S N Channabasappa ಕ್ರೀಡೆಯಿಂದ ದೈಹಿಕ ಮಾನಸಿಕ ಶಕ್ತಿ ವೃದ್ಧಿ ಆಗುವುದರ ಜತೆಯಲ್ಲಿ ಜೀವನದ ಸವಾಲುಗಳನ್ನು ಎದುರಿಸುವ ಧನಾತ್ಮಕ ಮನೋಭಾವ ಬೆಳೆಯುತ್ತದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.
ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಪ್ರಮೋದ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಹೊನಲು ಬೆಳಕಿನ ಫುಟ್‌ಬಾಲ್ ಪಂದ್ಯಾವಳಿ ಗಣರಾಜ್ಯೋತ್ಸವ ಕಪ್ ಉದ್ಘಾಟಿಸಿ ಮಾತನಾಡಿದರು.
ಫುಟ್‌ಬಾಲ್ ಇಡೀ ವಿಶ್ವಾದ್ಯಂತ ಪ್ರಸಿದ್ಧಿ ಆಗಿರುವ ಕ್ರೀಡೆ ಆಗಿದ್ದು, ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳಿಗೆ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಆಸಕ್ತಿ ಬೆಳೆಸಬೇಕು. ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೇರೆಪಿಸಬೇಕು ಎಂದು ತಿಳಿಸಿದರು.
ಭಾಗವಹಿಸುವ ತಂಡಗಳಿಗೆ ಶುಭಕೋರಿದರು.
ಪ್ರಮೋದ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಎಸ್.ಚಿನ್ನಪ್ಪ ಮಾತನಾಡಿ, ಈಗಾಗಲೇ ಕ್ರೀಡಾ ಪಂದ್ಯಾವಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದು, ಹಾವೇರಿ, ಚಿತ್ರದುರ್ಗ, ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಹೆಸರಾಂತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಮಹೇಶ್, ಮಂಜು ಅವರನನು ಸನ್ಮಾನಿಸಲಾಯಿತು.
ಶಿವಮೊಗ್ಗ ಫುಟ್‌ಬಾಲ್ ಜಿಲ್ಲಾ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಮಾತನಾಡಿ, 27 ವರ್ಷಗಳ ನಂತರ ಶಿವಮೊಗ್ಗದಲ್ಲಿ ಫುಟ್‌ಬಾಲ್ ರಾಜ್ಯಮಟ್ಟದ ಕ್ರೀಡೆ ನಡೆಯುತ್ತದೆ. ಪ್ರತಿ ವರ್ಷ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
S N Channabasappa ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್, ಕ್ರೀಡೆಯಿಂದ ಸದೃಡ ಆರೋಗ್ಯ ನಮ್ಮದಾಗುತ್ತದೆ. ಕಾಯಿಲೆಗಳಿಂದ ದೂರಾಗಬಹುದು ಎಂದು ಹೇಳಿದರು.
ಪ್ರಮೋದ್ ಫುಟ್ಬಾಲ್ ಕ್ಲಬ್ ಉಪಾಧ್ಯಕ್ಷ ನಾದನ್, ಅಂಟೋ, ಸನ್ನಿ, ಮೆಲ್ವಿನ್, ಉದ್ಯಮಿ ಮುಜೀಬ್, ಡಾ. ಹೇಮಾ ಮೋಹನ್ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.