IFEX 2024 Material Exhibition ದಿ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಪೌಂಢೇಶನ್ ವತಿಯಿಂದ ಫೆಬ್ರವರಿ 2, 3 ಹಾಗೂ 4 ರಂದು ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಕೇಂದ್ರದಲ್ಲಿ 72ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಅಂಡ್ ಐಎಫ್‌ಇಎಕ್ಸ್ 2024 ವಸ್ತು ಪ್ರದರ್ಶನ ಮತ್ತು ಕಾರ್ಯಾಗಾರ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ ಹಾಗೂ ಕಾರ್ಯಾಗಾರ ಸಮಾರಂಭವನ್ನು ಮೆರಿಟೋರ್ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಮುತ್ತುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸುವರು.
ವೋಲ್ವೋ ಗ್ರೂಪ್ ಪರ್ಚಸಿಂಗ್ ಉಪಾಧ್ಯಕ್ಷ ಗಿರೀಶ್ ಡಿ.ಎಂ. ಪ್ರಸ್ತುತ ವಿದ್ಯಮಾನದಲ್ಲಿ ಬಳಕೆಯಾಗುತ್ತಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಟೋಮೊಬೈಲ್ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರಗಳ ಬಗ್ಗೆ ವಿವರಿಸುವರು.
ಆಟೋಮೊಬೈಲ್, ಅರ್ಥ್ ಮೂವಿಂಗ್, ಪಂಪ್ಸ್ ಅಂಡ್ ವಾಲ್ಸ್, ಎರೋಸ್ಪೇಸ್, ಡಿಫೆನ್ಸ್ ಸೇರಿ ಹಲವು ಕ್ಷೇತ್ರಗಳಲ್ಲಿ ಬಳಸುವ ಅಗತ್ಯ ಬಿಡಿ ಭಾಗಗಳ ತಯಾರಿಕೆಯಲ್ಲಿನ ಪ್ರಗತಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ನುರಿತ ತಜ್ಞರು ಸಂವಾದದಲ್ಲಿ ಚರ್ಚೆ ನಡೆಸುವರು.
72ನೇ ಇಂಡಿಯನ್ ಫೌಂಡ್ರಿ ಕಾಂಗ್ರೆಸ್ ಅಂಡ್ ಐಎಫ್‌ಇಎಕ್ಸ್ 2024 ವಸ್ತು ಪ್ರದರ್ಶನದಲ್ಲಿ 350 ಕ್ಕೂ ಹೆಚ್ಚು ಪ್ರದರ್ಶಕರು ಇತ್ತೀಚಿನ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳನ್ನು ಪ್ರದರ್ಶಿಸುವರು. ವಸ್ತುಗಳು, ಉಪಕರಣಗಳು, ಕರಗುವಿಕೆ, ಅಚ್ಚೊತ್ತುವಿಕೆ, ಪೂರ್ಣಗೊಳಿಸುವಿಕೆ, ತಪಾಸಣೆ, ವಿನಾಶಕಾರಿಯಲ್ಲದ ಪರೀಕ್ಷೆ, ರೊಬೊಟಿಕ್ ಆಟೊಮೇಷನ್ ಮತ್ತು ಸುರಕ್ಷತಾ ಉಪಕರಣಗಳಂತಹ ಯಂತ್ರೋಪಕರಣಗಳನ್ನು ಕಾಣಬಹುದಾಗಿದೆ.
IFEX 2024 Material Exhibition ದೇಶ ವಿದೇಶದ 1500 ಕ್ಕೂ ಹೆಚ್ಚು ನೋಂದಣಿ ಆಗಿರುವ ಪ್ರತಿನಿಧಿಗಳು ಮತ್ತು 25000 ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.