Monday, February 2, 2026
Monday, February 2, 2026

Good Luck Care Center ಟಿಪಿ ಸತ್ಯನಾರಾಯಣ ಸ್ಮರಣಾರ್ಥ ಗುಡ್ ಲಕ್ ಆರೈಕೆ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ 1 ಲಕ್ಷ ರೂ ದೇಣಿಗೆ

Date:

Good Luck Care Center ಮನುಕುಲದ ಸೇವೆಯನ್ನು ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಶಿವಮೊಗ್ಗ ನಗರದ ಲಕ್ಷ್ಮಿ ಫೈನಾನ್ಸ್ ನ ದಿವಂಗತ ಟಿಪಿ ಸತ್ಯನಾರಾಯಣ ಅವರ ಸ್ಮರಣಾರ್ಥ ಇಂದು ಗಜಾನನ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ಕಟ್ಟಡಕ್ಕೆ ಅವರ ಧರ್ಮಪತ್ನಿ ಲಕ್ಷ್ಮಿ ಸತ್ಯನಾರಾಯಣ, . ಟಿ ಎಸ್ ಬದರೀನಾಥ್. ಸೊಸೆ ಸ್ವಪ್ನ ಬದ್ರಿನಾಥ್ ಅವರು ರೂ.1 ಲಕ್ಷ ದೇಣಿಗೆಯನ್ನು ಕೇಂದ್ರದ ಅಧ್ಯಕ್ಷರಾದ ಯು. ರವೀಂದ್ರನಾಥ್ ಐತಾಳ್ ಅವರಿಗೆ ಹಸ್ತಾಂತರ ಮಾಡಿದರು.

ಇದೇ ಸಂದರ್ಭದಲ್ಲಿ ಬದರಿನಾಥ್ ಅವರು ಮಾತನಾಡುತ್ತ. ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ. ಮನುಕುಲದಲ್ಲಿ ನಿಜವಾದ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಅವರ ಅವಶ್ಯಕತೆಗೆ ಸ್ಪಂದಿಸಿದರೆ ಅರ್ಥಪೂರ್ಣ. ನಮ್ಮ ಪೂಜ್ಯ ತಂದೆಯವರಾದ ಟಿಪಿ ಸತ್ಯನಾರಾಯಣ ಅವರು ಸಹ ಫ್ರೆಂಡ್ಸ್ ಸೆಂಟರ್
ರೋಟರಿ. ಹಾಗೂ ಹಲವಾರು ಸಮಾಜಮುಖಿ ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.

Good Luck Care Center ಅವರ ಆಶಯದಂತೆ ಪ್ರತಿ ವರ್ಷ ಇಂತಹ ಮನುಕುಲದ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನು ಗುರುತಿಸಿ ನಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದೇವೆ ಎಂದು ನುಡಿದರು.

ನಾವು ನೀಡಿದ ದೇಣಿಗೆ ಸದ್ಬಳಕೆಯಾಗಲಿ ಎಂದು ಕೇಳಿಕೊಂಡರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಯು. ರವೀಂದ್ರನಾಥ ಅವರು ಮಾತನಾಡುತ್ತಾ ಆಶ್ರಮವಾಸಿಗಳಿಗಾಗಿ ನಿರ್ಮಾಣಗೊಳ್ಳುತ್ತಿರುವ ಗುಡ್ ಲಕ್ ಅರೈಕೆ ಕೇಂದ್ರದ ಕಟ್ಟಡಕ್ಕೆ ಹಣದ ಅವಶ್ಯಕತೆ ತುಂಬಾ ಇದ್ದು ಇಂತಹ ದಾನಿಗಳಿಂದ ಅದು ನಿರ್ಮಾಣವಾಗುತ್ತಿದೆ ಎಂದ ಅವರು ಸೇವೆ ಮಾಡಿದ ಕೈಗಳು ಎಂದೂ ಸೋಲುವುದಿಲ್ಲ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸೇವೆ ಮಾಡುವ ಶಕ್ತಿ ದೇವರು ಬರಿಸಲಿ ಎಂದು ನುಡಿದರು.

ನಿರ್ದೇಶಕರಾದ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ ನಮ್ಮ ಆರೈಕೆ ಕೇಂದ್ರದಲ್ಲಿ ಹುಟ್ಟುಹಬ್ಬ ವಿವಾಹ ವಾರ್ಷಿಕೋತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ನಮ್ಮ ಆರೈಕೆ ಕೇಂದ್ರಗಳಲ್ಲಿ ಆಚರಣೆ ಮಾಡುವುದರ ಮುಖಾಂತರ ಸೇವೆ ಸಲ್ಲಿಸಬಹುದಾಗಿದೆ ಎಂದು ನುಡಿದರು ಹಾಗೂ ನಿತ್ಯ ಅನ್ನಪೂರ್ಣ ಪ್ರಸಾದ ಯೋಜನೆಯು ಸಹ ಜಾರಿಯಲ್ಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೊಮ್ಮಕ್ಕಳಾದ ಶ್ರೇಯಾ. ದಿಯಾ. ಹಾಗೂ ಗುಡ್ ಲಕ್ ಅರೈಕೆ ಕೇಂದ್ರದ ಉಪಾಧ್ಯಕ್ಷ ಶಿವಪ್ಪ ಗೌಡ. ನಿರ್ದೇಶಕರಾದ ಶ್ರೀನಿವಾಸ ಮತ್ತು ಕಾರ್ಯದರ್ಶಿ ಪಂಚಾಕ್ಷರಿ ಹಿರೇಮಠ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...