Friday, November 22, 2024
Friday, November 22, 2024

R. Ashoka ಗುತ್ತಿಗೆದಾರರಿಗೆ ಹಣ ಪಾವತಿ ಪ್ರಕರಣ ವಿಚಾರಣಾ ಆಯೋಗ ರಚನೆ ಹಿನ್ನೆಲೆ, ಆಪಾದನೆಗಳು ಸರಿ ಇದ್ದಂತಿದೆ- ಆರ್.ಅಶೋಕ್

Date:

R. Ashoka ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವುದರಿಂದ ಬಚಾವಾಗಲು ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಆಯೋಗ ರಚಿಸಿದೆ ಎಂಬ ಗುತ್ತಿಗೆದಾರರ ಆಪಾದನೆ ಸರಿ ಇದ್ದಂತಿದೆ” ಎಂದು ಮಾನ್ಯ ಹೈಕೋರ್ಟ್ ಕಾಂಗ್ರೆಸ್
ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂದು ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಅವರು ಹೇಳಿದ್ದಾರೆ.

ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆಪಾದನೆ ಮಾಡಿ ಸುಳ್ಳು, ಅಪಪ್ರಚಾರದ ಮೂಲಕ ಅಧಿಕಾರಕ್ಕೆ ಬಂದ ಸಿ.ಎಂ. ಸಿದ್ದರಾಮಯ್ಯ
R. Ashoka ಸರ್ಕಾರ ಈಗ ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಕೊಟ್ಟು, ಕಮಿಷನ್ ಕೊಡದವರಿಗೆ ಹಣ ಬಿಡುಗಡೆ ಮಾಡದೆ ತನಿಖಾ ಆಯೋಗದ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದೆ.ತಮ್ಮ ಮೊದಲ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನ ದುರ್ಬಲಗೊಳಿಸುವ ಮೂಲಕ ಭ್ರಷ್ಟರನ್ನು ರಕ್ಷಿಸಲು ಹೋಗಿ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ
ಈಗ ಮತ್ತೊಮ್ಮೆ ರಂಗೋಲಿ ಕೆಳಗೆ ತೂರಲು ಹೋಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ.
ಸಿದ್ದರಾಮಯ್ಯನವರೇ, ತಮಗೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ತಮ್ಮ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ನೈತಿಕ ಹೊಣೆ ಹೊತ್ತು ಈ ಕೂಡಲೇ ರಾಜೀನಾಮೆ ನೀಡಿ ರಾಜ್ಯದ ಜನತೆಯ ಕ್ಷಮೆ ಕೇಳಿ. ಸ್ವತಃ ರಾಜ್ಯದ ಉಚ್ಛ ನ್ಯಾಯಾಲಯವೇ ತಮ್ಮ ಸರ್ಕಾರದ ಮೇಲೆ ಆಪಾದನೆ ಮಾಡುತ್ತಿರುವಾಗ ಸಿಎಂ ಸ್ಥಾನದಲ್ಲಿ ಒಂದು ಕ್ಷಣವೂ ಮುಂದುವರೆಯಲು ತಮಗೆ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

M.B.Patil 2025 ಫೆಬ್ರವರಿ 11.ಜಾಗತಿಕ ಹೂಡಿಕೆದಾರರ ಸಮಾವೇಶ.ಪೂರ್ವಸಿದ್ಧತೆ- ಸಚಿವ ಎಂ.ಬಿ.ಪಾಟೀಲ್

M.B.Patil 2025ರ ಫೆಬ್ರವರಿ 11 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ...

S.N.Chennabasappa ಮೆಗಾನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಸಿಬ್ಬಂದಿಗೆ ‘ಕ್ಲಾಸ್’ ತೆಗೆದುಕೊಂಡ ಶಾಸಕ “ಚೆನ್ನಿ

S.N.Chennabasappa ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ (ಮೆಗ್ಗಾನ್ ಆಸ್ಪತ್ರೆ) ಶಿವಮೊಗ್ಗ ನಗರ ಶಾಸಕರಾದ...