Saturday, September 28, 2024
Saturday, September 28, 2024

Electricity Supply Company ಕಟ್ಟಡಗಳ ವಿದ್ಯುತ್ ವೈರಿಂಗನ್ನು ಐದು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿ ವಿದ್ಯುತ್ ಅಪಘಾತ ತಪ್ಪಿಸಿ-ಜೆ.ಎಸ್.ಲೋಕೇಶ್

Date:

Electricity Supply Company ಸಮಯಕ್ಕೆ ಸರಿಯಾಗಿ ವಿದ್ಯುತ್ ಶುಲ್ಕ ಮೊತ್ತವನ್ನು ಸಂದಾಯ ಮಾಡು ವುದರಿಂದ ಶುಲ್ಕಕ್ಕೆ ಸಂಬoಧಿಸಿದ ತಗಾದೆಗಳು ಮತ್ತು ಹಿಂಬಾಕಿಯ ದೂರುಗಳು ಕಡಿಮೆಯಾಗಲಿದೆ ಎಂದು ಮೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ಅಧೀಕ್ಷಕ ಇಂಜಿನಿಯರ್ ಜೆ.ಎಸ್.ಲೋಕೇಶ್ ಹೇಳಿದರು.

ಚಿಕ್ಕಮಗಳೂರು ನಗರದ ಮೆಸ್ಕಾಂ ನೌಕರರ ಭವನದಲ್ಲಿ ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ನಿಯಮಿತ ಹಾಗೂ ಜಿಲ್ಲಾ ಮೆಸ್ಕಾಂ ಕಾರ್ಯ ಮತ್ತು ಪಾಲನಾ ವೃತ್ತ ವತಿಯಿಂದ ಏರ್ಪಡಿಸಿದ್ದ ವಿದ್ಯುಚ್ಚಕ್ತಿ ಗ್ರಾಹಕರ ಜಾಗೃತಿ ಅರಿವು ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡಗಳ ವೈರಿಂಗ್‌ನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರಿಂದಲೇ ಮಾಡಿಸುವುದು ಮತ್ತು ಕನಿಷ್ಟ ಐದು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸುವುದರಿಂದ ವೈರಿಂಗ್ ದೋಷಗಳಿಂದ ಉಂಟಾಗುವ ಅವಘಡಗಳನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಒಂದು ಸ್ಥಳಕ್ಕೆ ನೀಡಿದ ಸಂಪರ್ಕವನ್ನು ಬೇರೊಂದು ಸ್ಥಳದಲ್ಲಿ ಬಳಸಿಕೊಳ್ಳಬಾರದು. ಒಂದು ಸಂಪರ್ಕ ವನ್ನು ಯಾರೊಬ್ಬರೂ ಬೇರೊಂದು ಸ್ಥಳಕ್ಕೆ ಬಳಸಿಕೊಳ್ಳಲು ಸಂಪರ್ಕವನ್ನು ವಿಸ್ತರದಿದಂತೆ ಎಚ್ಚರಿಕೆ ವಹಿಸಬೇಕು. ಮೀಟರ್ ಇಲ್ಲದೇ ವಿದ್ಯುತ್ ಉಪಯೋಗಿಸುವುದು ಕಳವು ಎನಿಸಿಕೊಳ್ಳಲಿದೆ. ಅಂತಹ ಸಂಪರ್ಕ ಕಂಡುಬoದಲ್ಲಿ ಮೆಸ್ಕಾಂ ಗಮನಕ್ಕೆ ತರಬೇಕು ಎಂದು ತಿಳಿಸಿದರು.

