Ram Mandir ಅಯೋಧ್ಯೆಯ ಶ್ರೀರಾಮ ಮಂದಿರವು ತಿರುಪತಿ, ವ್ಯಾಟಿಕನ್, ಹಾಗೂ ಮೆಕ್ಕಾ ವನ್ನು ಮೀರಿಸಿ ವಾರ್ಷಿಕವಾಗಿ ಐದು ಕೋಟಿ ಪ್ರವಾಸಿಗರನ್ನು ಸೆಳೆಯುವ ಸಾಧ್ಯತೆ ಇದೆ. ಪ್ರಸ್ತುತ ಬೆಳವಣಿಗೆಗಳನ್ನು ನೋಡಿದರೆ, ವಿಶ್ವದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿ ಅಯೋಧ್ಯೆ ಹೊರಹೊಮ್ಮಲಿದೆ ಎಂದು ಉತ್ತರ ಪ್ರದೇಶದ ಪ್ರವಾಸೋದ್ಯಮ ಸಚಿವ ಜೈವಿರ್ ಸಿಂಗ್ ಅವರು ಹೇಳಿದ್ದಾರೆ.
ಮುಂದಿನ 2 ರಿಂದ 3 ವರ್ಷಗಳಲ್ಲಿ ಧಾರ್ಮಿಕ ಪ್ರವಾಸೋದ್ಯಮದಿಂದ ರಾಜ್ಯವು ಹೆಚ್ಚಿನ ಆದಾಯದ ಕೊಡುಗೆಯನ್ನು ನಿರೀಕ್ಷಿಸಿದೆ. ಜನವರಿ ಕೊನೆಯ ವಾರದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಆಗುವ ಸಾಧ್ಯತೆ ಇದೆ.
ತಿರುಪತಿ ದೇವಸ್ಥಾನವು ವಾರ್ಷಿಕ ಮೂರರಿಂದ ನಾಲ್ಕು ಕೋಟಿ ಪ್ರವಾಸಿಗರನ್ನು ಹಾಗೂ ಜಾಗತಿಕವಾಗಿ ವ್ಯಾಟಿಕನ್ ನಗರವು ಸುಮಾರು 90 ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇನ್ನು ಮೆಕ್ಕಾದಲ್ಲಿ ವಾರ್ಷಿಕವಾಗಿ ಸುಮಾರು ಎರಡು ಕೋಟಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
Ram Mandir ಜಾಗತಿಕ ಸಂಸ್ಥೆ ಜೆಫರೀಶ್ ಇತ್ತೀಚಿನ ವರದಿಯ ಪ್ರಕಾರ ರಾಮನ ಜನ್ಮಸ್ಥಳವು ವಾರ್ಷಿಕವಾಗಿ ಐದು ಕೋಟಿ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಹೊಸ ವಿಮಾನ ನಿಲ್ದಾಣ, ನವೀಕರಿಸಿದ ರೈಲು ನಿಲ್ದಾಣ, ಸುಧಾರಿತ ರಸ್ತೆ ಸಂಪರ್ಕ ಹಾಗೂ ಹೆಚ್ಚಿನದನ್ನು ಒಳಗೊಂಡಿರುವ 10 ಬಿಲಿಯನ್ ಡಾಲರ್ ಯೋಜನೆಯಿಂದ ಪ್ರವಾಸೋದ್ಯಮ ವೃದ್ಧಿಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.