Friday, December 5, 2025
Friday, December 5, 2025

D S Arun ಸಂಘಟನಾತ್ಮಕ ಶಕ್ತಿ ವೃದ್ಧಿಸಿದಾಗ ಯಶಸ್ಸು ಸಾಧ್ಯ – ಡಿ.ಎಸ್.ಅರುಣ್

Date:

D S Arun ಧನಾತ್ಮಕ ಅಲೋಚನೆಯೊಂದಿಗೆ ಸಮುದಾಯದ ಜನರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡು ಮುನ್ನಡೆದಲ್ಲಿ ನಮ್ಮೆಲ್ಲರ ಉದ್ಯಮದ ಬೆಳವಣಿಗೆ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಅಭಿಪ್ರಾಯಪಟ್ಟರು.

ಶಿವಮೊಗ್ಗ ನಗರದ ಶುಭಂ ಸಭಾಂಗಣದಲ್ಲಿ ಆರ್ಯವೈಶ್ಯ ಸಮುದಾಯದ ” ನಾವು ವೈಶ್ಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತಿನಲ್ಲಿ ಇರುವ ಅವಕಾಶಗಳ ಬಗ್ಗೆ ” ನಾವು ವೈಶ್ಯ – We Vysya ” ಸಮುದಾಯವು ನಮ್ಮೆಲ್ಲರಿಗೂ ಉಪಯೋಗ ಆಗುವಂತೆ ವೇದಿಕೆ ಸೃಷ್ಟಿಸುತ್ತದೆ. ಪ್ರತಿ ಉದ್ಯಮಿಯು ಹೊಸ ಪ್ರಯತ್ನದ ಜತೆ ಕೈಜೋಡಿಸಬೇಕು. ನಾವು ಒಟ್ಟಾಗಿ ಬೆಳೆಯೋಣ ಎಂದು ಶುಭ ಕೋರಿದರು.

ಯುವ ಉದ್ಯಮಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಈಗಾಗಲೇ ವೃತ್ತಿ ಕ್ಷೇತ್ರದಲ್ಲಿ ಇರುವವರು ಸೂಕ್ತ ಮಾರ್ಗದರ್ಶನ ನೀಡಬೇಕು. ಉದ್ಯಮದಲ್ಲಿ ಎದುರಾಗುವ ಸವಾಲು ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ತಿಳುವಳಿಕೆ ನೀಡಬೇಕು. ಇದರಿಂದ ಎಲ್ಲರೂ ಒಟ್ಟಾಗಿ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಉದ್ಯಮಿ ಟಿ.ಆರ್.ಅಶ್ವತ್ಥ್ ನಾರಾಯಣ ಶೆಟ್ಟಿ ಮಾತನಾಡಿ, ಆರ್ಯವೈಶ್ಯ ಸಮುದಾಯದ ಜನರು ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಉದ್ಯಮಿ‌ಗಳಾಗಿದ್ದು, ನಾವು ಎಲ್ಲರೂ ಒಟ್ಟಿಗೆ ಸೇರಿಸಿಕೊಂಡು ಉದ್ಯಮ ನಡೆಸಿದಾಗ ಸಮುದಾಯದ ಎಲ್ಲರೂ ಬೆಳವಣಿಗೆ ಹೊಂದುವುದು ಸಾಧ್ಯವಿದೆ ಎಂದು ಹೇಳಿದರು.

ಆರ್ಯವೈಶ್ಯ ಸಮುದಾಯವು ಉದ್ಯಮದ ಜತೆಯಲ್ಲಿ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲೂ ಎಲ್ಲರ ಬೆಂಬಲದಿಂದ ಯುವಜನತೆ ಹೆಚ್ಚು ತೊಡಗಿಸಿಕೊಳ್ಳಬೇಕು. ಸಮುದಾಯದ ಜನರು ಪ್ರತಿಯೊಂದು ಕ್ಷೇತ್ರದಲ್ಲೂ ತೊಡಗಿಸಿಕೊಂಡು ಪರಸ್ಪರ ಸಹಕಾರ ಹಾಗೂ ಬೆಂಬಲ ನೀಡಬೇಕು ಎಂದು ಸಲಹೆ ನೀಡಿದರು.

D S Arun ” ನಾವು ವೈಶ್ಯ ” ಸ್ಥಾಪಕ ಅನಿಲ್ ಗುಪ್ತ , ಶಿವಮೊಗ್ಗ ವಿಭಾಗದ ಸಂಚಾಲಕ ಟಿ.ಎಸ್.ಎನ್.ಮೂರ್ತಿ, ರಾಜ್ಯ ಅಧ್ಯಕ್ಷ ಗಣೇಶ್, ಸಮಿತಿ ಸದಸ್ಯರಾದ ಸಂಜಯ್, ಉನ್ನತಿ, ನವೀನ್, ಗಣೇಶ್, ಸಂದೇಶ್, ಸುಪ್ರೀತ್, ಅಜಯ್, ಶ್ರೀನಿವಾಸ್, ಗುಪ್ತಾ, ಶಿವಮೊಗ್ಗದ ಬದ್ರೀನಾಥ್.ಟಿ.ಎಸ್., ಚೇತನ್, ವೆಂಕಟೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...