Nayana Motamma ಚಿಕ್ಕಮಗಳೂರು ಗ್ರಾಮೀಣ ಪ್ರದೇಶ ರಸ್ತೆಗಳ ಕಾಂಕ್ರೀಟೀಕರಣ ಅತ್ಯಂತ ಗುಣಮಟ್ಟತೆ ಯಿಂದ ಕೂಡಿರಬೇಕು. ಉತ್ತಮ ರಸ್ತೆ ನಿರ್ಮಿಸುವ ಮುಖಾಂತರ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಸೂಚನೆ ನೀಡಿದರು.
ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಹೋಬಳಿಯ ಹೆಡದಾಳು ಗ್ರಾಮದ ಮಾವಿನಗುಣ ರಸ್ತೆಗೆ ಎಂ.ಡಿ.ಆರ್. ಯೋಜನೆಯ ಡಿ 1.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಂಕ್ರೀಟೀಕರಣಕ್ಕೆ ಗುರುವಾರ ಗುದ್ದಲಿಪೂಜೆ ನೆರ ವೇರಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಸಮರ್ಪಕ ರಸ್ತೆ ನಿರ್ಮಿಸುವ ಸಂಬಂಧ ಗ್ರಾಮಸ್ಥರ ಬೇಡಿ ಕೆಯಿದ್ದ ಹಿನ್ನಲೆಯಲ್ಲಿ 1.6 ಕಿ.ಮೀ.ಗೆ ಕಾಂಕ್ರೀಟೀಕರಣಕ್ಕೆ ಅನುದಾನ ಬಿಡುಗಡೆ ಮಾಡಿ ಗುತ್ತಿಗೆದಾರರಿಗೆ ವಹಿಸಲಾ ಗಿದ್ದು ಗ್ರಾಮಸ್ಥರ ಪ್ರತಿಯೊಂದು ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ತಿಳಿಸಿದರು.
Nayana Motamma ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದು ಹಲವಾರು ಜನಪರ ಯೋಜನೆಗಳನ್ನು ರೂಪಿಸಿದೆ. ಮುಖ್ಯಮಂತ್ರಿಗಳು ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ರೈತರಿಗೆ ಒತ್ತು ನೀಡುತ್ತಿರುವ ಜೊತೆಗೆ ಗ್ರಾಮಗಳ ಇತರೆ ಸವಲತ್ತುಗಳನ್ನು ಒದಗಿಸುವ ಮೂಲಕ ಪ್ರಾಮಾಣ ಕ ಕೆಲಸ ಮಾಡಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿ ರಸ್ತೆ ಕಾಮಗಾರಿ ಸಂಬಂಧ ಹಂತ ಹಂತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗು ವುದು ಎಂದ ಅವರು ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕು. ಕಾಂಕ್ರೀಟೀಕರಣ ಪೂರ್ಣಗೊಳಿಸಲು ವೇಳೆಯಲ್ಲಿ ಗ್ರಾಮಸ್ಥರು ಆಗಾಗ ಕಾಮಗಾರಿಯನ್ನು ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ಕೋಟೆಯೂರು ಗ್ರಾಮಸ್ಥ ಎಂ.ಎಸ್.ಸಚಿನ್ ಮಾತನಾಡಿ ಹಲವಾರು ಸಮಯದಿಂದ ಗ್ರಾಮಸ್ಥರು, ಶಾಲಾ ಮಕ್ಕಳು ಹಾಗೂ ವೃದ್ದರಿಗೆ ಈ ರಸ್ತೆಯಲ್ಲಿ ಸಂಚರಿಸಲು ಸಮಸ್ಯೆಯಾಗುತ್ತಿತ್ತು. ಇದೀಗ ಸರ್ಕಾರ ಗ್ರಾಮಸ್ಥರ ನೆರ ವಿಗೆ ಧಾವಿಸಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದು ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ ಎಂದರು.
ಈ ಸಂದರ್ಭದಲ್ಲಿ ಆಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್‌ಕುಮಾರ್, ಸದಸ್ಯರಾದ ಲೀಲಾವತಿ ಪುಟ್ಟರಾಜು, ಹೆಚ್.ಎನ್.ಲೋಕೇಶ್, ಗ್ರಾಮಸ್ಥರಾದ ಲೋಕೇಶ್, ಜಯರಾಮ್, ಎಂ.ಜೆ.ಸುರೇಶ್, ಸುಬ್ರಹ್ಮಣ್ಯ ಗೌಡ, ಶಂಕರ್, ಧರ್ಮೇಶ್, ಗುತ್ತಿಗೆದಾರ ವಿಶ್ವನಾಥ್ ಮತ್ತಿತರರು ಹಾಜರಿದ್ದರು.
