Aam Admi Party ಅರಣ್ಯ ಪ್ರದೇಶದಲ್ಲಿ ಮೂಲ ಸವಲತ್ತುಗಳಿಲ್ಲದ ಪರಿಣಾಮ ಆಹಾರಕ್ಕಾಗಿ ಚಿಕ್ಕಮಗಳೂರು ನಗರ ಹೊರವಲಯಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಎಎಪಿ ಮಾಧ್ಯಮ ಪ್ರತಿನಿಧಿ ಡಾ. ಕೆ.ಸುಂದರಗೌಡ ಹೇಳಿದ್ದಾರೆ.
ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು ವನ್ಯಜೀವಿಗಳ ವಾಸಸ್ಥಾನವನ್ನು ಮಾನವ ಅತಿಕ್ರಮಣ ಪ್ರವೇಶಿಸಿ ಕಂಟಕ ಪ್ರಾಯವಾಗಿರುವ ಪರಿಣಾಮ ಕಾಡಾನೆಗಳು ನಗರದತ್ತ ಧಾವಿಸುತ್ತಿದೆ. ಇದರಿಂದ ಗ್ರಾಮಸ್ಥರು ಪ್ರತಿನಿತ್ಯವು ಸಂಚರಿಸುವುದು ಬಹಳಷ್ಟು ಸಮಸ್ಯೆಯಾಗಿದೆ ಎಂದಿದ್ದಾರೆ.
ಆಹಾರ ಮತ್ತು ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೀಡಿಂಡು ಕಾಡಾನೆಗಳು ನಗರದ ಸುತ್ತ ಮುತ್ತಲು ಬೀಡುಬಿಟ್ಟಿವೆ. ಸಮರ್ಪಕ ಆಹಾರ ಪೂರೈಸದ ಇಲಾಖೆಗಳು ಈ ಬಗ್ಗೆ ಸೂಕ್ತ ಕ್ರಮ ವಹಿಸಿದ್ದರೆ ನಗರದತ್ತ ಆನೆ ಗಳು ಧಾವಿಸುತ್ತಿರಲಿಲ್ಲ. ಹೀಗಾಗಿ ಅರಣ್ಯಗಳಲ್ಲಿ ಅಗೇಶಿಯ, ನೀಲಗಿರಿ ಬೆಳೆಸುವ ಬದಲು ಪ್ರಾಣಿ-ಪಕ್ಷಿಗಳಿಗೆ ಪೂರ ಕವಾದ ಹಣ್ಣು, ಬಿದಿರಿಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಕಳೆದ ಒಂದು ವಾರದಿಂದಲೂ ನಗರ ಹೊರವಲಯಗಳಲ್ಲಿ ಕಾಡಾನೆಗಳು ಬೀಡುಬಿಟ್ಟು ಗ್ರಾಮಸ್ಥರಿಗೆ ಆತಂಕ ಮೂಡಿಸಿದೆ. ಇವುಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿರುವ ಕಾರಣ ಕಾಡಿನಿಂದ ಬರು ವ ಮುನ್ನವೇ ತಡೆಹಿಡಿಯಲು ಮುನ್ನೆಚ್ಚರಿಕಾ ಕ್ರಮ ವಹಿಸಿದರೆ ಮಾತ್ರ ಸಾರ್ವಜನಿಕರು ಹಾಗೂ ಅರಣ್ಯ ಇಲಾಖೆ ನೆಮ್ಮದಿಯಿರಲು ಸಾಧ್ಯ ಎಂದು ತಿಳಿಸಿದರು.
Aam Admi Party ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯವರು ಶಾಶ್ವತವಾಗಿ ಕಾಡಾನೆಗಳು ಸೆರೆಹಿಡಿದು ಕಾಡಿಗೆ ಬಿಡುವ ಕೆಲಸ ಮಾಡಬೇಕೇ ಹೊರತು ಇಲ್ಲಿಂದ ಬೇರೆಡೆಗೆ ಓಡಿಸುವ ಕಾರ್ಯದಲ್ಲಿ ತೊಡಗಿದರೆ ಏನು ಪ್ರಯೋಜನವಿಲ್ಲ. ಇದ ರಿಂದಾಗಿ ಸಾರ್ವಜನಿಕರಿಗೆ ಅನಾಹುತಗಳು ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ.