜಾಗತಿಕ ವರ್ಗದ ನಿರ್ದೆಶಕ ಶ್ರೀರಾಂ ಸತೀಶ್, ಐಐಎಫ್ ರಾಷ್ಟ್ರೀಯ ಗೌರವ ಕಾರ್ಯದರ್ಶಿ ಮುತ್ತು ಕುಮಾರ್.ಎಸ್, ಸಂಘಟನಾ ಸಮಿತಿಯ ಅಧ್ಯಕ್ಷ ರುದ್ರೇಗೌಡ.ಎಸ್, ಮಾರ್ಗದರ್ಶಕ ಎಸ್.ಆರ್.ವಿ.ರಮಣನ್, ಉಪಾಧ್ಯಕ್ಷ ಸಂಜಯ್ ಶ್ರಾಫ್, ಸಿದ್ದರಾಜು.ಸಿ, ಬೆನಕಪ್ಪ.ಡಿ.ಜಿ, ಗೌರವ ಕಾರ್ಯದರ್ಶಿ ಅಂಕಿತ್.ಎಸ್.ದಿವೇಕರ್, ವಿಶ್ಲೇಶ್ ರಮಣನ್, ಉಪಕಾರ್ಯದರ್ಶಿ ಗೋಪಾಲ್.ಎನ್, ರಾಘವೇಂದ್ರ.ಎಂ.ವಿ, ಗೌರವ ಖಜಾಂಚಿ ಕುಪ್ಪುಸಾಮಿ.ಎಸ್, ಐಫೆಕ್ಸ್ 2024 ಅಧ್ಯಕ್ಷ ಯೋಗೀಶ್‌ಕುಮಾರ್ ಹಾಗೂ ಉಪಾಧ್ಯಕ್ಷ ಮಹಾವೀರ್ ಜೈನ್, ಉಪ ಸಮಿತಿಯ ಎಲ್ಲಾ ಸದಸ್ಯರು, ಐಐಎಫ್ ಶಿವಮೊಗ್ಗ ಶಾಖೆಯ ಅಧ್ಯಕ್ಷ ಪರಮಶೇಖರ್ ಟಿ ಎನ್, ನಂಜುಂಡೇಶ್ವರ.ಎಚ್.ಬಿ, ಆಡಳಿತ ಪರಿಷತ್ ಎಲ್ಲಾ ಸದಸ್ಯರು, ಕಾರ್ಯಕ್ರಮದ ಪ್ರಾಯೋಜಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...