Wednesday, February 4, 2026
Wednesday, February 4, 2026

Doctoral degree ಅಶೋಕ್ ನಾರ್ವೆ ಅವರಿಗೆ ಡಾಕ್ಟರೇಟ್ ಪದವಿ

Date:

Doctoral degree ಜಾನಪದ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿರುವ ಕೊಪ್ಪ ತಾಲ್ಲೂಕಿನ ನಾರ್ವೆ ಗ್ರಾಮದ ನಿವಾಸಿ ಎ.ಎಸ್.ಅಶೋಕ್ ಅವರನ್ನು ತಮಿಳು ನಾಡಿನ ಏಷಿ ಯಾ ಇಂಟರ್ ನ್ಯಾಷನಲ್ ಕಲ್ಚರ್ ಅಕಾಡೆಮಿ ಯುನಿವರ್ಸಿಟಿ ಸಂಸ್ಥೆ ಉತ್ತಮ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಎ.ಎಸ್.ಅಶೋಕ್ ಅವರು ಪ್ರಾಥಮಿಕ ಶಿಕ್ಷಣವನ್ನು ನಾರ್ವೆಯಲ್ಲಿ ಪೂರ್ಣಗೊಳಿಸಿ ಉನ್ನತ ಶಿಕ್ಷಣವನ್ನು ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದ್ದು ಬಾಲ್ಯದಿಂದಲೇ ಚುರುಕು ವ್ಯಕ್ತಿತ್ವವನ್ನು ಹೊಂದಿದ್ದರು. ಜೊತೆಗೆ ಯುವ ಜನ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಅಲ್ಲದೇ ನಾರ್ವೆ ವಿವಿದೋದ್ದೇಶ ಸಂಘದ ಅಧ್ಯಕ್ಷರಾಗಿ ಕಾಯನಿರ್ವಹಣೆ ಹಾಗೂ ರಾಜಕೀಯವಾಗಿ ಗುರುತಿಸಿಕೊಂಡು ರೈತಪರ ಹೋರಾಟವನ್ನು ನಡೆಸಿದ್ದಾರೆ.
ಇತ್ತೀಚೆಗೆ ತಮಿಳುನಾಡಿನಲ್ಲಿ ಸಂಸ್ಥೆ ವತಿಯಿಂದ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

Doctoral degree ಚಿಕ್ಕಮಗಳೂರಿನ, ಕೊಪ್ಪದ ಕಸಾಪ, ಜಾನಪದ ಪರಿಷತ್ತಿನ ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿ ಸಿರುವ ಅನುಭವ ಹೊಂದಿರುವ ಇವರು ನಿವೃತ್ತ ಶಿಕ್ಷಕ ಶ್ರೀನಿವಾಸ್ ಹಾಗೂ ಸುಶೀಲಮ್ಮರವರ ಸುಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related