Folk Conference ಚಿಕ್ಕಮಗಳೂರು ಜಾನಪದ ಸಮ್ಮೇಳನಕ್ಕೆ ಯಾದವ್‌ಗೆ ಅಧಿಕೃತ ಆಹ್ವಾನ ಕರ್ನಾಟಕ ಜಾನಪದ ಪರಿಷತ್ತಿನಿಂದ ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಲಕ್ಕವಳ್ಳಿಯಲ್ಲಿ ಫೆ.4 ರಂದು ನಡೆಯಲಿರುವ ದ್ವಿತೀಯ ಜಾನಪದ ಸಮ್ಮೇಳನದ ಪೂರ್ವಾಧ್ಯಕ್ಷರಾಗಿ ಹಿರಿಯ ಗಾಯಕ ಮಲ್ಲಿಕಾರ್ಜುನ್ ಯಾದವ್ ಅವರಿಗೆ ಪರಿಷತ್ತಿನ ಪದಾಧಿಕಾರಿಗಳು ಅಧಿಕೃತ ಆಹ್ವಾನ ನೀಡಿದರು.
ಸಮ್ಮೇಳನಾಧ್ಯಕ್ಷರನ್ನು ಲಕ್ಕವಳ್ಳಿ ಶ್ರೀ ಅಂತರಘಟ್ಟಮ್ಮ ದೇವಾಲಯದಲ್ಲಿ ಭೇಟಿ ಮಾಡಿ ಪರಿಷತ್ತಿನ ತಾಲ್ಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳು ಮಲ್ಲಿಕಾರ್ಜುನ್ ಯಾದವ್ ಅವರನ್ನು ಸನ್ಮಾನಿಸಿ ತಾಂಬೂಲ ನೀಡಿ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡುವಂತೆ ಕೋರಿದರು.
ಈ ವೇಳೆ ಲಕ್ಕವಳ್ಳಿ ಹೋಬಳಿ ಕಜಾಪ ಘಟಕದ ಗೌರವ ಸಲಹೆಗಾರ ಕೆ.ಎಸ್.ರಮೇಶ್ ಮಾತನಾಡಿ ಬಹಳ ವರ್ಷಗಳಿಂದ ಭಜನೆ ಮತ್ತು ಜಾನಪದ ಗೀತೆಗಳನ್ನು ಯಾದವ್ ಅವರು ಆಡುತ್ತಾ ಬಂದಿದ್ದು ಊರಿನ ಅನೇಕ ಯುವಕರಿಗೆ ಮಾರ್ಗದರ್ಶಕರಾಗಿದ್ದು ಇವರ ಸಾಧನೆಯನ್ನು ಗುರುತಿಸಿ ಸರ್ವಾನುಮತದಿಂದ ಆಯ್ಕೆ ಮಾಡಿರು ವುದು ಸಂತೋಷ ಎಂದರು.
ತಾಲ್ಲೂಕು ಕಜಾಪ ಅಧ್ಯಕ್ಷ ಆರ್.ನಾಗೇಶ್ ಮಾತನಾಡಿ ಮೊಬೈಲ್ ಹಾವಳಿಗಳಿಂದ ಜಾನಪದ ಕಲೆ ಅಳಿವಿನ ಅಂಚಿನಲ್ಲಿದ್ದು ಇಂದಿನ ತಲೆಮಾರಿಗೆ ಜಾನಪದ ಕಲೆಗಳನ್ನು ಉಳಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇ ಲಿದೆ. ತರೀಕೆರೆ ತಾಲೂಕಿನಲ್ಲಿ ಇದು ಎರಡನೇ ಸಮ್ಮೇಳನವಾಗಿದ್ದು ಪ್ರಕೃತಿಯ ಮಡಿಲು ಲಕ್ಕವಳ್ಳಿ ಕೇಂದ್ರದಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
Folk Conference ಚಿಕ್ಕಮಗಳೂರು ಜಾನಪದ ಸಮ್ಮೇಳನಕ್ಕೆ ಯಾದವ್‌ಗೆ ಅಧಿಕೃತ ಆಹ್ವಾನ ಹೋಬಳಿ ಘಟಕದ ಅಧ್ಯಕ್ಷ ಪಾಂಡುರoಗ ಮಾತನಾಡಿ ಜಾನಪದ ಕಲೆ ಉಳಿಯಬೇಕೆಂದರೆ ಇಂಥ ಜಾನಪದ ಸಮ್ಮೇಳನಗಳ ಅವಶ್ಯಕತೆಯಿದೆ ಎಂದ ಅವರು ಸಮ್ಮೇಳನದಲ್ಲಿ ಜಿಲ್ಲಾ ಹಾಗೂ ತಾಲೂಕು ಕಲಾತಂಡ ಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಘಟಕದ ಗೌರವಾಧ್ಯಕ್ಷ ಸಿನೋಜ್ ರಾವ್, ಮುಖಂಡರುಗಳಾದ ಪಾಂ ಡುರಂಗ ಜಾದವ್, ಚಿಕ್ಕಣ್ಣ, ಮೂರ್ತಣ್ಣ, ಸುರೇಶ್, ನಾಗೇಶ್ ಜಾದವ್, ವಿಜಯ್ ಕುಮಾರ್, ಪಾರ್ವತಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.