Aam Admi Party ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕಾಡಾನೆ ಹಾವಳಿ ಹಾಗೂ ಶ್ರೀಗಂಧಕ್ಕೆ ತಗುಲಿರುವ ಸ್ಪೆಂಕ್ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಿ ಶೀಘ್ರವೇ ಸಮಸ್ಯೆ ಪರಿಹರಿಸಬೇಕು ಎಂದು ಆಮ್‌ಆದ್ಮಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪತ್ರಿಕಾ ಹೇಳಿಕಾ ನೀಡಿರುವ ಅವರು ಕುಂದುಕೊರತೆ ಬಗ್ಗೆ ಸಮಗ್ರವಾಗಿ ಪರಿಶೀ ಲಿಸಿ ನಿಗಧಿಪಡಿಸಲಾದ ಕಾಲಾವಧಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲು ಜಿಲ್ಲಾಧಿಕಾರಿ, ಕಾರ್ಯದರ್ಶಿಗಳಿಗೆ ಸೂಚಿ ಸಲಾಗಿದೆ. ಅರ್ಜಿದಾರರ ಸೂಕ್ತ ಮಾಹಿತಿಯನ್ನು ಜನಸ್ಪಂದನ ಪೋರ್ಟಲ್‌ನಲ್ಲಿ ಕಾಲೋಚಿತಗೊಳಿಸಲು ಸಹ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಕಳೆದ ಹಲವಾರು ದಿನಗಳು ಕಾಡಾನೆ ಉಪಟಳದಿಂದ ರೈತರ ಬಹುತೇಕ ಬೆಳೆಗಳು ನಷ್ಟವಾಗಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರೈತರಿಗೆ ಪರಿಹಾರ ಒದಗಿಸುವ ಜೊತೆಗೆ ಪುನರ್ ಜೀವನಕ್ಕೆ ಒತ್ತು ನೀಡುವ ಮುಖಾಂತರ ಇಂತಹ ಸಮಸ್ಯೆಗಳು ಮರುಕಳಿಸದಂತೆ ಇಲಾಖೆಯು ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
Aam Admi Party ನಾಡಿನಲ್ಲಿ ಶ್ರೀಗಂಧ ಮರವು ಅತ್ಯಮೂಲ್ಯವಾಗಿದ್ದು ಸ್ಪೆöÊಕ್ ಕಾಯಿಲೆಯಿಂದ ಮರವು ನಾಶದ ಅಂಚಿನ ಲ್ಲಿರುವ ಕಾರಣ ವೈಜ್ಞಾನಿಕ ಸಂಶೋಧನೆ ನಡೆಸಿ ಸ್ಪೆಂಕ್ ಕಾಯಿಲೆಗೆ ಮದ್ದನ್ನು ಕಂಡುಹಿಡಿಯಬೇಕು. ಅದಲ್ಲದೇ ರೈತರಿಗೆ ಶ್ರೀಗಂಧ ಬೆಳೆಯ ಮಹತ್ವನ್ನು ಸರ್ಕಾರದ ಮುಖಾಂತರ ತಿಳಿಸಿ ಶ್ರೀಗಂಧ ಸಸಿ ಬೆಳೆಸಲು ಉತ್ತೇಜಿಸಬೇಕು ಎಂದು ತಿಳಿಸಿದ್ದಾರೆ.
ನಗರದಲ್ಲಿ ಯುಜಿಡಿ ಅವೈಜ್ಞಾನಿಕ ಕಾಮಗಾರಿಯಿಂದ ಕುಡಿಯುವ ನೀರು ಮಾಲಿನ್ಯವಾಗುವ ಜೊತೆಗೆ ಕೊಳಚೆ ಪ್ರದೇಶಗಳು ನಿರ್ಮಾಣವಾಗಿ ಡೆಂಗ್ಯೂ, ಜ್ವರವು ವ್ಯಾಪಕವಾಗಿ ಹರಡುತ್ತಿದೆ. ನಗರಸಭೆಯು ನಿವಾಸಿಗಳ ಆರೋಗ್ಯ ಮೇಲಿರುವ ಕಾಳಜಿ ಇಂತಹ ಕಾಮಗಾರಿಯಿಂದ ತೋರ್ಪಡಿಸುತ್ತಿದೆ ಎಂದಿದ್ದಾರೆ.
ಕೂಡಲೇ ನಗರಸಭೆಯು ಎಚ್ಚೆತ್ತುಕೊಂಡು ಕೊಳಚೆ ಪ್ರದೇಶ ಹಾಗೂ ನೀರಿನ ಮಾಲಿನ್ಯವನ್ನು ತಡೆಗಟ್ಟ ಬೇಕು. ಜೊತೆಗೆ ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಕಡಿವಾಣ ಹಾಕದಿದ್ದಲ್ಲಿ ಎಎಪಿ ವತಿಯಿಂದ ಕಚೇರಿ ಮುಂಭಾಗದಲ್ಲಿ ಮಾಲಿನ್ಯ ನೀರಿನ ಮುಖಾಂತರ ಬೀದಿನಾಟಕ, ಭ್ರಷ್ಟಾಚಾರ ನಿಲ್ಲಿಸಲು ಪ್ರತಿಭಟನೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಜೊತೆಗೂಡಿ ಸರಣ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.