Wednesday, October 2, 2024
Wednesday, October 2, 2024

Chikkamagaluru ದೈನಂದಿನ ಕಾಯಕವನ್ನು ಬದಿಗಿಟ್ಟು ಕನ್ನಡಸೇವೆಯಲ್ಲಿ ತೊಡಗಲು ಸಲಹೆ

Date:

Chikkamagaluru ದೈನಂದಿನ ಕಾಯಕದಲ್ಲಿ ಕೆಲ ಸಮಯವನ್ನು ಬದಿಗಿಟ್ಟು ಕನ್ನಡಾಂಬೆ ಸೇವೆಯಲ್ಲಿ ತನು, ಮನ ಅರ್ಪಿಸಿಕೊಂಡರೆ ಮಾತ್ರ ನಾಡು, ನುಡಿಯು ಸಂಪತ್ಪರಿತವಾಗಿ ಬೆಳವಣಿಗೆ ಹೊಂದಲು ಸಾಧ್ಯ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್ ಹೇಳಿದರು.

ಚಿಕ್ಕ ಮಂಗಳೂರುಗಾಂಧಿನಗರ ಸಮೀಪದ ಅಖಿಲ ಭಾರತ ಅಂಚೆ ನೌಕರರ ಭವನದಲ್ಲಿ ತಾಲ್ಲೂಕು ಸಿರಿಗನ್ನಡ ವೇದಿಕೆ ವತಿ ಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಸೇವಾದೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕತೆಯ ಕಾಲಘಟ್ಟದಲ್ಲಿ ಭಾಷಾಭಿಮಾನದ ಕಂಪು ಮರೆಯಾಗುತ್ತಿರುವುದು ಸಮಂಜಸವಲ್ಲ. ಆ ನಿಟ್ಟಿನಲ್ಲಿ ಭಾಷೆಯ ಕಂಪನ್ನು ಎಲ್ಲೆಡೆ ಪಸರಿಸುವ ಸಲುವಾಗಿ ಯುವಪೀಳಿಗೆಗೆ ಸಿರಿಗನ್ನಡ ವೇದಿಕೆಯಿಂದ ಮಹತ್ತರ ಜವಾಬ್ದಾರಿ ನೀಡಿ ಜಿಲ್ಲೆಯ ಉದ್ದಗಲಕ್ಕೂ ಸಾಹಿತ್ಯಾತ್ಮಕ ಚಟುವಟಿಕೆ ಮುಖಾಂತರ ಕನ್ನಡಾಭಿಮಾನವನ್ನು ಬೆಳೆ ಸಲು ಮುಂದಾಗುತ್ತಿದೆ ಎಂದರು.

ನಾಡಿನ ಅಗ್ರಗಣ್ಯ ಸಾಹಿತಿ, ಕವಿಗಳು ಹಾಗೂ ದಾರ್ಶನಿಕರ ಕೃತಿ ಮತ್ತು ವಚನಗಳೇ ಭಾಷೆಯ ಬೆಳವ ಣಿಗೆ ಹೊಂದಲು ಮೂಲಧ್ಯೇಯವಾಗಿದೆ. ಕಥೆ, ಕಾದಂಬರಿ ಹಾಗೂ ಜ್ಞಾನಪೀಠ ಪಡೆದಂತಹ ಗ್ರಂಥಗಳಿoದ ಯುವ ಜನಾಂಗಕ್ಕೆ ತಿಳಿ ಹೇಳುವ ಕೆಲಸವು ವೇದಿಕೆಯಿಂದ ನಡೆಯುತ್ತಿದೆ. ಜೊತೆಗೆ ಸಾರ್ವಜನಿಕರಲ್ಲಿ ನಶಿಸಿರುವ ಕನ್ನಡದ ಸೊಗಡನ್ನು ಮರುಸೃಷ್ಟಿಸಲಾಗುತ್ತಿದೆ ಎಂದರು.

ಆ ನಿಟ್ಟಿನಲ್ಲಿ ಹಿಂದಿನ ನವೆಂಬರ್ ತಿಂಗಳಾತ್ಯದವರೆಗೂ ಜಿಲ್ಲೆಯ ವಿವಿಧ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ ಸಿರಿಗನ್ನಡ ವೇದಿಕೆಯಿಂದ ನುಡಿ ನಿತ್ಯೋತ್ಸವ, ಮನೆಯಂಗಳದಿ ಕಾರ್ಯಕ್ರಮ ಹಾಗೂ ಜಾನಪದ ಸೊಗಡಿನ ವಿಶಿ ಷ್ಟತೆಯನ್ನು ಮನಮುಟ್ಟುವಂತೆ ತಿಳಿಸಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ನಿರಂತರವಾಗಿ ವೇದಿಕೆಯು ಕಾರ್ಯೋಮುಖವಾಗಿದೆ ಎಂದರು.

ಸಿರಿಗನ್ನಡ ವೇದಿಕೆ ಗೌರವ ಅಧ್ಯಕ್ಷ ಎಂ.ಸಿ.ಶಿವಾನoದಸ್ವಾಮಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಾಡಿನ ಹಿರಿಮೆ ಹಾಗೂ ಸಂಸ್ಕೃತಿ ಮಾಯವಾಗುತ್ತಿದೆ. ಮುಂದಿನ ಪೀಳಿಗೆಗೆ ಸಾಹಿತ್ಯಾತ್ಮಕ ಚಟುವಟಿಕೆ ಕೊಂಡೊಯ್ಯಲು ದಿಟ್ಟ ನಿರ್ಧಾರವನ್ನು ಕೈಗೊಂಡು ಪಾಲಕರು ಬಾಲ್ಯದಿಂದ ಮಕ್ಕಳಿಗೆ ಸಾಹಿತ್ಯಾಭಿರುಚಿ, ಹಾಡುಗಾರಿಕೆ, ಜಾನಪದ ಕುಣಿತದ ಒಲವು ಮೂಡಿಸುವುದು ಅತ್ಯಗತ್ಯ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿರಿಗನ್ನಡ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಮನು ಷ್ಯನಿಗೆ ಆಸಕ್ತಿಯಿದ್ದರೆ ಮಾತ್ರ ಕನ್ನಡವನ್ನು ಗಗನದೆತ್ತರಕ್ಕೆ ಕೊಂಡೊಯ್ಯಲು ಸಾಧ್ಯ,. ಹೀಗಾಗಿ ಪ್ರತಿಯೊಬ್ಬರು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಅಲ್ಲದೇ ಮಕ್ಕಳಿಗೆ ಸಣ್ಣವಯಸ್ಸಿನಲ್ಲಿ ಮೊಬೈಲ್‌ನ ಆನ್‌ಲೈನ್ ಆಟಗಳಿಂದ ದೂರವಿರಿಸಿ ಕಥೆ, ಕಾದಂಬರಿ ಓದುವ ಹವ್ಯಾಸವನ್ನು ಪಾಲಕರು ಬಿತ್ತಬೇಕು ಎಂದರು.

ಇದೇ ವೇಳೆ ಸಿರಿಗನ್ನಡ ವೇದಿಕೆ ತಾಲ್ಲೂಕು ಪದಾಧಿಕಾರಿಗಳಿಗೆ ವೇದಿಕೆಯ ಗೌರವ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಸೇವಾದೀಕ್ಷೆ ಬೋಧಿಸಿದರು.

ಸಾಹಿತಿ ಡಿ.ಎ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಕುಂದೂರು ಅಶೋಕ್ ಪೂರ್ಣಚಂದ್ರ ತೇಜಸ್ವಿಯವರ ಬದುಕು ಮತ್ತು ಬರಹ ಕುರಿತ ವಿಶೇಷ ಉಪನ್ಯಾಸ ನೀಡಿದರು.

Chikkamagaluru ಈ ಸಂದರ್ಭದಲ್ಲಿ ಸಿರಿಗನ್ನಡ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮದನ್, ಸಂಘಟನಾ ಕಾರ್ಯದರ್ಶಿ ಸುರೇಶ್ ನೆರ್ಲಗೆ, ಪ್ರಧಾನ ಸಂಚಾಲಕ ಹೊನ್ನೇಗೌಡ, ಸಂಚಾಲಕರಾದ ಜಯರಾಮೇಗೌಡ, ಕೆ.ಮಂಜಪ್ಪ, ಸಾಮಾಜಿಕ ಚಿಂತಕ ಹಿರೇಮಗಳೂರು ಪುಟ್ಟಸ್ವಾಮಿ ಶಿಕ್ಷಕ ಮಂಜುನಾಥ್, ಮುಖಂಡರಾದ ಶ್ರೀಮತಿ ನಾಗರತ್ನ, ಕಲ್ಲೇಶ್, ಗೀತಾ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...