Health News ಆಯುಷ್ಮಾನ್ ಆರೋಗ್ಯ ಮಂದಿರಗಳಿಗೆ ಅರೆಕಾಲಿಕ ಯೋಗ ತರಬೇತುದಾರರನ್ನು ನೇಮಿಸಲು ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಾದ ಹೊಸನಗರ ತಾಲ್ಲೂಕಿನ ಹರತಾಳು, ಪುರಪ್ಪೆಮನೆ, ಭದ್ರಾವತಿ ತಾಲ್ಲೂಕಿನ ಮೈದೊಳಲು ಇಲ್ಲಿ ತಲಾ 2 ಯೋಗ ತರಬೇತುದಾರರು (1-ಪುರುಷ, 1-ಮಹಿಳೆ) ಮತ್ತು ಭದ್ರಾವತಿಯ ಹನುಂತಾಪುರದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ 1 ಯೋಗ ತರಬೇತಿದಾರ(1-ಪುರುಷ) ಒಟ್ಟು 07 ಯೋಗ ತರಬೇತುದಾರರ ಸೇವೆಯನ್ನು 11 ತಿಂಗಳ ಅವಧಿಗೆ ಪಡೆಯಲು ಫೆ.9 ರ ಮಧ್ಯಾಹ್ನ 2.30 ರಿಂದ 4 ಗಂಟೆವರೆಗೆ ಶಿವಮೊಗ್ಗದ ಜಿಲ್ಲಾ ಆಯುಷ್ ಕಚೇರಿಯಲ್ಲಿ ನೇರ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಅದೇ ದಿನ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಕಚೇರಿಯಲ್ಲಿ ಅರ್ಜಿಗಳನ್ನು ಪಡೆದು ಸಲ್ಲಿಸಬಹುದು.
Health News ವಿದ್ಯಾರ್ಹತೆ, ವಯೋಮಿತಿ ಮತ್ತು ಗೌರವಧನ ಇತರೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿಯನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
