Rotary Club Shimoga ಭಾರತ ಒಕ್ಕೂಟ ವ್ಯವಸ್ಥೆಯ ರಾಷ್ಟ್ರ, ಸರ್ವರಿಗೂ ಸಮಬಾಳು ಮತ್ತು ಸಮಪಾಲು ಎಂಬ ತತ್ವವನ್ನು ನಮ್ಮ ಸಂವಿಧಾನ ರಚನೆಯಾಗಿದೆ. ಇಂದಿಗೂ ನಮ್ಮ ರಾಷ್ಟ್ರದ ಆರ್ಥಿಕ ಬೆನ್ನೆಲುಬು ರೈತರು ಎಂದು ರೋಟರಿ ಶಿವಮೊಗ್ಗ ಜುಬಿಲಿಯ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವಹಿಸಿ ಮಾತನಾಡುತ್ತಿದ್ದರು.
ರಾಷ್ಟ್ರದಲ್ಲಿ ಕೃಡೀಕರಿಸಿದ ತೆರಿಗೆ, ಸಂಪತ್ತು ಸಮನಾಗಿ ಹಂಚಬೇಕೆಂದು ಡಾ.ಭಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರಚನೆಯಲ್ಲಿ ಸಪ್ಪಷ್ಟವಾಗಿ ತಿಳಿಸಿ ಎಲ್ಲಾ ರಾಜ್ಯದಿಂದ ಸಹಿ ಪಡೆದು ಒಕ್ಕೂಟ ರಚಿಸಿದ್ದಾರೆ. ಈಗ ಯಾರೂ ಏನೂ ಮಾಡುವಂತಿಲ್ಲ.
ಸಂವಿಧಾನ ಬದ್ಧವಾಗಿ ಪ್ರತಕ್ಷ ಮತ್ತು ಪರೋಕ್ಷವಾಗಿ ಕೇಂದ್ರ ಸರ್ಕಾರ ಹೈವೆ, ರೈಲ್ವೆ, ವಿಮಾನ ನಿಲ್ದಾಣ ಮುಂತಾದ ಯೋಜನೆಗಳನ್ನು ಹಮ್ಮಿಕೊಂಡು ಪ್ರಾದೇಶಿಕ ಅಭಿವೃದ್ಧಿಗೆ ನೆರವು ನೀಡುತ್ತದೆ.
ನಮ್ಮ ದೇಶದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯಲಾಗಿತ್ತು. ಮನಮೋಹನ್ ಸಿಂಗ್ ರವರ ಆರ್ಥಿಕ ನೀತಿಯಿಂದ, ವಿದೇಶದಿಂದ ಹೂಡಿಕೆ ಹರಿದುಬಂದು ಅಮೇರಿಕ, ಚೀನಾದ ನಂತರ ಇಂದು ವಿಶ್ವದ ಮೂರನೇ ಸ್ಥಾನಕ್ಕೆ ಭಾರತ ಏರಿದೆ.
ಆರ್ಥಿಕ ಸಬಲೀಕರಣ ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ವಾಜಪೇಯಿ ರವರಿಗೆ ಆರ್.ಬಿ.ಐ. ಗೌರ್ನರ್ ಆಗಿದ್ದ ಮನಮೋಹನ್ ಸಿಂಗ್ ನೀಡಿದ ಸಲಹೆ ಒಂದು ಲೀಟರ್ ಪೆಟ್ರೋಲ್ ಗೆ ಒಂದು ರೂಪಾಯಿ ಹೆಚ್ಚಿಸಿ, ಬಂದ ಆದಾಯದಿಂದ ರಸ್ತೆ ಅಭಿವೃದ್ಧಿ ಪಡಿಸಿ ಗ್ರಾಮಾಂತರ ಪ್ರದೇಶ ಅಭಿವೃದ್ಧಿ ಹೊಂದಿ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಹೆಚ್ಚಾಗಿ ಭಾರತ ಇಂದು ವಿಶ್ವಕ್ಕೆ ಆಹಾರ ಸರಬರಾಜು ಮಾಡುತ್ತಿದೆ. ರಚನಾತ್ಮಕ ಆರ್ಥಿಕತೆಯಿಂದ ಆಶ್ರಯ, ಆಹಾರ, ಆರೋಗ್ಯ, ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ವೆಚ್ಚ ಮಾಡುತ್ತಿದೆ.
ಕರ್ನಾಟಕದ ದಕ್ಷಿಣ ಭಾಗದಲ್ಲಿ ಹೆಚ್ಚು ಆದಾಯ ಇದೆ. ಆದರೆ ಶೇ.೮೦ ಭಾಗ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವೆಚ್ಚ ವಾಗುತ್ತದೆ. ನಮ್ಮ ದೇಶ ಸ್ವಾಭಿಮಾನಿ, ಇದುವರೆಗೆ ಬಡ್ಡಿ ರಹಿತ ಸಾಲ ಪಡೆದಿಲ್ಲ. ಇದುವರೆಗೆ ಪಡೆದ ಸಾಲವನ್ನು ಚುಕ್ತಾ ಮಾಡಿ ಆರ್ಥಿಕವಾಗಿ ಭಲಾಡ ರಾಗಿದ್ದೇವೆ ಎಂದರು.
Rotary Club Shimoga ಅಧ್ಯಕ್ಷ ರೋ.ರೇಣುಕಾ ಆರಾಧ್ಯ ಸ್ವಾಗತಿಸಿದರು,ವಾಗೇಶ ನಿರೂಪಿಸಿದರು, ಕಾರ್ಯದರ್ಶಿ ರೂಪ ವಂದಿಸಿದರು. ರಾಜು, ಭಾರದ್ವಾಜ್, ಅಶ್ವತ್, ವೆಂಕಟೇಶ್, ನಾಗರಾಜ್, ಲಕ್ಷ್ಮೀನಾರಾಯಣ, ಪಾಟೀಲ್, ರಾಜಶೇಖರ್ ಮತ್ತು ಸದಸ್ಯರು ಇದ್ದರು.