Bharatmala Project ಭಾರತ್ ಮಾಲಾ ಪರಿಯೋಜನೆ ಅಡಿಯಲ್ಲಿ ಎನ್.ಹೆಚ್.206ಕ್ಕೆ ಸಂಬಂಧಿಸಿದಂತೆ ನಾಲ್ಕು ಪಥ ನಿರ್ಮಾಣ ಕಾಮಗಾರಿಯು ಬೆಟ್ಟದಹಳ್ಳಿಯಿಂದ ಶಿವಮೊಗ್ಗದವರೆಗೆ ನಿರ್ವಹಿಸಲು ಈಗಿರುವ 66 ಕೆವಿ., 110 ಕೆವಿ ಹಾಗೂ 220 ಕೆವಿ ಪ್ರಸರಣ ಗೋಪುರಗಳನ್ನು ಸ್ಥಳಾಂತರಿಸಲು/ಮಾರ್ಪಾಡಿಸಲು ಗೋಪುರಗಳ ಜಾಗಕ್ಕೆ ಸಂಬಂಧಿಸಿದ ಭದ್ರಾವತಿ ತಾಲೂಕು ಕಾರೇಹಳ್ಳಿ, ಆನೇಕೊಪ್ಪ, ಬುಳ್ಳಾಪುರ, ಉಜ್ಜನಿಪುರ, ಭಂಡಾರಹಳ್ಳಿ, ಜನ್ನಾಪುರ, ಕಡದಕಟ್ಟೆ ಹಾಗೂ ಜೇಡಿಕಟ್ಟೆ ಪ್ರದೇಶಗಳ ಭೂ ಮಾಲೀಕರು ಈ Bharatmala Project ಯೋಜನೆಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು, ಶಿವಮೊಗ್ಗ ವಿಭಾಗ ಇವರ ಕಚೇರಿಗೆ ಈ ಪ್ರಕಟಣೆ ಪ್ರಕಟವಾದ 7 ದಿನಗಳೋಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು ತಿಳಿಸಿದ್ದಾರೆ.
Bharatmala Project ಬೆಟ್ಟದಹಳ್ಳಿಯಿಂದ ಶಿವಮೊಗ್ಗ ವರೆಗೆ ಪ್ರಸರಣಗೋಪುರ ಕಾಮಗಾರಿ, ಜಾಗಗಳ ಮಾಲೀಕರಿಗೆ ತಿಳುವಳಿಕೆ ಮಾಹಿತಿ
Date: