Ayodhya Ram Mandir ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಿದೆ.
ಬಾಲ ರಾಮನ ದರ್ಶನ ಪಡೆಯಲು ಸಹಸ್ರಾರು ಭಕ್ತ ಸಮೂಹ ಅಯೋಧ್ಯೆ ಗೆ ಪ್ರಯಾಣ ಮಾಡುತ್ತಿದ್ದಾರೆ. ರಾಮನ ಭಕ್ತರು ರಾಮನ ದರ್ಶನ ಪಡೆದು ಹರಕೆ ರೂಪದಲ್ಲಿ ದೇವಾಲಯದ ಹುಂಡಿಗೆ ಕಾಣಿಕೆ ಸಲ್ಲಿಸುತ್ತಿದ್ದಾರೆ.
ಇದರಿಂದ ರಾಮಮಂದಿರದ ಕಾಣಿಕೆ ಡಬ್ಬಿಗಳು ತುಂಬುತ್ತಿವೆ. ಈಗಾಗಲೇ ದೇವಾಲಯದಲ್ಲಿ ಕಾಣಿಕೆ ಡಬ್ಬಿಗಳನ್ನು ಎಣಿಸಲು 11 ಮಂದಿ ಬ್ಯಾಂಕ್ ಸಿಬ್ಬಂದಿ ಹಾಗೂ 3 ಜನ ದೇವಾಲಯದ ನೌಕರರನ್ನು ನೇಮಿಸಲಾಗಿದೆ.
Ayodhya Ram Mandir ರಾಮ ಮಂದಿರ ಟ್ರಸ್ಟ್ ಪ್ರಕಾರ, ರಾಮಲಲ್ಲಾನ ಪ್ರತಿಷ್ಠಾಪನೆಯ ನಂತರ, 25 ಲಕ್ಷಕ್ಕೂ ಹೆಚ್ಚು ರಾಮ ಭಕ್ತರು ರಾಮಲಲ್ಲಾನನ್ನು ಭೇಟಿ ಮಾಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಕಾರ, ಜನವರಿ 22 ರಿಂದ ಫೆಬ್ರವರಿ 1 ರವರೆಗೆ, ರಾಮಮಂದಿರದಲ್ಲಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ರಾಮ ಭಕ್ತರಿಂದ 8 ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ಬಂದಿದೆ. ಆನ್‌ಲೈನ್‌ನಲ್ಲಿ ಸುಮಾರು 3.50 ಕೋಟಿ ರೂ. ಆಗಿದೆ.