ವಿದ್ಯುತ್‌ನ್ನು ಅತ್ಯಂತ ಎಚ್ಚರಿಕೆಯಿಂದ ಬಳಸಿ ಮತ್ತು ವಿದ್ಯುತ್ ಉಳಿಸಲು ಅವಶ್ಯವಾದ ಎಲ್ಲಾ ಕ್ರಮಗಳನ್ನು ಅನುಸರಿಸಬೇಕು. ವಿದ್ಯುತ್ ಕಂಪನಿಯ ಸೊತ್ತುಗಳಿಗೆ ಹಾನಿ ಮಾಡದಂತೆ ನಿಗಾವಹಿಸಬೇಕು. ವಿದ್ಯುತ್ ಪಡೆದ ಉದ್ದೇಶಕ್ಕೆ ಮಾತ್ರವಲ್ಲದೇ ಬರ‍್ಯಾವ ಕಾರಣಕ್ಕೂ ಬಳಸಬಾರದು. ಮನೆಗೆಂದು ಪಡೆದು ವಾಣಿಜ್ಯ ಉದ್ದೇಶಕ್ಕಾಗಿ ಉಪಯೋಗಿಸುವುದನ್ನು ಅನಧಿಕೃತ ಬಳಕೆಯಾಗಲಿದೆ ಎಂದರು.

Electricity Supply Company ಮೆಸ್ಕಾo ಕಾರ್ಯ ಮತ್ತು ಪಾಲನಾ ವಿಭಾಗೀಯ ಕಚೇರಿಯ ಕಾರ್ಯನಿರ್ವಹಕ ಇಂಜಿನಿಯರ್ ಜಿ. ಮಾರುತಿ ಮಾತನಾಡಿ ಗ್ರಾಹಕರು ಸುತ್ತಮುತ್ತಲು ವಿದ್ಯುತ್ ಹಾನಿ ಕಂಡುಬoದಲ್ಲಿ ಆ ಬಗ್ಗೆ ಕಂಪನಿಗೆ ಮಾಹಿತಿ ನೀಡಬೇಕು. ಸೇವೆಯ ಬಗ್ಗೆ ನಿಮಗೆಮ ಅಸಮಾಧಾನವಿದ್ದಲ್ಲಿ ಕಾನೂನುಬದ್ಧ ವಿಧಾನಗಳನ್ನು ಬಳಸಿ. ಯಾವುದೇ ಕಾರಣಕ್ಕೂ ಶಾಂತಿಭoಗ ಮಾಡುವ ಅಥವಾ ಸಾರ್ವಜನಿಕ ಸೊತ್ತಿಗೆ ನಷ್ಟವಾಗದಂತೆ ನಡೆದುಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಹಕ ಮಂಜೂರಾದ ವಿದ್ಯುಚ್ಚಕ್ತಿ ಲೋಡ್‌ಗೆ ಅನುಗುಣವಾದ ವಿದ್ಯುತ್ ಮೀಟರ್‌ನ್ನು ಅಳವಡಿಸಿಕೊಳ್ಳ ಬೇಕು. ಇದನ್ನು ವಿದ್ಯುತ್ ಸರಬರಾಜು ಕಂಪನಿಗೆ ತಿಳಿಸುವ ಜೊತೆಗೆ ಸೀಲ್ ಮಾಡಿಸಿಕೊಳ್ಳಬೇಕು. ಇದರ ಸುರಕ್ಷತೆ ಗ್ರಾಹಕರ ಹೊಣೆ ಎನ್ನುವುದು ಗಮನದಲ್ಲಿರಬೇಕು ಎಂದು ಹೇಳಿದರು.

ಇದೇ ವೇಳೆ ಬಳಕೆದಾರರ ವೇದಿಕೆ ಅಧ್ಯಕ್ಷ ವೆಂಕಟಗಿರಿ, ನಿವೃತ್ತ ಲೆಕ್ಕ ನಿಯಂತ್ರಣಾಧಿಕಾರಿ ಗೋಪಾಲ ಕೃಷ್ಣ ವಿದ್ಯುಚ್ಚಕ್ತಿ ಸೇವೆಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಮೆಸ್ಕಾಂ ಉಪಲೆಕ್ಕನಿಯಂತ್ರಣಾಧಿಕಾರಿ ಪ್ರದೀಪ್, ವಿಭಾಗದ ಮುಖ್ಯಗುಮಾಸ್ತ ಸಿ.ಆರ್. ಮಿಥುನ್, ಕಾರ್ಮಿಕ ಮುಖಂಡರುಗಳಾದ ಸತೀಶ್, ಲೋಕೇಶ್, ವಿರೂಪಾಕ್ಷ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...