Gopal Krishna Belur ರಿಪ್ಪನ್‌ಪೇಟೆ ಹಾಗೂ ಆನಂದಪುರ ಪೊಲೀಸ್ ಠಾಣೆಗಳಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿಶೇಷ ಅನುದಾನದಲ್ಲಿ ಎರಡು ಬುಲೆರೋ ಜೀಪ್ ನ್ನು ಕೊಡುಗೆಯಾಗಿ ನೀಡಲಾಗಿದೆ.
ಠಾಣೆಯಲ್ಲಿದ್ದ ಜೀಪ್‌ಗಳು ಸಾಕಷ್ಟು ಹಳೆಯದಾಗಿದ್ದವು. ಅಪರಾಧ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಅವಘಡ ಸಂಭವಿಸಿದ ಸ್ಥಳಕ್ಕೆ ತಕ್ಷಣ ಅಧಿಕಾರಿಗಳು ತೆರಳಲು ಸುಸಜ್ಜಿತ ವಾಹನಗಳ ಅಗತ್ಯವಿತ್ತು.
ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಎರಡು ಪೊಲೀಸ್ ಠಾಣೆಗೆ ಬೊಲೆರೋ ವಾಹನವನ್ನು ಶಾಸಕರ ಅನುದಾನದಲ್ಲಿ ಹಸ್ತಾಂತರಿಸಲಾಗಿದೆ.
ರಿಪ್ಪನ್‌ಪೇಟೆಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮಿರೆಡ್ಡಿ ರವರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಕೀ ಹಸ್ತಾಂತರ ಮಾಡಿದರು.
Gopal Krishna Belur ಈ ಸಂಧರ್ಭದಲ್ಲಿ ಹೊಸನಗರ ತಹಶೀಲ್ದಾರ್ ರಶ್ಮಿ, ತೀರ್ಥಹಳ್ಳಿ ಉಪವಲಯದ ಡಿವೈಎಸ್ಪಿ ಗಜಾನನ ವಾಮನ ಸುತಾರ , ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯ್ಕ್ ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ , ಆನಂದಪುರ ಪಿಎಸ್‌ಐ ಯುವರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.